ಅಧಿಕಾರ ಇದ್ದಾಗ ಕೆಲಸವೇ ಮಾಡಲಿಲ್ಲ,  ಈಗ ಮಾಡೋಕೆ ಕೆಲಸ ಇಲ್ಲದವರು…
ಮೈಸೂರು

ಅಧಿಕಾರ ಇದ್ದಾಗ ಕೆಲಸವೇ ಮಾಡಲಿಲ್ಲ, ಈಗ ಮಾಡೋಕೆ ಕೆಲಸ ಇಲ್ಲದವರು…

September 5, 2021

ಮೈಸೂರು,ಸೆ.4-ಅಧಿಕಾರ ಇದ್ದಾಗ ಕೆಲಸ ಮಾಡ ಲಿಲ್ಲ. ಈಗ ಮಾಡೋಕೆ ಕೆಲಸ ಇಲ್ಲ. ಇಂತಹ ಪರಿಸ್ಥಿತಿ ಯಾಕೆ ಬರುತ್ತೆ ಎಂಬುದು ಇನ್ನೂ ಗೊತ್ತಾಗಲಿ ಲ್ಲವೇ? ಎಂದು ಮಾಜಿ ಸಚಿವ ಡಾ. ಹೆಚ್.ಸಿ.ಮಹ ದೇವಪ್ಪ ಅವರನ್ನು ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ.
ಮಹದೇವಪ್ಪ ಅವರಿಗೆ ಪತ್ರ ಬರೆದಿರುವ ಅವರು, ಪ್ರದೇಶ ಕಾಂಗ್ರೆಸ್ ಸಮಿತಿ ಲೆಟರ್‍ಹೆಡ್‍ನಲ್ಲಿ ಸೆ.5ರ ಬೆಳಗ್ಗೆ 11 ಗಂಟೆಗೆ ಚರ್ಚೆಗೆ ಬನ್ನಿ ಎಂದು ಸೆ.4ರಂದು ಪಂಥಾಹ್ವಾನ ಬಂದಿದೆ. ಅದರಲ್ಲಿ ಡಾ.ಮಹದೇವಪ್ಪ ನವರು ಬರುತ್ತಾರೆ ಎಂದು ಇರುವುದರಿಂದ ಮೈಸೂರು ಭಾಗದ ಒಬ್ಬ ಹಿರಿಯ ರಾಜಕಾರಣಿ ಎಂಬ ನಿಮ್ಮ ಮೇಲಿನ ಗೌರವದ ಸಲುವಾಗಿ ಪ್ರತಿ ಕ್ರಿಯೆ ಕಳುಹಿಸುತ್ತಿದ್ದೇನೆ ಎಂದು ಅವರು ತಾವು ಪತ್ರ ಬರೆದಿರುವುದಕ್ಕೆ ಕಾರಣ ತಿಳಿಸಿದ್ದಾರೆ.

2018ರ ಚುನಾವಣೆ ನಂತರ ಸತತ 3 ವರ್ಷಗಳ ಕಾಲ ಕಣ್ಮರೆಯಾಗಿದ್ದು, ಕಡೆಗೂ ಜನರಿಗೆ ಮುಖ ತೋರಿಸಲು ಮುಂದಾಗಿರುವ ಮಹದೇವಪ್ಪನವರೇ, ಇನ್ನು 18 ತಿಂಗಳಲ್ಲಿ ಬರಲಿರುವ ವಿಧಾನಸಭೆ ಚುನಾ ವಣೆಯ ಹಿನ್ನೆಲೆಯಲ್ಲಿ ಜನರೆದುರು ಬರಲು ನೆಪ ಹುಡುಕಬೇಕಾದ ನಿಮ್ಮ ಅನಿವಾರ್ಯತೆ ನನಗೆ ಅರ್ಥ ವಾಗುತ್ತದೆ. ನರಸೀಪುರದಲ್ಲಿ ನಿಲ್ಲುವುದೋ, ನಂಜನ ಗೂಡಿಗೆ ನೆಗೆಯಬೇಕೋ ಎಂಬ ನಿಮ್ಮ ಆತಂಕ, ಭಯ, ದುಗುಡ ಜನರಿಗೂ ಗೊತ್ತು ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ನನ್ನ ಮೇಲೆ ಸದಾ ಟೀಕೆ ಮಾಡುತ್ತಾ, ಮಾಧ್ಯಮ ಗಳಲ್ಲಿ ಪ್ರಚಾರ ಪಡೆಯುತ್ತಾ, ಜನರಿಂದ ಪದೇ ಪದೆ ತಿರಸ್ಕøತಗೊಂಡು ನಿರ್ನಾಮವಾಗಿದ್ದರೂ, ತಾನಿನ್ನು ರಾಜಕಾರಣ ಮಾಡುತ್ತಿದ್ದೇನೆಂದು ತೋರಿಸಿಕೊಳ್ಳ ಬೇಕಾದ ಅನಿವಾರ್ಯತೆ ನಿಮ್ಮ ಪಕ್ಷದಲ್ಲಿ ಕೆಲವರಿಗಿದೆ. ಆದರೆ ನೀವೇಕೆ ಅಂತಹ ಕ್ಷುಲ್ಲಕ ವ್ಯಕ್ತಿಗಳ ಜೊತೆ ಚರ್ಚೆಗೆ ಬರು ತ್ತೀರಿ ಎಂದು ಪ್ರಶ್ನಿಸಿರುವ ಅವರು, ಆ ವ್ಯಕ್ತಿಯ ಜೊತೆ ಸೇರಿ ವಾರಕ್ಕೆರಡು ಪತ್ರಿಕಾ ಗೋಷ್ಠಿ ಮಾಡಿ ಹಾಳಾದ ಹಿರಿಯ ನಾಯಕ ರೊಬ್ಬರ ಕಥೆ ಗೊತ್ತಿಲ್ಲವೇ? ಎಂದಿದ್ದಾರೆ.

ನಾನು ಮೈಸೂರಲ್ಲಿ ಇಲ್ಲದ ಸಂದರ್ಭದಲ್ಲಿ ಪತ್ರಕರ್ತರ ಭವನಕ್ಕೆ ಬಾ ಅನ್ನೋದು ರಣಹೇಡಿ ಗಳು ಮಾಡುವ ಕೆಲಸ. ಅಂತಹ ಪುಕ್ಕಲರ ಜೊತೆ ನೀವೇಕೆ ಸೇರಿಕೊಂಡಿದ್ದೀರಿ? ನೀವೊಬ್ಬರು ಮಾಜಿ ಸಚಿವರು. ಮೈಸೂರಿನ ಉಸ್ತುವಾರಿ ನಿಭಾಯಿಸಿದವರು. ಈ ಪತ್ರ, ಫಾರ್ಮಾಲಿಟಿ ಏನೂ ಬೇಡ. ನನಗೆ ಡಯಲ್ ಮಾಡಿ `ಪ್ರತಾಪ್ ಯಾವತ್ತು ಫ್ರೀ ಇದ್ದೀಯಾ? ಚರ್ಚೆ ಮಾಡೋಣ ಬಾ’ ಅನ್ನಿ ಸಾಕು, ಅದಕ್ಕಿಂತ ಮೊದಲು ನಾನು ನಿಮಗೆ 2 ಪ್ರಶ್ನೆ ಕೇಳಿದ್ದೆ. ಅದಕ್ಕೆ ದಾಖಲೆ ಸಮೇತ ಉತ್ತರಿಸುವಿರಾ? ಎಂದು ಪ್ರಶ್ನಿಸಿದ್ದಾರೆ.

(i) 8 ಸಾವಿರ ಕೋಟಿಯ ಮೈಸೂರು-ಬೆಂಗ ಳೂರು ಹತ್ತು ಪಥ ರಸ್ತೆ ಯೋಜನೆಗೆ 2014ಕ್ಕಿಂತ ಮೊದಲು ಸಂಸದರಾಗಿದ್ದ ಕೆ.ಆರ್.ನಗರದ ಹಳ್ಳಿ ಹಕ್ಕಿ ಆಗಲೀ, 2018ರವರೆಗೂ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರಾಗಲೀ, ಅವರ ಸಂಪುಟದಲ್ಲಿ ಲೋಕೋಪಯೋಗಿ ಸಚಿವರಾಗಿದ್ದ ನೀವಾಗಲೀ, ಕನಿಷ್ಠ 8 ಪೈಸೆ ಕೊಟ್ಟಿದ್ದೀರಾ? ಮೊದಲು ತೋರಿಸಿ.

(ii) ಜಲದರ್ಶಿನಿ ಗೇಟ್‍ನಿಂದ ಪಡುವಾರಹಳ್ಳಿ ಸರ್ಕಲ್‍ವರೆಗೂ 6 ಪಥದ ರಸ್ತೆ ಮಾಡು ತ್ತೇನೆ ಎಂದು ನಿತಿನ್ ಗಡ್ಕರಿ ಅವರಿಂದ ಸಿಆರ್‍ಎಫ್‍ನಡಿ 12 ಕೋಟಿ ದುಡ್ಡು ತಂದು ಕೆಲಸ ಮಾಡಿದ್ದೀರಾ? ಎಲ್ಲಿದೆ ಆ 6 ಪಥದ ರಸ್ತೆ ತೋರಿಸಿ? ಈ ಮೋಸ ವನ್ನು ಪತ್ತೆ ಹಚ್ಚಿ ಅದೇ ದುಡ್ಡಿನಲ್ಲಿ ಹಿನ ಕಲ್ ಸಿಗ್ನಲ್‍ವರೆಗೂ ಡಾಂಬರೀಕರಣ ಮಾಡಿಸಿದ್ದು ಹಾಗೂ ಜಲದರ್ಶಿನಿ ಪಕ್ಕದಲ್ಲಿರುವ ಪಿಡಬ್ಲ್ಯುಡಿ ಕಾಂಪೌಂಡ್ ಒಡೆಸಿ ಫುಟ್‍ಪಾತ್ ಮಾಡಿಸಿದ್ದು ನಾನು ಎಂಬುದು ನೆನಪಿರಲಿ.

ನನ್ನ ಈ ಪ್ರಶ್ನೆಗಳಿಗೆ ದಾಖಲೆ ಸಮೇತ ಉತ್ತರ ಕಳುಹಿಸಿ. ಆ ಉತ್ತರದ ಜೊತೆ ನಿಮ್ಮ ಮೊಬೈಲ್ ನಂಬರ್ ಕೊಡಿ. ನಾನೇ ನಿಮಗೆ ಕರೆ ಮಾಡಿ, ನಮ್ಮಿಬ್ಬರ ಸಂವಾದದ ದಿನಾಂಕ ನಿಗದಿ ಮಾಡೋಣ. ನಾನು ಒಬ್ಬನೇ ಬರುತ್ತೇನೆ. ನೀವು ಜನರಿಂದ ಆಯ್ಕೆಯಾದ ಹಾಗೂ ಆಯ್ಕೆಯಾಗಿದ್ದ ನಿಮ್ಮ ಪಕ್ಷದ ಎಲ್ಲಾ ಹಾಲಿ ಹಾಗೂ ಮಾಜಿ ಜನಪ್ರತಿನಿಧಿಗಳ ಜೊತೆ ಬನ್ನಿ. ದಾಖಲೆ ಆಧರಿತವಾಗಿ ನಿಮ್ಮ ಉತ್ತರಕ್ಕಾಗಿ ಕಾಯು ತ್ತಿರುವೆನು ಎಂದು ಪತ್ರದಲ್ಲಿ ಹೇಳಿದ್ದಾರೆ.

ಕರ್ನಾಟಕದಲ್ಲಿ ನಡೆಯುತ್ತಿರುವ ಹೆದ್ದಾರಿ ಕಾಮ ಗಾರಿಗಳ ಪರಾಮರ್ಶೆಗಾಗಿ ಎನ್‍ಹೆಚ್‍ಎಐ ಮೆಂಬರ್ ಪ್ರಾಜೆಕ್ಟ್ ಆರ್.ಕೆ.ಪಾಂಡೆ ಬಂದಿದ್ದಾರೆ. ಇಂದು ಅವರು ಚಿತ್ರದುರ್ಗಕ್ಕೆ ಹೋಗಿದ್ದು, ನಾಳೆ ಬೆಂಗಳೂರಿನಲ್ಲಿ ಸಿಗು ತ್ತಾರೆ. ಬಿಡುವಿದ್ದರೆ ನೀವೂ ಬನ್ನಿ. ಪತ್ರಕರ್ತರ ಭವನ ದಲ್ಲಿ ಪುಕ್ಕಟ್ಟೆ ಪ್ರಚಾರಕ್ಕಾಗಿ ಕಾಲಹರಣ ಮಾಡುವ ಬದಲು ಮೈಸೂರು ರಿಂಗ್ ರಸ್ತೆಯಲ್ಲಿ ಬರುವ ತಿ.ನರಸೀ ಪುರ ಜಂಕ್ಷನ್‍ನಲ್ಲಿ ಗ್ರೇಡ್ ಸೆಪರೇಟರ್ ನಿರ್ಮಾಣ ಮಾಡಬೇಕೆಂಬ ನನ್ನ ಪ್ರಸ್ತಾಪಕ್ಕೆ ಮಂಜೂರಾತಿ ಕೊಟ್ಟಿರುವ ಅವರಿಗೊಂದು ಧನ್ಯವಾದ ಹೇಳಿ. ತಿ.ನರಸೀ ಪುರ ರಸ್ತೆಯನ್ನು 4 ಪಥ ಮಾಡಬೇಕೆಂದು ಈಗಾ ಗಲೇ ನಿತಿನ್ ಗಡ್ಕರಿ ಅವರಿಗೆ ಮನವಿ ಕೊಟ್ಟಿದ್ದೇನೆ. ಅದನ್ನು ಪಾಂಡೆಯವರಿಗೂ ಮನವರಿಕೆ ಮಾಡಿ ಬರೋಣ ಬನ್ನಿ ಎಂದು ಆಹ್ವಾನಿಸಿದ್ದಾರೆ.

ನನ್ನ ಸವಾಲಿನ ರೂಪದ ಪ್ರಶ್ನೆಗೆ ದಾಖಲೆ ಸಮೇತ ಉತ್ತರ ಕಳುಹಿಸಿ. ಆನಂತರ ಪತ್ರಕರ್ತರ ಮುಂದೆಯೇ ಸಂವಾದ ಮಾಡೋಣ. ನನಗೆ ಬಂದ ಪತ್ರದಲ್ಲಿ ನಿಮ್ಮಂತಹ ಹಿರಿಯರ ಹೆಸರಿದ್ದ ಕಾರಣ ಉತ್ತರ ನೀಡುತ್ತಿದ್ದೇನೆ. ಇಲ್ಲದಿದ್ದರೆ ನನ್ನಿಂದ ಈ ಉತ್ತರ ಕೂಡ ಲಭ್ಯವಾಗುತ್ತಿರಲಿಲ್ಲ. ನಾನು ಟಿ.ವಿ.ಯಲ್ಲಿ ನಡೆಯುವ ಡಿಬೇಟ್‍ಗಳಿಗೆ ಹೋಗುವುದನ್ನು ನಿಲ್ಲಿಸಿ 3 ವರ್ಷವಾಯಿತು. ಇನ್ನು ನಿಮ್ಮ ಪ್ರಚಾರದ ಗೀಳಿಗೆ ನನ್ನ ಸಮಯವನ್ನು ಕೊಡುವುದಿಲ್ಲ. ನನ್ನ ಮೇಲೆ ನಂಬಿಕೆ ವಿಶ್ವಾಸವಿಟ್ಟಿರುವ ಮತದಾರರ ಕೆಲಸ ಮಾಡಲು ನನಗೆ ಸಮಯ ಸಾಕಾಗುತ್ತಿಲ್ಲ. ಇಂತಹುದರಲ್ಲಿ ಕೆಲಸ ವಿಲ್ಲದೇ ಕುಳಿತವರು ಕರೆಯುವ ಸಂವಾದದಲ್ಲಿ ಭಾಗ ವಹಿಸಲು ಸಾಧ್ಯವೇ? ಎಂದು ಪ್ರಶ್ನಿಸಿರುವ ಪ್ರತಾಪ್ ಸಿಂಹ, ಮೈಸೂರಿನಲ್ಲಿ ಕೆಲವು ರಾಜಕಾರಣಿಗಳು ವರ್ಷ ವಿಡೀ ಮಾತನಾಡುತ್ತಿರುತ್ತಾರೆ. ಆದರೆ ಮೈಸೂರಿನ ಜನ 5 ವರ್ಷ ತಾಳ್ಮೆಯಿಂದ ಕಾದು ಮತಪೆಟ್ಟಿಗೆ ಮೂಲಕ ಒಮ್ಮೆಲೇ ತೀರ್ಪು ಕೊಡುತ್ತಾರೆ. ಇದು ನಿಮ್ಮ ಅನು ಭವಕ್ಕೂ ಬಂದಿದೆ ಎಂದು ಮಹದೇವಪ್ಪ ಅವರಿಗೆ ಬರೆದಿರುವ ಪತ್ರದಲ್ಲಿ ಪ್ರತಾಪ್ ಸಿಂಹ ತಿಳಿಸಿದ್ದಾರೆ.

Translate »