ಮೈಸೂರಲ್ಲಿ ‘ಅಂಬಾರಿ’ ಪುನಾರಂಭ
ಮೈಸೂರು

ಮೈಸೂರಲ್ಲಿ ‘ಅಂಬಾರಿ’ ಪುನಾರಂಭ

September 5, 2021

ಮೊದಲ ದಿನ ಡಬಲ್ ಡೆಕ್ಕರ್ ಬಸ್ ಸೇವೆಗೆ ನೀರಸ ಪ್ರತಿಕ್ರಿಯೆ
ಮೈಸೂರು, ಸೆ.4(ಆರ್‍ಕೆ)-ಕೊರೊನಾ ಸೋಂಕಿನ ಭೀತಿಯಿಂದಾಗಿ ಸ್ಥಗಿತಗೊಂಡಿದ್ದ ‘ಅಂಬಾರಿ’ ಡಬಲ್ ಡೆಕ್ಕರ್ ಬಸ್‍ಗಳ ಸೇವೆ ಶನಿವಾರ ಪುನಾರಂಭಗೊಂಡಿತು.

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ನಿಯಮಿತವು ಆಯೋ ಜಿಸಿರುವ ‘ಅಂಬಾರಿ’ಯಲ್ಲಿ ಮೈಸೂರು ಪಾರಂಪರಿಕ ಕಟ್ಟಡ, ಸ್ಮಾರಕ, ಪ್ರವಾಸಿ ತಾಣಗಳ ವೀಕ್ಷಣೆ ಪ್ಯಾಕೇಜ್‍ಗೆ ಪುನಾರಂಭದ ಮೊದಲ ದಿನ ನಾಗರಿಕರು ಮತ್ತು ಪ್ರವಾಸಿಗ ರಿಂದ ನೀರಸ ಪ್ರತಿಕ್ರಿಯೆ ವ್ಯಕ್ತ ವಾಯಿತು.

ಕೋವಿಡ್-19 ಹಿನ್ನೆಲೆಯಲ್ಲಿ ಹೊರ ರಾಜ್ಯಗಳ ಪ್ರವಾಸಿಗರು ಮೈಸೂರಿಗೆ ಬಾರದಿರುವುದು, ಸೋಂಕು ಹರಡುವುದೆಂಬ ಆತಂಕ ಹಾಗೂ ಈ ಸೇವೆ ಕುರಿತು ಹೆಚ್ಚಿನ ಪ್ರಚಾರ ಇಲ್ಲದಿರುವುದೇ ಇದಕ್ಕೆ ಕಾರಣ ಎಂದು ಹೇಳಲಾಗಿದೆ.

ಪ್ರತಿದಿನ ಬೆಳಗ್ಗೆ 9.30ರಿಂದ ಸಂಜೆ 5.30ರವರೆಗೆ ಸಂಚರಿಸಲಿರುವ 2 ಡಬಲ್ ಡೆಕ್ಕರ್ ಬಸ್‍ಗಳು ತಲಾ 4 ಟ್ರಿಪ್ ಮಾಡಲಿವೆ. 40 ಆಸನಗಳ ಅಂಬಾರಿ ಬಸ್ಸಿನ ಮೊದಲ ಟ್ರಿಪ್‍ನಲ್ಲಿ ಇಂದು 7 ಮಂದಿ, ಮತ್ತೊಂದು ಬಸ್ಸಿನಲ್ಲಿ 4 ಮಂದಿ ಮಾತ್ರ ಸಂಚರಿಸಿ ಮೈಸೂರು ದರ್ಶನ ಮಾಡಿದರು.

ಸಂಚಾರ ಮಾರ್ಗ: ದಾಸಪ್ಪ ಸರ್ಕಲ್ ಬಳಿ ಜೆಎಲ್‍ಬಿ ರಸ್ತೆಯ ಹೋಟೆಲ್ ಮಯೂರ ಹೊಯ್ಸಳದ ಆವರಣದಲ್ಲಿರುವ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ನಿಯಮಿತ (ಕೆಎಸ್‍ಟಿಡಿಸಿ) ಕಚೇರಿಯಿಂದ ಹೊರಡುವ ಡಬಲ್ ಡೆಕ್ಕರ್ ಬಸ್, ಜಿಲ್ಲಾಧಿಕಾರಿ ಕಚೇರಿ, ಕುಕ್ಕರಹಳ್ಳಿ ಕೆರೆ, ಮೈಸೂರು ವಿಶ್ವವಿದ್ಯಾನಿಲಯದ ಕ್ರಾಫರ್ಡ್ ಹಾಲ್, ರಾಮಸ್ವಾಮಿ ಸರ್ಕಲ್, ಚಾಮರಾಜ ಜೋಡಿ ರಸ್ತೆ, ಸರ್ಕಾರಿ ಸಂಸ್ಕøತ ಪಾಠಶಾಲೆ, ಕೆ.ಆರ್. ಸರ್ಕಲ್, ದೊಡ್ಡ ಗಡಿಯಾರ, ಅರಮನೆ ದಕ್ಷಿಣ ದ್ವಾರ, ಹಾರ್ಡಿಂಜ್ ಸರ್ಕಲ್, ಮೃಗಾಲಯ, ಕಾರಂಜಿ ಕೆರೆ, ಸರ್ಕಾರಿ ಅತಿಥಿ ಗೃಹ, ಸೇಂಟ್ ಫಿಲೋಮಿನಾ ಚರ್ಚ್, ಬನ್ನಿಮಂಟಪ, ಹೈವೇ ಸರ್ಕಲ್, ಸರ್ಕಾರಿ ಆಯುರ್ವೇದ ಮಾರ್ಗವಾಗಿ ಸಂಚರಿಸಿ ಮರಳಿ ಮಯೂರ ಹೊಯ್ಸಳ ಹೋಟೆಲ್ ಆವರಣ ತಲುಪುವುದು.

ಅಂಬಾರಿಯಲ್ಲಿ ಕನ್ನಡ ಮತ್ತು ಆಂಗ್ಲ ಭಾಷೆಯ ಆಡಿಯೋ ಮತ್ತು ವಿಡಿಯೋ ಸಿಸ್ಟಂ ಅಳವಡಿಸಲಾಗಿದೆ. ಅಂಬಾರಿಯ ಮೊದಲ ಟ್ರಿಪ್‍ನಲ್ಲಿ ಪಾಲಿಕೆಯ ವಾಹನವೂ ಜತೆಗೆ ಸಂಚರಿಸಿ ಮಾರ್ಗದಲ್ಲಿ ಮರದ ರೆಂಬೆ ತೆರವುಗೊಳಿಸಿತು.

ಐದು ವರ್ಷ ಮೇಲ್ಪಟ್ಟವರಿಗೆ 250 ರೂ. ಪ್ರಯಾಣ ದರ. 5 ವರ್ಷದೊಳಗಿನ ಮಕ್ಕಳಿಗೆ ಪ್ರಯಾಣ ಉಚಿತ ಎಂದು ಕೆಎಸ್‍ಟಿಡಿಸಿ ಅಧಿಕಾರಿಗಳು ತಿಳಿಸಿದ್ದಾರೆ. ಕೋವಿಡ್-19 ಹಿನ್ನೆಲೆಯಲ್ಲಿ ಪ್ರತೀ ಟ್ರಿಪ್ ಮುಗಿದ ತಕ್ಷಣ ಬಸ್ಸನ್ನು ಸ್ವಚ್ಛಗೊಳಿಸಿ ಸ್ಯಾನಿಟೈಸ್ ಮಾಡಲಾಗುವುದು ಎಂದರು.
ಇಂದು ಅಂಬಾರಿಯಲ್ಲಿ ಸಂಚರಿಸಿದ ಮೈಸೂರಿನ ಎನ್. ರಾಮಚಂದ್ರ ನಿತ್ಯ ಮೈಸೂರನ್ನು ನೋಡುತ್ತಿದ್ದೇನಾದರೂ, ಡಬಲ್ ಡೆಕ್ಕರ್ ಬಸ್ಸಿನ ರೂಫ್‍ಟಾಪ್‍ನಲ್ಲಿ ಸಂಚರಿಸಿ ಪಾರಂಪರಿಕ ಕಟ್ಟಡಗಳು, ಸ್ಮಾರಕಗಳನ್ನು ವೀಕ್ಷಿಸಿದ್ದು ಹೊಸ ಅನುಭವ.

Translate »