ಎತ್ತಿನಗಾಡಿ ಕೂಲಿ ಕಾರ್ಮಿಕರ ಸಂಘದಿಂದ ದಿನಸಿ ಕಿಟ್ ವಿತರಣೆ
ಮೈಸೂರು ಗ್ರಾಮಾಂತರ

ಎತ್ತಿನಗಾಡಿ ಕೂಲಿ ಕಾರ್ಮಿಕರ ಸಂಘದಿಂದ ದಿನಸಿ ಕಿಟ್ ವಿತರಣೆ

May 5, 2020

ತಿ.ನರಸೀಪುರ, ಮೇ 4(ಎಸ್‍ಕೆ)-ಕೊರೊನಾ ಸೋಂಕು ತಡೆಗಟ್ಟಲು ಹಗಲಿರುಳು ಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆಯರು ಹಾಗೂ ದಾದಿಯರಿಗೆ ಎತ್ತಿನಗಾಡಿ ಕೂಲಿ ಕಾರ್ಮಿಕರ ಸಂಘದ ಅಧ್ಯಕ್ಷ ತಿರುಮಕೂಡಲು ಪುಟ್ಟು ದಿನಸಿ ಕಿಟ್ ವಿತರಿಸಿದರು.

ತಿರುಮಕೂಡಲಿನ ಮಂಟೇಸ್ವಾಮಿ ದೇವಸ್ಥಾನದ ಮುಂಭಾಗ ಕಿಟ್‍ಗಳನ್ನು ಗ್ರಾಮದ ಮುಖಂಡರ ಸಮ್ಮುಖದಲ್ಲಿ ವಿತರಿಸಿ ಮಾತನಾಡಿದ ಅವರು, ಕೊರೊನಾ ವಾರಿಯರ್ಸ್‍ಗಳಂತೆ ಇವರು ಸಲ್ಲಿಸಿರುವ ಸೇವೆ ಸ್ಮರಣೀಯ ಎಂದು ಶ್ಲಾಘಿಸಿದರು.

ಸಮುದಾಯ ಆರೋಗ್ಯ ಅಧಿಕಾರಿ ಎಸ್. ರೂಪಶ್ರೀ ಮಾತನಾಡಿ, ಗ್ರಾಮದ ಮುಖಂಡರು ನಮ್ಮ ಆತ್ಮಸ್ಥೈರ್ಯ ಹೆಚ್ಚಿಸಲು ಆಹಾರದ ಕಿಟ್ ನೀಡಿ ಮಾನವೀಯತೆ ಮೆರೆದಿದ್ದಾರೆ. ಇವರ ಈ ಸಹಕಾರದಿಂದ ನಾವು ಮತ್ತಷ್ಟು ಹುಮ್ಮಸ್ಸಿನಿಂದ ಕೆಲಸ ಮಾಡುವಂತಾಗಿದೆ ಎಂದು ಹರ್ಷ ವ್ಯಕ್ತಪಡಿ ಸಿದರು. ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಮಂಜುಳಾ, ಆಶಾ ಕಾರ್ಯಕರ್ತೆ ಸಾಕಮ್ಮ, ಮಮತಾ, ಜ್ಯೋತಿ, ನೇತ್ರಾವತಿ, ಗ್ರಾಪಂ ಮಾಜಿ ಸದಸ್ಯೆ ನಾಗರತ್ನಮ್ಮ, ಲಕ್ಷ್ಮಣ, ಪ್ರಸಾದ್, ಮಹೇಶ್, ನಾಗೇಶ್, ನವೀನ್, ಚಂದ್ರು, ಪುನೀತ್, ಮಾದೇಶ್, ಪ್ರದೀಪ್, ನಂದ ಮತ್ತಿತರರು ಉಪಸ್ಥಿತರಿದ್ದರು.

Translate »