ದೇಗುಲ ನೌಕರರ ಸಂಘದ ಅಧ್ಯಕ್ಷರಿಂದ ದಿನಸಿ ವಿತರಣೆ
ಮೈಸೂರು ಗ್ರಾಮಾಂತರ

ದೇಗುಲ ನೌಕರರ ಸಂಘದ ಅಧ್ಯಕ್ಷರಿಂದ ದಿನಸಿ ವಿತರಣೆ

May 5, 2020

ನಂಜನಗೂಡು ಮೇ 4(ರವಿ)-ನಗರದ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ನೌಕರರ ಸಂಘದ ಅಧ್ಯಕ್ಷ ಶ್ರೀಕಂಠ ಅವರು ಸೋಮವಾರ ದೇವಾಲಯದ 250 ಮಂದಿ ನೌಕರರಿಗೆ ದಿನಸಿ ಕಿಟ್ ವಿತರಿಸಿದರು.

ನಂಜನಗೂಡಿನ ಶ್ರೀಕಂಠೇಶ್ವರ ದೇವಾ ಲಯದ ಮುಂಭಾಗ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ರೈತ ಸಂಘದ ಅಧ್ಯಕ್ಷ ವಿದ್ಯಾಸಾಗರ್, ಸಂಘದ ಅಧ್ಯಕ್ಷ ಶ್ರೀಕಂಠ ತನ್ನ ಉಳಿತಾಯದ ಹಣದಲ್ಲಿ ತಮ್ಮ ಸಹೋದ್ಯೋಗಿ-ನೌಕರ ರಿಗೆ ಸಂಕಷ್ಟ ಕಾಲದಲ್ಲಿ ದಿನಸಿ ಹಾಗೂ ಅಗತ್ಯ ವಸ್ತು ಗಳನ್ನು ವಿತರಿಸುವ ಮೂಲಕ ಮಾನವೀಯತೆ ಮೆರೆದಿ ದ್ದಾರೆ ಎಂದರು. ಕಾರ್ಯಕ್ರಮದಲ್ಲಿ ದೇವಾಲಯದ ಆಗಮಿಕರಾದ ನಾಗಚಂದ್ರ ದಿಕ್ಷೀತ್, ಮೋಹನ್, ಕೃಷ್ಣ ಜೋಯಿಸ್, ಹಿಮ್ಮಾವು ರಘು, ಸತೀಶ್ ರಾವ್ ಇದ್ದರು.

 

 

 

 

 

Translate »