ಈ ಬಾರಿಯೂ ಸರಳ, ಸಾಂಪ್ರದಾಯಿಕ ಮೈಸೂರು ದಸರಾ
ಮೈಸೂರು

ಈ ಬಾರಿಯೂ ಸರಳ, ಸಾಂಪ್ರದಾಯಿಕ ಮೈಸೂರು ದಸರಾ

September 4, 2021

ಬೆಂಗಳೂರು, ಸೆ.೩(ಕೆಎಂಶಿ)- ಕೊರೊನಾ ಹಿನ್ನೆಲೆಯಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾವನ್ನು ಸರಳ ಹಾಗೂ ಸಾಂಪ್ರದಾಯಿಕ ವಾಗಿ ಆಚರಿಸಲು ಸರ್ಕಾರ ನಿರ್ಧರಿಸಿದೆ. ದಸರಾ ಉದ್ಘಾಟನೆಯನ್ನು ಯಾರಿಂದ ಮಾಡಿಸ ಬೇಕು ಎಂಬ ತೀರ್ಮಾನವನ್ನು ಮುಖ್ಯ ಮಂತ್ರಿಯವರ ನಿರ್ಧಾರಕ್ಕೆ ಬಿಡಲಾಗಿದೆ.

ವಿಧಾನಸೌಧದ ಸಮ್ಮೇಳನ ಸಭಾಂಗ ಣದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ದಸರಾ ಉನ್ನತ ಮಟ್ಟದ ಸಭೆಯಲ್ಲಿ ಈ ತೀರ್ಮಾನ ಕೈಗೊಂಡಿದ್ದಲ್ಲದೆ, ಮೈಸೂರು, ಚಾಮರಾಜ ನಗರ ಹಾಗೂ ಶ್ರೀರಂಗಪಟ್ಟಣದಲ್ಲಿ ದಸರಾ ಆಚರಣೆಗಾಗಿ ಆರು ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ನಂತರ ಸುದ್ದಿ ಗಾರರೊಂದಿಗೆ ಮಾತನಾಡಿದ ಮುಖ್ಯ ಮಂತ್ರಿಗಳು, ಕೊರೊನಾ ಸೋಂಕು ಇನ್ನೂ ನಮ್ಮಿಂದ ದೂರವಾಗಿಲ್ಲದ ಕಾರಣ ಕಳೆದ ಬಾರಿಯಂತೆ ಈ ಬಾರಿಯೂ ಸರಳ ಮತ್ತು ಸಂಭ್ರಮದಿAದ ಆಚರಿಸಲು ತೀರ್ಮಾನಿಸ ಲಾಗಿದೆ. ಚಾಮುಂಡಿಬೆಟ್ಟದಲ್ಲಿ ದಸರಾ ಉದ್ಘಾಟನೆ, ಮೈಸೂರು ಅರಮನೆ ಆವರಣ ದಲ್ಲಿ ಜಂಬೂ ಸವಾರಿ, ಹತ್ತು ದಿನಗಳ ದೀಪಾಲಂಕಾರ ಮೊದಲಾದ ಕಾರ್ಯ ಕ್ರಮ ಏರ್ಪಡಿಸಲು ನಿರ್ಧರಿಸಲಾಗಿದೆ. ಈ ವೇಳೆ ಇಡೀ ಮೈಸೂರು ಸಂಭ್ರಮ ದಿಂದ ಕಂಗೊಳಿಸುವAತೆ ಹಾಗೂ ಹಬ್ಬದ ವಾತಾವರಣ ಸೃಷ್ಟಿಸುವಂತೆ ಜಿಲ್ಲಾಡಳಿತಕ್ಕೆ ಮುಖ್ಯಮಂತ್ರಿಯವರು ಸೂಚಿಸಿದ್ದಾರೆ. ಸೆಪ್ಟೆಂಬರ್ ೩ನೇ ವಾರದ ನಂತರ ೩ನೇ ಅಲೆ ಬರಬಹುದೆಂದು ತಜ್ಞರ ಅಭಿಪ್ರಾಯವಿದೆ. ಅಂದಿನ ಸ್ಥಿತಿಗತಿ ಗಳನ್ನು ತಿಳಿದು ಆಚರಣೆಯಲ್ಲಿ ನಂತರ ಬದಲಾವಣೆ ಮಾಡಿಕೊಳ್ಳೋಣ. ಆದರೆ ಜನಜಂಗುಳಿಯಾಗಲೀ, ಮೆರಣ ಗೆಯಾ ಗಲೀ ಇರುವುದಿಲ್ಲ. ದಸರಾ ಉದ್ಘಾಟನೆ ಸಮಾರಂಭ ಮತ್ತು ಮೆರವಣ ಗೆ ಸಂದರ್ಭದಲ್ಲಿ ಕಳೆದ ಬಾರಿ ೧೦೦ ಮತ್ತು ೨೫೦ಕ್ಕೆ ಸೀಮಿತವಾಗಿದ್ದ ಆಹ್ವಾನಿತರ ಸಂಖ್ಯೆಯನ್ನು ಹೆಚ್ಚಿಸುವ ಬಗ್ಗೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ನೋಡಿಕೊಂಡು ತೀರ್ಮಾನ ಮಾಡೋಣ ಎಂದು ಸ್ಥಳೀಯ ಜನಪ್ರತಿನಿಧಿಗಳಿಗೆ ಮುಖ್ಯಮಂತ್ರಿಯವರು ಭರವಸೆ ನೀಡಿದ್ದಾರೆ. ಕಳೆದ ಬಾರಿ ೩೦ ಕಿಲೋ ಮೀಟರ್
ಉದ್ದಗಲಕ್ಕೂ ದೀಪಾಲಂಕಾರ ಮಾಡಲಾಗಿತ್ತು. ಈ ಬಾರಿ ೪೫ ಕಿಲೋಮೀಟರ್ ಉದ್ದಗಲಕ್ಕೂ ದೀಪಾ ಲಂಕಾರ ಮಾಡುವಂತೆ ಸೂಚಿಸಿದ್ದಾರೆ. ಮೈಸೂರು ನಗರದ ರಸ್ತೆಗಳ ದುರಸ್ಥಿ ಮಾಡಲು ಪ್ರತ್ಯೇಕ ವರದಿಯೊಂದನ್ನು ಸರ್ಕಾರಕ್ಕೆ ಸಲ್ಲಿಸುವಂತೆಯೂ ಮೈಸೂರು ಪಾಲಿಕೆ ಆಯುಕ್ತರಿಗೆ ಮುಖ್ಯಮಂತ್ರಿಯವರು ಸೂಚಿಸಿದ್ದಾರೆ. ಕೊರೊನಾ ಸೋಂಕಿನ ಬಗ್ಗೆ ಇನ್ನು ಎಚ್ಚರಬೇಕಿದೆ. ಹೀಗಾಗಿ ನಾಡ ಹಬ್ಬಕ್ಕೆ ಮೈಸೂರು ನಗರ ಶೃಂಗಾರಗೊಳ್ಳಲಿ. ಸಂಭ್ರಮವಿರಲಿ. ಆದರೆ ಮೆರವಣ ಗೆ ಮತ್ತು ಜನದಟ್ಟಣೆಯಾಗುವುದು ಬೇಡ. ಹಿಂದಿನ ಬಾರಿ ನಡೆದಂತೆ ಎಲ್ಲಾ ರೀತಿಯ ಕಾರ್ಯಕ್ರಮಗಳು ಸರಳವಾಗಿ ನೆರವೇರಲಿ. ದಸರಾ ಸಂದರ್ಭದಲ್ಲಿ ಎಲ್ಲಿಯೂ ಗುಂಪುಗೂಡುವುದು, ಜನದಟ್ಟಣೆಯಾಗದಂತೆ ನೋಡಿಕೊಳ್ಳಬೇಕು. ಪ್ರವಾಸಿ ಕೇಂದ್ರಗಳಲ್ಲಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಿ ಎಂದು ತಿಳಿಸಿದ್ದಾರೆ. ವೈಭವದ ಆಚರಣೆಗೆ ನಮ್ಮ ವಿರೋಧವಿಲ್ಲ. ಆದರೆ ಸೋಂಕಿನ ಭೀತಿ ಇದೆ. ಸೆಪ್ಟೆಂಬರ್ ೩ನೇ ವಾರದಲ್ಲಿ ತಜ್ಞರ ಅಭಿಪ್ರಾಯ ಪಡೆದು, ಆಚರಣೆಯಲ್ಲಿ ಸಡಿಲಿಕೆ ಮಾಡೋಣ. ಕಳೆದ ಬಾರಿಗಿಂತ ಈ ಬಾರಿ ಸ್ವಲ್ಪ ವಿಜೃಂಭಣೆಗೆ ಹೆಚ್ಚು ಒತ್ತುಕೊಡಲು ಪ್ರಯತ್ನ ಮಾಡೋಣ ಎಂದಿದ್ದಾರೆ.

Translate »