`ಜಿಲ್ಲಾ ಉತ್ತಮ ಶಿಕ್ಷಕ’ ಪ್ರಶಸ್ತಿ ಪಟ್ಟಿಗೆ ಹಲವರ ವಿರೋಧ
ಮೈಸೂರು

`ಜಿಲ್ಲಾ ಉತ್ತಮ ಶಿಕ್ಷಕ’ ಪ್ರಶಸ್ತಿ ಪಟ್ಟಿಗೆ ಹಲವರ ವಿರೋಧ

September 5, 2021

ಮೈಸೂರು, ಸೆ.4(ಎಸ್‍ಪಿಎನ್)-ಈ ಸಾಲಿನ ಜಿಲ್ಲಾ ‘ಉತ್ತಮ ಶಿಕ್ಷಕ’ ಪ್ರಶಸ್ತಿಗೆ ಪರಿಗಣಿಸಿರುವ ಶಿಕ್ಷಕರಿಗಿಂತಲೂ ಹೆಚ್ಚಿನ ಸಾಧನೆ ಮಾಡಿರುವ ಶಿಕ್ಷಕರನ್ನು ಜಿಲ್ಲಾ ಆಯ್ಕೆ ಸಮಿತಿ ಪರಿಗಣಿಸಿಲ್ಲ ಎಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹೆಚ್.ಡಿ.ಕೋಟೆ ತಾಲೂಕು ಅಧ್ಯಕ್ಷ ಎಂ.ಚಂದ್ರಕುಮಾರ್ ಆರೋಪಿಸಿದ್ದಾರೆ.

ಸಂಬಂಧ ಡಿಡಿಪಿಐ ಕಚೇರಿಗೆ ಶನಿವಾರ ಆಕ್ಷೇಪ ಪತ್ರ ಸಲ್ಲಿಸಿ, ‘ಮೈಸೂರು ಮಿತ್ರ’ನೊಂದಿಗೆ ಮಾತನಾಡಿದರು. ಶಿಕ್ಷಕರ ದಿನಾ ಚರಣೆ ಅಂಗವಾಗಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿ ರುವ 30 ಶಿಕ್ಷಕರ ಪಟ್ಟಿ ಪ್ರಕಟಗೊಂಡಿದೆ. ಆದರೆ, ಇವರಿಗಿಂತಲೂ ಹೆಚ್ಚಿನ ಸಾಧನೆ ಮಾಡಿರುವ ಶಿಕ್ಷಕರು ಪ್ರಶಸ್ತಿ ಯಿಂದ ವಂಚಿತರಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಈ ಪ್ರಶಸ್ತಿಗೆ ಕಿರಿಯ, ಹಿರಿಯ ಹಾಗೂ ಪ್ರೌಢಶಾಲೆಯ ಹಲವು ಶಿಕ್ಷಕರು ಅರ್ಜಿ ಸಲ್ಲಿಸಿದ್ದರು. ಆದರೆ ಜಿಲ್ಲಾ ಆಯ್ಕೆ ಸಮಿತಿ ಅರ್ಹ ಶಿಕ್ಷಕರನ್ನು ಗುರುತಿ ಸಲು ವಿಫಲವಾಗಿದೆ. ಈ ಸಮಿತಿ, ಶಾಲಾ ಶಿಕ್ಷಕರ ಸಂಘ ಹಾಗೂ ವಿವಿಧ ಸಂಘ-ಸಂಸ್ಥೆಗಳಲ್ಲಿ ಸದಸ್ಯ ರಾಗಿರುವವರನ್ನೂ ಪ್ರಶಸ್ತಿಗೆ ಆಯ್ಕೆ ಮಾಡಿದೆ ಎಂದು ಆಕ್ಷೇಪಿಸಿದರು.

ಇದಕ್ಕೆ ಹಲವಾರು ಶಿಕ್ಷಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಈಗ ಪ್ರಕಟಿಸಿರುವ ಜಿಲ್ಲಾ ಉತ್ತಮ ಶಿಕ್ಷಕ ಪಟ್ಟಿಯನ್ನು ಪುನರ್ ಪರಿಶೀಲಿಸುವಂತೆ ಡಿಡಿಪಿಐ ಅವರಿಗೆ ಮನವಿ ಮಾಡಲಾಗಿದೆ. ಪಟ್ಟಿ ಮರು ಪರಿಶೀಲಿಸದಿದ್ದರೆ, ಉಸ್ತುವಾರಿ ಸಚಿವ ಎಸ್.ಟಿ. ಸೋಮ ಶೇಖರ್, ಸಂಸದರಾದ ವಿ.ಶ್ರೀನಿವಾಸ ಪ್ರಸಾದ್, ಪ್ರತಾಪ ಸಿಂಹ ಅವರನ್ನು ಭೇಟಿ ಮಾಡಿ, ಆಕ್ಷೇಪಣೆ ಸಲ್ಲಿಸಲಾಗುವುದು ಎಂದರು.

ಕಿರಿಯ ಪ್ರಾಥಮಿಕ ಶಾಲೆ ವಿಭಾಗ: 2021-22ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಕಿರಿಯ ಪ್ರಾಥಮಿಕ ಶಾಲಾ ವಿಭಾಗ ದಿಂದ ಮೈಸೂರಿನ ಜಯನಗರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಎಂ.ಶಿವಕುಮಾರ್, ಕೊಪ್ಪಲೂರು ಶಾಲೆಯ ಶಿಕ್ಷಕಿ ಕೆ.ವಿ.ಪದ್ಮಾವತಿ, ಹುಣಸೂರು ತಾಲೂಕಿನ ಮಾಚಬಾಯನ ಹಳ್ಳಿ ಶಾಲೆಯ ಶಿಕ್ಷಕಿ ಡಿ.ಪಿ.ಕಮಲಾಕ್ಷಿ, ಹೆಚ್.ಡಿ.ಕೋಟೆ ತಾಲೂಕಿನ ಅಂಕನಾಥಪುರ ಶಾಲೆಯ ಶಿಕ್ಷಕ ಜಿ.ಕೆ.ಲೋಕೇಶ್, ಕೆ.ಆರ್.ನಗರ ತಾಲೂಕು ಗುಮ್ಮನಹಳ್ಳಿ ಶಾಲೆಯ ಶಿಕ್ಷಕ ಎಸ್.ಆರ್.ನಾಗೇಶ್, ಸರಗೂರು ತಾಲೂಕಿನ ಹುಸ್ಕೂರು ಶಾಲೆಯ ಶಿಕ್ಷಕ ಎನ್.ಮಲ್ಲಿ ಕಾರ್ಜುನ, ತಿ.ನರಸೀಪುರ ತಾಲೂಕು ಟಿ.ದೊಡ್ಡಪುರ ಶಾಲೆಯ ಶಿಕ್ಷಕ ಟಿ.ಎನ್.ನಾಗೇಂದ್ರ, ಕ್ಯಾತಮಾರನಹಳ್ಳಿ ಶಾಲೆಯ ಶಿಕ್ಷಕಿ ರಮಾಮಣಿ ಅವರು ಆಯ್ಕೆಯಾಗಿದ್ದಾರೆ.

ಹಿರಿಯ ಪ್ರಾಥಮಿಕ ಶಾಲಾ ವಿಭಾಗ: ಹೆಚ್.ಡಿ.ಕೋಟೆ ತಾಲೂ ಕಿನ ಕೆಂಚನಹಳ್ಳಿ ಶಾಲೆಯ ಮುಖ್ಯಶಿಕ್ಷಕಿ ಎಲ್.ಕೆ.ರೂಪ, ಕಿರಾಳು ಶಾಲೆಯ ಶಿಕ್ಷಕಿ ಎನ್.ಎಲ್.ಆಶಾ, ನಿಜಾಮಿಯ ಶಾಲೆಯ ಶಿಕ್ಷಕಿ ನಜ್ಮಬಾನು, ಎನ್.ಎಚ್.ಪಾಳ್ಯ ಶಾಲೆಯ ಶಿಕ್ಷಕಿ ಅನೀಸ್ ಫಾತಿಮಾ, ತಿ.ನರಸೀಪುರ ತಾಲೂಕು ಅಂಕನಹಳ್ಳಿ ಶಾಲೆಯ ಶಿಕ್ಷಕ ಎಂ.ಕೆ.ರೇವಣ್ಣ, ಸರಗೂರು ತಾಲೂಕಿ ಇಟ್ನ ಶಾಲೆಯ ದೈಹಿಕ ಶಿಕ್ಷಕ ಸತೀಶ್, ಕೆ.ಆರ್.ನಗರ ತಾಲೂಕು ಹೊಸಕೋಟೆ ಶಾಲೆಯ ಮುಖ್ಯಶಿಕ್ಷಕ ಪುಟ್ಟಯ್ಯ, ಹುಣಸೂರು ತಾಲೂಕು ಗೌರಿಪುರ ಶಾಲೆಯ ಶಿಕ್ಷಕ ಎಂ.ಇ.ನಂಜುಂಡ, ನಂಜನಗೂಡು ತಾಲೂಕು ಹಾರೋಪುರ ಶಾಲೆಯ ಶಿಕ್ಷಕ ಬಸವನಾಯಕ, ಪಿರಿಯಾಪಟ್ಟಣ ತಾಲೂಕು ತಿರುಮ ಲಾಪುರ ಶಾಲೆ ಶಿಕ್ಷಕ ಎಂ.ಎಸ್.ಸುರೇಶ್ ಆಯ್ಕೆಯಾಗಿದ್ದಾರೆ.

ಪ್ರೌಢಶಾಲಾ ವಿಭಾಗ: ಹುಣಸೂರು ತಾಲೂಕು ಧರ್ಮಾಪುರ ಶಾಲೆಯ ಶಿಕ್ಷಕ ಪ್ರವೀಣ್, ಕೆ.ಆರ್.ನಗರ ಜೆಎಸ್‍ಎಸ್ ಪ್ರೌಢಶಾಲೆಯ ಶಿಕ್ಷಕ ಜ್ಞಾನದೇವ, ಹೆಚ್.ಡಿ.ಕೋಟೆ ತಾಲೂಕು ಬಾಬೇಗೌಡನ ಹಳ್ಳಿ ಶಾಲೆ ಶಿಕ್ಷಕ ಎಂ.ಕೆ.ನವೀದ್, ಸರಗೂರು ತಾಲೂಕು ಬಿ.ಮಟ ಗೆರೆ ಕೆಪಿಎಸ್‍ನ ಶಿಕ್ಷಕಿ ಜಯಲಕ್ಷ್ಮಿ, ತಿ.ನರಸೀಪುರ ತಾಲೂಕು ಚಿದರ ವಳ್ಳಿ ಶಾಲೆ ಮುಖ್ಯಶಿಕ್ಷಕಿ ಗ್ರೇಸ್‍ಪ್ರೇಮಾಕುಮಾರಿ, ನಂಜನಗೂಡು ದಳವಾಯಿ ಬಾಲಕಿಯ ಶಾಲೆ ಶಿಕ್ಷಕಿ ಪಿ.ವಿ.ಪದ್ಮಿನಿ, ಪಿರಿಯಾ ಪಟ್ಟಣ ತಾಲೂಕು ಪಂಚವಳ್ಳಿಶಾಲೆಯ ಶಿಕ್ಷಕಿ ನಾಗಲಿಂಗಪ್ಪ ರಾ ಬಡಿಗೇರ, ಕುವೆಂಪುನಗರದ ಕೆಪಿಎಸ್‍ನ ದೈಹಿಕ ಶಿಕ್ಷಣ ಶಿಕ್ಷಕ ಗಂಗೇಶ್, ಕೈಲಾಸಪುರಂ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ವೆಂಕಟೇಶ್ ಅವರನ್ನೂ ಜಿಲ್ಲಾ ಹಂತದ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

Translate »