ಅಶಕ್ತರಿಗೆ ಉಳ್ಳವರು ನೆರವಾಗಬೇಕು: ಶಾಸಕ ಎಂ.ಅಶ್ವಿನ್‍ಕುಮಾರ್
ಮೈಸೂರು ಗ್ರಾಮಾಂತರ

ಅಶಕ್ತರಿಗೆ ಉಳ್ಳವರು ನೆರವಾಗಬೇಕು: ಶಾಸಕ ಎಂ.ಅಶ್ವಿನ್‍ಕುಮಾರ್

May 5, 2020

ತಿ.ನರಸೀಪುರ, ಮೇ 4(ಎಸ್‍ಕೆ)-ಲಾಕ್ ಡೌನ್‍ನಿಂದ ಸಂಕಷ್ಟಕ್ಕೀಡಾಗಿರುವ ಅಶಕ್ತರಿಗೆ ಉಳ್ಳವರು ನೆರವಾಗಬೇಕು ಎಂದು ಶಾಸಕ ಎಂ.ಅಶ್ವಿನ್‍ಕುಮಾರ್ ಮನವಿ ನೀಡಿದರು.

ಪಟ್ಟಣದ ಭಾರತ್ ಗ್ಯಾಸ್ ಏಜೆನ್ಸಿ ಯಿಂದ ಅಶಕ್ತರಿಗೆ ನೀಡಲಾಗುವ ದಿನಸಿ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ತಾಲೂಕು ಕಚೇರಿ ಮುಂಭಾಗ ಚಾಲನೆ ನೀಡಿ ಅವರು ಮಾತನಾಡಿದರು. ಕಳೆದ 50 ದಿನಗ ಳಿಂದಲೂ ಕೊರೊನಾ ಹಿನ್ನೆಲೆಯಲ್ಲಿ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಬಡವರು, ಅಶಕ್ತರು ಹಾಗೂ ನಿರಾಶ್ರಿತರು ಆಹಾರದ ಕೊರತೆಯಿಂದ ಬಳಲುತ್ತಿದ್ದಾರೆ. ಅಲ್ಲದೆ ಬಹುತೇಕ ಬಡವರು ಕೂಲಿ ಕಾರ್ಮಿಕ ರಾಗಿರುವುದರಿಂದ ಕೆಲಸವಿಲ್ಲದೇ ಆರ್ಥಿಕ ಸಂಕಷ್ಟಕ್ಕೀಡಾಗಿದ್ದಾರೆ. ಈ ಸಂದರ್ಭದಲ್ಲಿ ಮಾನವೀಯ ದೃಷ್ಟಿಯಿಂದ ಉಳ್ಳವರು ಹಾಗೂ ಉದ್ಯಮಿಗಳು ಸಂಕಷ್ಟದಲ್ಲಿವರ ನೆರವಿಗೆ ನಿಲ್ಲುವ ಮೂಲಕ ಸಹಾಯ ಹಸ್ತ ಚಾಚಬೇಕು ಎಂದು ಕೋರಿದರು. ಕೊರೊನಾ ಮಹಾ ಮಾರಿ ರಾಜ್ಯದಲ್ಲಿ ಹಂತ ಹಂತವಾಗಿ ಕ್ಷೀಣಿ ಸುತ್ತಿರುವಾಗ ನಾವು ಇನ್ನು ಎಚ್ಚರಿಕೆಯಿಂ ದಿರಬೇಕು. ಕೊರೊನಾ ಸೋಂಕನ್ನು ಸಂಪೂರ್ಣ ವಾಗಿ ಹಿಮ್ಮೆಟ್ಟುವ ತನಕ ಸರ್ಕಾರದ ಆದೇಶವನ್ನು ಕಟ್ಟು ನಿಟ್ಟಾಗಿ ಪಾಲನೆ ಮಾಡಬೇಕೆಂದರು. ಭಾರತ್ ಗ್ಯಾಸ್‍ನ ಷಹನಾಜ್ ರಿಯಾಜ್ ಅವರು ಬಡ ಜನತೆಯ ಸಂಕಷ್ಟಕ್ಕೆ ನೆರವಾಗಿದ್ದು ಅವರಿಗೆ ತಾಲೂಕು ಆಡಳಿತ ಆಭಾರಿ ಯಾಗಿದೆ ಎಂದು ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ವೇಳೆ 300 ಮಂದಿಗೆ ಸಿದ್ಧಪಡಿಸಲಾಗಿದ್ದ ದಿನಸಿ ಕಿಟ್ ಗಳನ್ನು ಆಡಳಿತಕ್ಕೆ ಹಸ್ತಾಂತರಿಸಲಾಯಿತು.

Translate »