ಬಾಬೂಜಿ ಮತ್ತಿತರ ದಲಿತ ನಾಯಕರ  ಐದು ಸಂಪುಟ ವರ್ಷಾಂತ್ಯಕ್ಕೆ ಪ್ರಕಟ
ಮೈಸೂರು

ಬಾಬೂಜಿ ಮತ್ತಿತರ ದಲಿತ ನಾಯಕರ ಐದು ಸಂಪುಟ ವರ್ಷಾಂತ್ಯಕ್ಕೆ ಪ್ರಕಟ

September 5, 2021

ಮೈಸೂರು,ಸೆ.4(ಪಿಎಂ)-ಹಿಂದೂ ಧರ್ಮ ದಲ್ಲಿದ್ದುಕೊಂಡೇ ಭಾರತದಲ್ಲಿ ಸಮ ಸಮಾಜ ನಿರ್ಮಾಣದ ಮೂಲಕ ಅಸ್ಪøಶ್ಯತೆ ಮತ್ತು ಶೋಷಣೆ ಮುಕ್ತ ಸಮಾಜ ರೂಪಿ ಸುವಲ್ಲಿ ಡಾ.ಬಾಬೂ ಜಗಜೀವನರಾಮ್ ಕೊಡುಗೆ ಅಪಾರ. ಬಾಬು ಜಗಜೀವನ ರಾಮ್ ಸೇರಿದಂತೆ ಪ್ರಮುಖ ದಲಿತ ನಾಯ ಕರ ಕುರಿತ 5 ಸಂಪುಟಗಳನ್ನು ನವೆಂ ಬರ್-ಡಿಸೆಂಬರ್ ವೇಳೆಗೆ ಪ್ರಕಟಿಸಲು ಕ್ರಮ ವಹಿಸುವುದಾಗಿ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ತಿಳಿಸಿದರು.

ಮೈಸೂರು ವಿವಿಯ ಡಾ.ಬಾಬೂ ಜಗ ಜೀವನರಾಮ್ ಅಧ್ಯಯನ, ಸಂಶೋ ಧನಾ ಮತ್ತು ವಿಸ್ತರಣಾ ಕೇಂದ್ರದ ವತಿ ಯಿಂದ ಕೇಂದ್ರದ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ `ಯಶಸ್ಸಿನ ಪ್ರತೀಕ ಬಾಬೂ ಜಗಜೀವನರಾಮ್’ ವಿಚಾರ ಸಂಕಿರಣ ಉದ್ಘಾಟಿಸಿದ ಅವರು, ಬಾಬೂ ಜಗಜೀವನ ರಾಮ್ ಕೇಂದ್ರದಿಂದ 5 ಸಂಪುಟಗಳ ರಚನೆ ಈಗಾಗಲೇ ಪೂರ್ಣಗೊಂಡಿದೆ ಎಂದರು.

ಬಾಬೂ ಜಗಜೀವನರಾಮ್ ಭಾರತ ಕಂಡ ಶ್ರೇಷ್ಠ ರಾಜಕೀಯ ಮುತ್ಸದ್ದಿ. ಸುದೀರ್ಘ ಕಾಲ ಕೇಂದ್ರ ಸಚಿವರಾಗಿದ್ದ ಅವರು ಉಪ ಪ್ರಧಾನಿಯಾಗಿಯೂ ಶ್ರೇಷ್ಠ ಸೇವೆ ಸಲ್ಲಿಸಿ ದ್ದಾರೆ. ಆಧುನಿಕ ಭಾರತದ ರೂವಾರಿ ಗಳಲ್ಲಿ ಅವರೂ ಒಬ್ಬರು ಎಂದು ಸ್ಮರಿಸಿದರು.
ಮಹಾತ್ಮ ಗಾಂಧೀಜಿಯವರಿಂದ `ಪುಟ ಕ್ಕಿಟ್ಟ ಅಪ್ಪಟ ಚಿನ್ನ’ ಎಂದೇ ಬಣ್ಣಿಸಲ್ಪಟ್ಟ ಅವರು ಶೋಷಿತ ಮತ್ತು ದಲಿತ ಸಮು ದಾಯದ ಧ್ವನಿಯಾಗಿದ್ದರು. ಶೋಷಿತ ಸಮಾಜ ದಿಂದ ಬಂದವರಿಗೆ ಮಾನವೀಯತೆ, ಹೃದಯವಂತಿಕೆ ಮತ್ತು ಸಮಾಜವನ್ನು ಮುನ್ನಡೆಸುವ ಚಿಂತನೆ ಇರುತ್ತದೆ ಎಂಬು ದಕ್ಕೆ ಬಾಬೂಜಿ ಸಾಕ್ಷಿಯಾಗಿದ್ದಾರೆ ಎಂದರು.

ಸ್ವಾತಂತ್ರ್ಯ ಹೋರಾಟಗಾರರೂ ಆದ ಅವರು ಅಸ್ಪøಶ್ಯತೆಯ ಕಹಿ ಅನುಭವದ ನಡುವೆಯೂ ಬನಾರಸ್ ಮತ್ತು ಕೊಲ್ಕತಾ ವಿವಿಗಳಲ್ಲಿ ಪದವಿ ಪಡೆದರು. ಶ್ರೇಷ್ಠ ಸಂಸ ದೀಯ ಪಟುವಾಗಿ ಅರ್ಧ ಶತಮಾನ ಕಾಲ ಭಾರತದ ರಾಜಕಾರಣದಲ್ಲಿ ತಮ್ಮದೇ ವಿಶಿಷ್ಟ ಛಾಪು ಮೂಡಿಸಿದ್ದಾರೆ. ಸ್ವಾತಂತ್ರ್ಯ ಭಾರತ ದಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳ ರಾಜ ಕಾರಣದ ಮುಂದುವರಿಕೆಯ ನಾಯಕತ್ವ ವಹಿಸಿದ್ದರು. ತಮ್ಮ ದೀರ್ಘಾವಧಿಯ ಸಾರ್ವಜನಿಕ ಜೀವನದಲ್ಲಿ ಎಲ್ಲಾ ವರ್ಗ ಗಳಿಂದಲೂ ಅಪಾರ ಗೌರವ ಪಡೆದಿ ದ್ದರು ಎಂದು ತಿಳಿಸಿದರು.

ಬಾಬೂ ಜಗಜೀವನರಾಮ್ ಅವರು 35 ವರ್ಷ ಸತತವಾಗಿ ಕೇಂದ್ರ ಸಚಿವ ರಾಗಿ ರಾಜಕಾರಣದಲ್ಲಿ ದಾಖಲೆ ಬರೆ ದಿದ್ದಾರೆ. ತಮ್ಮ ರಾಜಕೀಯ ಜೀವನದಲ್ಲಿ ಸದಾ ಮುಂಚೂಣಿ ನಾಯಕರಾಗಿದ್ದ ಅವರು, ಸಂಪುಟದಲ್ಲಿ ಯಾವುದೇ ಖಾತೆ ನೀಡಿದರೂ ಸಮರ್ಥವಾಗಿ ನಿಭಾ ಯಿಸುವ ಸಾಮಥ್ರ್ಯ ಹೊಂದಿದ್ದರು. ಅವರ `ಕ್ಯಾಸ್ಟ್ ಚಾಲೆಂಜ್ ಇನ್ ಇಂಡಿಯಾ’ ಕೃತಿಯು ತನ್ನದೇ ವೈಶಿಷ್ಟ್ಯತೆ ಹೊಂದಿದೆ. ಜಾತಿಯ ವಿರಾಟ್ ಸ್ವರೂಪ ವನ್ನು ಶಾಸ್ತ್ರೀಯವಾಗಿ ವಿಶ್ಲೇಷಿಸುವ ಜೊತೆಗೆ ಸಮಾಜದ ಗೊಡ್ಡು ಮೌಲ್ಯ ಹಾಗೂ ಕಂದಾಚಾರಗಳ ಬಗ್ಗೆ ಸ್ಪಷ್ಟ ವಿಚಾರಗಳನ್ನು ಅನಾವರಣಗೊಳಿಸಿದ್ದಾರೆ ಎಂದರು.

ಮೈಸೂರು ವಿವಿ ಡಾ.ಬಿ.ಆರ್. ಅಂಬೇ ಡ್ಕರ್ ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರೊ.ಜೆ.ಸೋಮಶೇಖರ್, ಕೇಂದ್ರದ ನಿರ್ದೇಶಕ ಪ್ರೊ.ಕೆ.ಸದಾಶಿವ, ಸಂದರ್ಶಕ ಪ್ರಾಧ್ಯಾಪಕ ಪ್ರೊ.ಸಿ.ರಾಮಸ್ವಾಮಿ, ಸಂಶೋ ಧನಾ ಅಧಿಕಾರಿ ಎಂ.ಶ್ರೀನಿವಾಸಮೂರ್ತಿ ಮತ್ತಿತರರು ಹಾಜರಿದ್ದರು.

Translate »