ಹುಣಸೂರಲ್ಲಿ ಲಾಕ್‍ಡೌನ್ ನಿರ್ಬಂಧ ಸಡಿಲಿಕೆ: ತಹಸೀಲ್ದಾರ್
ಮೈಸೂರು ಗ್ರಾಮಾಂತರ

ಹುಣಸೂರಲ್ಲಿ ಲಾಕ್‍ಡೌನ್ ನಿರ್ಬಂಧ ಸಡಿಲಿಕೆ: ತಹಸೀಲ್ದಾರ್

May 5, 2020

ಹುಣಸೂರು, ಮೇ 4(ಕೆಕೆ)-ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ದೇಶಾ ದ್ಯಂತ ವಿಧಿಸಿದ ಸತತ 42 ದಿನಗಳ ಲಾಕ್ ಡೌನ್ ನಿರ್ಬಂಧದ ಎರಡು ಹಂತ ಗಳನ್ನು ಮುಗಿಸಿ, ಸೋಮವಾರದಿಂದ ಮೂರನೇ ಹಂತ ಪ್ರಾರಂಭವಾಗಿದೆ. ಜಿಲ್ಲಾಡಳಿತದ ನಿರ್ದೇಶನದಂತೆ ಲಾಕ್ ಡೌನ್ ನಿರ್ಬಂಧದಲ್ಲಿ ಕೆಲ ಸಡಿಲಿಕೆ ಮಾಡಲಾಗಿದೆ ಎಂದು ತಹಸೀಲ್ದಾರ್ ಬಸವರಾಜು ಮಾಹಿತಿ ನೀಡಿದರು.

ನಗರದ ತಾಪಂ ಸಭಾಂಗಣದಲ್ಲಿ ಇಂದು ತಾಲೂಕು ಮಟ್ಟದ ಅಧಿಕಾರಿಗಳ ಟಾಸ್ಕ್ ಫೋರ್ಸ್ ಸಭೆಯಲ್ಲಿ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, 3ನೇ ಹಂತದ ಲಾಕ್‍ಡೌನ್‍ನಲ್ಲಿ ಸೊಂಕು ಹರಡ ದಂತೆ ನಿಯಮಗಳನ್ನು ರೂಪಿಸಿ ಜನ-ಸಾಮಾನ್ಯರಿಗೆ ಸಡಿಲಿಕೆ ನೀಡುವುದು ಹಾಗೂ ಆರ್ಥಿಕ ಪುನಶ್ಚೇತನಕ್ಕಾಗಿ ವಾಣಿಜ್ಯೋ ದಮ, ಆರ್ಥಿಕ ಚಟುವಟಿಕೆಗಳಿಗೆ ಷರತ್ತು ಬದ್ಧ ಅವಕಾಶ ಕಲ್ಪಿಸಲಾಗುವುದು ಎಂದರು.

ನಿತ್ಯ ಬಳಕೆಯ ಪಡಿತರ, ದಿನಸಿ ಪದಾರ್ಥಗಳು, ಹಾಲು-ತರಕಾರಿ, ಔಷಧಿ ಅಂಗಡಿಗಳ ಜೊತೆಗೆ ಇತರೆ ಅಂಗಡಿ ಗಳನ್ನು ಕೆಲ ನಿರ್ಬಂಧಗಳ ಮೇರೆಗೆ ತೆರೆಯಲು ಅವಕಾಶ ಕಲ್ಪಿಸಲಾಗುವುದು. ವಾಣಿಜ್ಯ ಮಳಿಗೆಗಳ ಮುಂದೆ ಸಾಮಾ ಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಗುರುತುಗಳನ್ನು ಹಾಕಿ, ಐದು ಜನರಿಗಿಂತ ಹೆಚ್ಚಿಗೆ ಇರದಂತೆ ವ್ಯಾಪಾರಿಗಳು ಗಮನ ಹರಿಸಬೇಕು. ಪ್ರತಿ ಅಂಗಡಿ ಮಾಲೀಕರೂ ಸ್ಯಾನಿಟೈಸರ್ ಬಳಸಬೇಕು. ಬರುವ ಗ್ರಾಹ ಕರಿಗೂ ನೀಡಬೇಕು. ಗ್ರಾಹಕರಿಗೆ ಕಡ್ಡಾಯವಾಗಿ ಮಾಸ್ಕ್ ಹಾಕಿಕೊಂಡು ಬರಲು ತಿಳಿಸಬೇಕು. ಇಲ್ಲದಿದ್ದರೆ ಯಾವುದೇ ಪದಾರ್ಥಗಳನ್ನು ನೀಡ ಬಾರದು. ಇದನ್ನು ಕಾಯ್ದುಕೊಳ್ಳದಿದ್ದರೆ ಅಂಗಡಿಯವರ ಮೇಲೆ ಕ್ರಮ ಕೈಗೊಳ್ಳ ಲಾಗುವುದು ಎಂದು ಎಚ್ಚರಿಸಿದರು.

ಅತ್ಯವಶ್ಯಕವಾಗಿರುವ ದಿನಸಿ ಪದಾರ್ಥ ಗಳು, ತರಕಾರಿ ಹಾಗೂ ಹಾಲು-ಹಣ್ಣು ವ್ಯಾಪಾರಕ್ಕೆ ಬೆಳಿಗ್ಗೆ 6ರಿಂದ ಮಧ್ಯಾಹ್ನ 2 ಗಂಟೆವರೆಗೆ ಅವಕಾಶವಿತ್ತು. ಈಗಲೂ ಸಹ ಇದೇ ನಿಗದಿತ ಸಮಯ ಮುಂದು ವರೆಯಲಿದ್ದು. ಸದ್ಯ ಅವಶ್ಯಕವಲ್ಲದ ವಸ್ತು ಗಳ ವ್ಯಾಪಾರಕ್ಕೂ ಅವಕಾಶ ನೀಡಲಾಗು ತ್ತಿದೆ. ಇಂದಿನಿಂದ ಸಾರ್ವಜನಿಕರಿಗೆ ಎಲ್ಲಾ ರೀತಿಯ ಪದಾರ್ಥಗಳು ಸಿಗಲಿವೆ. ಒಂದು ವಾರದ ನಂತರ ಪರಿಸ್ಥಿತಿ ನೋಡಿ ಕೊಂಡು ಮುಂದಿನ ದಿನಗಳಲ್ಲಿ ಮತ್ತಷ್ಟು ಸಡಿಲಿಕೆ ಮಾಡಲಾಗುವುದು ಎಂದರು.

ಮಾಸ್ಕ್ ಧರಿಸದಿದ್ದರೆ ದಂಡ: ಇನ್ನು ಮುಂದೆ ಮನೆಯಿಂದ ಹೊರ ಬರಬೇಕಾ ದರೆ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧÀರಿಸಬೇಕು ಹಾಗೂ ಎಲ್ಲೆಡೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮಾಸ್ಕ್ ಧÀರಿಸದೆ ಹೊರ ಬಂದರೆ ನಗರ ಪ್ರದೇಶ ದಲ್ಲಿ 200 ರೂ., ಗ್ರಾಮಾಂತರ ಪ್ರದೇಶದಲ್ಲಿ 100 ರೂ. ಸ್ಥಳದಲ್ಲೇ ದಂಡ ವಿಧಿಸಲಾಗು ವುದು. ಬೈಕ್‍ನಲ್ಲಿ ಒಬ್ಬರು, ಕಾರಿನಲ್ಲಿ ಚಾಲಕ ಸೇರಿ ಇಬ್ಬರು ಮಾತ್ರ ಪ್ರಯಾಣಿಸಬಹುದು ಎಂದು ಹೇಳಿದರು.

ಮದ್ಯ ಮಾರಾಟಕ್ಕೆ ಅವಕಾಶ: ವೈನ್ ಶಾಪ್ ಮತ್ತು ಎಂಎಸ್‍ಐಎಲ್ ಮೂಲಕ ಪ್ರತಿದಿನ ಬೆಳಿಗ್ಗೆ 9ರಿಂದ ರಾತ್ರಿ 7ರ ತನಕ ಮದ್ಯ ವ್ಯಾಪಾರಕ್ಕಾಗಿ ಅವಕಾಶ ನೀಡ ಲಾಗಿದೆ. ಮದ್ಯಂಗಡಿಯವರೇ 5 ಜನ ಸ್ವಯಂ ಸೇವಕರನ್ನು ನೇಮಿಸಿಕೊಂಡು ಜನಸಂದಣಿಯಾಗದಂತೆ ಎಚ್ಚರ ವಹಿಸಿ ಬೇಕು. ಸ್ಯಾನಿಟೈಸರ್ ಬಳಕೆ ಸೇರಿದಂತೆ ಮುಂಜಾಗ್ರತೆ ವಹಿಸಬೇಕು ಎಂದು ತಹಸೀಲ್ದಾರ್ ಬಸವರಾಜು ತಿಳಿಸಿದರು.

ಹೊರ ಜಿಲ್ಲೆ, ರಾಜ್ಯದವರಿಗೆ ವಿನಾ ಯಿತಿ: ಬೇರೆ ರಾಜ್ಯ, ಜಿಲ್ಲೆಗಳಿಂದ ವ್ಯಾಪಾರ, ಹಬ್ಬ ಹರಿದಿನ ಹಾಗೂ ಇನ್ನಿ ತರೆ ಕಾರ್ಯಕ್ರಮಗಳಿಗೆ ತಾಲೂಕಿಗೆÉ ಬಂದಿರುವ ಹಾಗೂ ತಾಲೂಕಿನಿಂದ ಹೊರ ಹೋಗಿರುವ ಅನೇಕ ಜನರು ಅತಂತ್ರ ರಾಗಿದ್ದು, ಅಂತಹವರನ್ನು ತವರು ಸೇರಿ ಸಲು ಭಾನುವಾರದವರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ಅಧಿಕಾರವಿತ್ತು. ಆದರೆ ಲಾಕ್‍ಡೌನ್ ಎರಡನೇ ಹಂತ ಮುಗಿದು, ಸೋಮವಾರದಿಂದ ಮೂರನೇ ಹಂತ ಆರಂಭವಾಗಿದ್ದು, ಈಗ ಈ ಅಧಿಕಾರವನ್ನು ಜಿಲ್ಲಾಧಿಕಾರಿಗೆ ವಹಿಸಲಾ ಗಿದೆ. ಇನ್ನು ಮೂರ್ನಾಲ್ಕು ದಿನಗಳಲ್ಲಿ ಜಿಲ್ಲಾಧಿಕಾರಿಗಳು ಈ ಬಗ್ಗೆ ರೂಪುರೇಷೆ ಸಿದ್ಧಪಡಿಸಿ, ನಿರ್ಣಯ ಕೈಗೊಳ್ಳಲಿದ್ದಾರೆ ಎಂದರು. ಸಭೆಯಲ್ಲಿ ತಾಪಂ ಕಾರ್ಯ ನಿರ್ವಹಣಾಧಿಕಾರಿ ಗಿರೀಶ್, ತಾಲೂಕು ಆರೋಗ್ಯಾಧಿಕಾರಿ ಡಾ.ಕೀರ್ತಿಕುಮಾರ್, ವೃತ ನಿರಿಕ್ಷಕ ಪೂವಯ್ಯ, ಪೌರಾಯುಕ್ತ ಮಂಜುನಾಥ್ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Translate »