ಸಾಮೂಹಿಕ ಅತ್ಯಾಚಾರ ಪ್ರಕರಣದ ಆತಂಕ ನಿವಾರಣೆಗೆ ಮುನ್ನವೇ ಮೈಸೂರಿನ ವಸತಿ ನಿಲಯಕ್ಕೆ ನುಗ್ಗಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ
ಮೈಸೂರು

ಸಾಮೂಹಿಕ ಅತ್ಯಾಚಾರ ಪ್ರಕರಣದ ಆತಂಕ ನಿವಾರಣೆಗೆ ಮುನ್ನವೇ ಮೈಸೂರಿನ ವಸತಿ ನಿಲಯಕ್ಕೆ ನುಗ್ಗಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ

September 4, 2021

ಘಟನೆ ನಡೆದ ಮರ‍್ನಾಲ್ಕು ಗಂಟೆಯಲ್ಲೇ ಆರೋಪಿ ಬಂಧನ
ನರಸಿಹರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಯುವತಿಗೆ ಆರೋಪಿ ಪರಿಚಯಸ್ಥ: ಪೊಲೀಸ್ ಆಯುಕ್ತ

ಮೈಸೂರು, ಸೆ.೩(ಎಸ್‌ಬಿಡಿ)- ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದ ಬೆನ್ನಲ್ಲೇ ಮೈಸೂರಿ ನಲ್ಲಿ ಶುಕ್ರವಾರ ಮತ್ತೊಂದು ಅತ್ಯಾಚಾರ ಪ್ರಕರಣ ನಡೆದಿದ್ದು, ಪರಿಚಿತ ಯುವತಿ ಮೇಲೆ ಅತ್ಯಾಚಾರ ವೆಸಗಿದ್ದ ಆರೋಪಿಯನ್ನು ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಪೊಲೀಸರು ಬಂಧಿಸಿದ್ದಾರೆ.

ಮೈಸೂರಿನ ಆರ್.ಎಸ್.ನಾಯ್ಡು ನಗರದ ಮುಖ್ಯ ರಸ್ತೆಯಲ್ಲಿರುವ ವಸತಿ ನಿಲಯವೊಂದರಲ್ಲಿ ಶುಕ್ರವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ವಸತಿ ನಿಲಯದಲ್ಲಿ ಯುವತಿಯೊಬ್ಬಳೇ ಇರುವುದನ್ನು ಖಚಿತಪಡಿಸಿಕೊಂಡ ಆಕೆಯ ಪರಿಚಿತ ಯುವಕ ಅತ್ಯಾಚಾರವೆಸಗಿ, ಚಾಕುವಿ ನಿಂದ ಕೈಗೆ ಗಾಯ ಮಾಡಿ, ಪರಾರಿಯಾಗಿದ್ದ. ಸಂತ್ರಸ್ತೆಯ ಸಹಪಾಠಿಗಳು ವಸತಿ ನಿಲಯಕ್ಕೆ ವಾಪಸ್ಸಾದಾಗ ಘಟನೆ ಬೆಳಕಿಗೆ ಬಂದಿದೆ. ವಿದ್ಯಾಭ್ಯಾಸ ಮಾಡಿಕೊಂಡು ವಸತಿ ನಿಲಯದಲ್ಲಿ ಆಶ್ರಯ ಪಡೆದಿರುವ ಯುವತಿ ಹಾಗೂ ಆರೋಪಿ ಯುವಕ ಕೆಲ ತಿಂಗಳಿAದ ಪರಿಚಿತರು ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಸಂತ್ರಸ್ತೆಯನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ದ್ದಾರೆ. ನಗರ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ನೇತೃತ್ವದಲ್ಲಿ ೩ ಗಂಟೆಗೂ ಹೆಚ್ಚು ಕಾಲ ಸ್ಥಳ ಪರಿಶೀಲನೆ ನಡೆಸಲಾಯಿತು. ಶ್ವಾನ ದಳ, ಬೆರಳಚ್ಚು ತಜ್ಞರು ತಪಾಸಣೆ ನಡೆಸಿ, ಸಾಕ್ಷö್ಯ ಸಂಗ್ರಹಿಸಿದರು. ಅಕ್ಕಪಕ್ಕದ ಕಚೇರಿ ಹಾಗೂ ಮನೆಗಳಲ್ಲಿ ಅಳವಡಿಸಿರುವ ಸಿಸಿಟಿವಿ ದೃಶ್ಯಾವಳಿಯನ್ನು ವೀಕ್ಷಿಸಿದರು. ವಸತಿ ನಿಲಯಕ್ಕೆ ಸಂಬAಧಿಸಿ ದವರು ಹಾಗೂ ಸಂತ್ರಸ್ತೆಯ ಸಹಪಾಠಿಗಳ ವಿಚಾರಣೆ ನಡೆಸಿ, ಮಾಹಿತಿ ಪಡೆದರು. ಒಂದೆಡೆ ಸ್ಥಳ ಪರಿಶೀಲನೆ ನಡೆಯುತ್ತಿದ್ದರೆ, ಮತ್ತೊಂದೆಡೆ ತಂತ್ರಜ್ಞಾನ ಸಹಾಯ ದೊಂದಿಗೆ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಅತ್ಯಾ ಚಾರ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾದರು. ಡಿಸಿಪಿ ಪ್ರದೀಪ್ ಗುಂಟಿ ನೇತೃತ್ವದಲ್ಲಿ ನಡೆದ ಮಿಂಚಿನ ಕಾರ್ಯಾಚರಣೆಯಲ್ಲಿ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಗೀತಾ ಪ್ರಸನ್ನ, ನರಸಿಂಹರಾಜ ವಿಭಾಗದ ಎಸಿಪಿ ಶಿವಶಂಕರ್, ನರಸಿಂಹರಾಜ ಠಾಣೆ ಇನ್‌ಸ್ಪೆಕ್ಟರ್ ಅಜರುದ್ದೀನ್ ಹಾಗೂ ಸಿಬ್ಬಂದಿ ಭಾಗಿಯಾ ಗಿದ್ದರು. ಈ ಸಂಬAಧ ನರಸಿಂಹರಾಜ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗಿದೆ.

ದಸರಾ ಉನ್ನತ ಮಟ್ಟದ ಸಮಿತಿ ಸಭೆ ಹಿನ್ನೆಲೆಯಲ್ಲಿ ಬೆಂಗಳೂರಿಗೆ ತೆರಳಿದ್ದ ನಗರ ಪೊಲೀಸ್ ಆಯುಕ್ತ ಚಂದ್ರಗುಪ್ತ, `ನರಸಿಂಹರಾಜ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಮಧ್ಯಾಹ್ನ ಅತ್ಯಾಚಾರ ಪ್ರಕರಣ ವರದಿಯಾಗಿದೆ. ಈ ಸಂಬAಧ ಎಫ್‌ಐಆರ್ ದಾಖಲಾ ಗಿದೆ. ಆರೋಪಿಯನ್ನು ಬಂಧಿಸಲಾಗಿದ್ದು, ಆತ ಸಂತ್ರಸ್ತೆಗೆ ಪರಿಚಿತನಾಗಿದ್ದಾನೆ’ ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಆತಂಕದಲ್ಲಿದ್ದ ಜನ: ಮೈಸೂರಿನ ನಿರ್ಜನ ಪ್ರದೇಶದಲ್ಲಿ ವಿದ್ಯಾರ್ಥಿನಿ ಮೇಲೆ ಕಾಮುಕರು ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಮಾಸುವ ಮುನ್ನವೇ ಜನನಿಬಿಡ ಪ್ರದೇಶದಲ್ಲೇ ಮತ್ತೊಂದು ಅತ್ಯಾಚಾರ ಘಟನೆ ನಡೆದಿದೆ. ಅಕ್ಕಪಕ್ಕದಲ್ಲಿ ಮನೆ, ಕಚೇರಿಗಳಿದ್ದರೂ ವಸತಿ ನಿಲಯಕ್ಕೆ ನುಗ್ಗಿ ಯುವತಿ ಮೇಲೆ ಅತ್ಯಾಚಾರ ನಡೆಸಿರುವುದು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿತ್ತು. ನೂರಾರು ಜನ ಸ್ಥಳದಲ್ಲಿ ಜಮಾಯಿಸಿ, ಪೊಲೀಸರ ಪರಿಶೀಲನಾ ಕಾರ್ಯವನ್ನು ಆತಂಕದಿAದಲೇ ನೋಡುತ್ತಿದ್ದರು. ಕೆಲವರು ತಮ್ಮ ಮನೆ ಕಾಂಪೌAಡ್, ಟೆರೇಸ್‌ನಲ್ಲಿ ನಿಂತು ಏನಾಗುತ್ತಿದೆ ಎಂದು ವೀಕ್ಷಿಸುತ್ತಿದ್ದರು. ಈ ರೀತಿಯ ಕೃತ್ಯಗಳು ಮೈಸೂರಿನಲ್ಲಿ ಒಂದರ ಹಿಂದೊAದು ನಡೆಯುತ್ತಿವೆ ಎಂದು ಮಾತನಾಡಿಕೊಳ್ಳುತ್ತಿದ್ದರು. ಆದರೆ ಸ್ಥಳ ಪರಿಶೀಲನೆ ವೇಳೆಯೇ ಅತ್ಯಾಚಾರವೆಸಗಿ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಪತ್ತೆಹಚ್ಚಿ ಬಂಧಿಸಿರುವುದು ಜನರ ಆತಂಕ ನಿವಾರಿಸಿದೆ.

Translate »