ನಂಜನಗೂಡಲ್ಲಿ ಮದ್ಯ ಖರೀದಿ ಜೋರು
ಮೈಸೂರು ಗ್ರಾಮಾಂತರ

ನಂಜನಗೂಡಲ್ಲಿ ಮದ್ಯ ಖರೀದಿ ಜೋರು

May 5, 2020

ನಂಜನಗೂಡು, ಮೇ 4 (ರವಿ)- ಸೋಮವಾರ ದಿಂದ ರಾಜ್ಯ ಸರ್ಕಾರ ಮದ್ಯ ಮಾರಾಟಕ್ಕೆ ಗ್ರೀನ್ ಸಿಗ್ನಲ್ ಕೊಟ್ಟ ಹಿನ್ನೆಲೆ ಯಲ್ಲಿ ನಂಜನಗೂಡು ನಗರದ ಮದ್ಯದ ಅಂಗಡಿ ಮಾಲೀಕರು ಪೂಜೆ ಸಲ್ಲಿಸಿ ವ್ಯಾಪಾರ ಆರಂಭಿಸಿದರೆ, ಸರತಿ ಸಾಲಿನಲ್ಲಿ ಕಾದು ಮದ್ಯಪ್ರಿಯರಿಗೆ ಮದ್ಯ ಖರೀದಿಸಿದರು.

ಲಾಕ್‍ಡೌನ್‍ನಿಂದ ತಿಂಗಳಿಂದಲೂ ಮದ್ಯ ಪ್ರಿಯರಿಗೆ ಮದ್ಯ ಸಿಗದೆ ಚಿಂತಿತರಾಗಿದ್ದರು. ಇಂದಿನಿಂದ ಸರ್ಕಾರವೇ ಮದ್ಯ ಮಾರಾಟಕ್ಕೆ ಅವಕಾಶ ನೀಡಿದ್ದರಿಂದ ಬೆಳಿಗ್ಗೆಯಿಂದ ವೈನ್ ಶಾಪ್‍ಗಳ ಮುಂದೆ ಸರತಿಯಲ್ಲಿ ಸಾಗಿ ಮದ್ಯ ಖರೀದಿಸಿದ ಮದ್ಯ ಪ್ರಿಯರು ಬಾಟಲು ಗಳನ್ನು ಹಿಡಿದು, ಹಬ್ಬದಂತೆ ಸಂಭ್ರಮಿಸಿದ ದೃಶ್ಯಗಳು ಸಾಮಾನ್ಯವಾಗಿತ್ತು. ಎಲ್ಲಾ ಅಂಗಡಿ ಗಳಲ್ಲಿ ಜನಸಂದಣಿ ಆಗದಂತೆ ಬ್ಯಾರಿಕೇಡ್ ನಿರ್ಮಿಸಿ ಮುಂಜಾಗ್ರತೆ ಕೈಗೊಳ್ಳಲಾಗಿತ್ತು. ಕೆಲ ವೈನ್ಸ್‍ಸ್ಟೋರ್ಸ್ ಬಳಿ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಡಬೇಕಾಯಿತು.

Translate »