36ನೇ ವಾರ್ಡ್ ಉಪ ಚುನಾವಣೆ: ಶೇ.64.49 ಮತದಾನ
ಮೈಸೂರು

36ನೇ ವಾರ್ಡ್ ಉಪ ಚುನಾವಣೆ: ಶೇ.64.49 ಮತದಾನ

September 4, 2021

ಮೈಸೂರು, ಸೆ.೩(ಎಂಟಿವೈ)- ಮೈಸೂರು ಮಹಾನಗರ ಪಾಲಿಕೆಯ ೩೬ನೇ ವಾರ್ಡ್ನಲ್ಲಿ ಶುಕ್ರವಾರ ನಡೆದ ಉಪ ಚುನಾವಣೆಯಲ್ಲಿ ಶೇ.೬೪.೪೯ರಷ್ಟು ಮತದಾನವಾಗಿದೆ. ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವಿನ ಸಣ್ಣ ಪುಟ್ಟ ಮಾತಿನ ಚಕಮಕಿ ಹೊರತುಪಡಿಸಿದರೆ ಮತ ದಾನ ಬಹುತೇಕ ಶಾಂತಿಯುತವಾಗಿ ನಡೆಯಿತು.
ಮಾಜಿ ಮೇಯರ್ ರುಕ್ಮಿಣ ಮಾದೇಗೌಡ ಕಳೆದ ಚುನಾವಣೆಯಲ್ಲಿ ಸಲ್ಲಿಸಿದ್ದ ಪ್ರಮಾಣ ಪತ್ರದಲ್ಲಿ ಆಸ್ತಿ ವಿವರ ಮರೆಮಾಚಿದ್ದರಿಂದ ನ್ಯಾಯಾಲಯ ಅವರ ಸದಸ್ಯತ್ವ ಅಸಿಂಧುಗೊಳಿ ಸಿತ್ತು. ಅದರಿಂದ ತೆರವಾದ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಡೆದಿದ್ದು, ವಾರ್ಡ್ ವ್ಯಾಪ್ತಿಯ ನಾಲ್ಕು ಶಾಲೆಗಳಲ್ಲಿ ೧೧ ಮತಗಟ್ಟೆ ತೆರೆಯಲಾ ಗಿತ್ತು. ಬೆಳಗ್ಗೆ ೭ ಗಂಟೆಗೆ ಆರಂಭವಾದ ಮತ ದಾನ ಬಿರುಸಾಗಿ ಸಾಗಿತು. ಬೆಳಗ್ಗೆ ೧೦ ಗಂಟೆ ನಂತರ ಮತದಾನ ಮಾಡಲು ಬರುವವರ ಸಂಖ್ಯೆ ಅಲ್ಪಮಟ್ಟಿಗೆ ತಗ್ಗಿತು. ಮಧ್ಯಾಹ್ನ ೩ ಗಂಟೆ ನಂತರ ಮತದಾನ ಮತ್ತೆ ಚುರುಕು ಪಡೆಯಿತು.

ವಾರ್ಡ್ ವ್ಯಾಪ್ತಿಯ ಶಿಕ್ಷಕರ ಕಾಲೋನಿ ಮೌಲಾನ ಅಜಾದ್ ರೆಸಿಡೆನ್ಸಿಯಲ್ ಬಾಲಕಿ ಯರ ಶಾಲೆ, ಯರಗನಹಳ್ಳಿ ಹೊಸ ಬಡಾ ವಣೆಯ ವಿಜಯ ಕಾನ್ವೆಂಟ್, ಯರಗನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪೂರ್ವ ಮತ್ತು ದಕ್ಷಿಣ ಭಾಗದ ಮತಗಟ್ಟೆಗಳಲ್ಲಿ ಬೆಳಿಗ್ಗೆಯಿಂದಲೇ ಮತದಾರರು ಉತ್ಸಾಹದಿಂದ ಪಾಲ್ಗೊಂಡು ತಮ್ಮ ಹಕ್ಕನ್ನು ಚಲಾಯಿಸಿದರು. ಬೆಳಿಗ್ಗೆ ೧೧ ಗಂಟೆವರೆಗೆ ಶೇ.೨೫ರಷ್ಟು ಮತದಾನ ವಾದರೆ, ಮಧ್ಯಾಹ್ನ ೧ ಗಂಟೆಗೆ ಶೇ.೪೦ರಷ್ಟು ದಾಟಿತ್ತು. ಮಧ್ಯಾಹ್ನ ೩ ಗಂಟೆವರೆಗೆ ಸ್ವಲ್ಪ ವಿರಳವಾಯಿತು. ನಂತರ ಸಂಜೆ ೬ರವರೆಗೂ ಮತದಾರರು ಆಗಮಿಸಿ ಮತ ಚಲಾಯಿಸಿದರು. ೩೬ನೇ ವಾರ್ಡಿನಲ್ಲಿ ಪುರುಷರು ೫,೨೬೮, ಮಹಿಳೆ ಯರು ೫,೩೮೫ ಹಾಗೂ ಇತರೆ ಮೂವರು ಸೇರಿ ಒಟ್ಟು ೧,೦೬೫೬ ಮತದಾರರಿದ್ದು, ಶೇ.೬೪.೪೯ ರಷ್ಟು ಮತದಾನವಾಗಿದೆ. ೧೧ ಮತಗಟ್ಟೆಗಳಲ್ಲಿ ೬,೮೬೯ ಮತದಾರರು ಹಕ್ಕು ಚಲಾಯಿಸಿದ್ದಾರೆ.

ಮೈಸೂರಿನ ಸಯ್ಯಾಜಿರಾವ್ ರಸ್ತೆಯಲ್ಲಿರುವ ಮಹಾರಾಜ ಸಂಸ್ಕೃತ ಪಾಠಶಾಲೆಯಲ್ಲಿ ಸೆ.೬ರಂದು ಮತ ಎಣ ಕೆ ನಡೆಯಲಿದ್ದು, ಮಧ್ಯಾಹ್ನ ಫಲಿತಾಂಶ ಪ್ರಕಟವಾಗಲಿದೆ.
ಉಪ ಚುನಾವಣೆಗೆ ಕಾರಣ: ೨೦೧೮ರ ಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ರುಕ್ಮಿಣ ಮಾದೇಗೌಡ ಜಯ ಗಳಿಸಿದ್ದರು. ರುಕ್ಮಿಣ ಮಾದೇಗೌಡ ಚುನಾವಣಾ ಆಯೋಗಕ್ಕೆ ಆಸ್ತಿ ವಿವರ ಸಲ್ಲಿಸುವಾಗ ತಪುö್ಪಮಾಹಿತಿ ನೀಡಿದ್ದಾ ರೆಂದು ಆರೋಪಿಸಿಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಸಿ.ಎಸ್.ರಜನಿ ಅಣ್ಣಯ್ಯ ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯ ರುಕ್ಮಿಣ ಅವರ ಸದಸ್ಯತ್ವ ಅಸಿಂಧುಗೊಳಿಸಿ ಉಪ ಚುನಾವಣೆಗೆ ಆದೇಶ ನೀಡಿತ್ತು. ಪರಿಣಾಮ ರುಕ್ಮಿಣ ಅವರು ಕೆಲ ದಿನಗಳಲ್ಲೇ ಮೇಯರ್ ಸ್ಥಾನ ಕಳೆದುಕೊಂಡಿದ್ದರು. ಉಪ ಚುನಾವಣೆ ಹಿನ್ನೆಲೆಯಲ್ಲಿ ೩೬ನೇ ವಾರ್ಡ್ ವ್ಯಾಪ್ತಿಗೆ ಒಳಪಡುವ ವಿವಿಧ ಬಡಾವಣೆಗಳಲ್ಲಿ ಚುನಾವಣಾ ಅಕ್ರಮ ತಡೆಗಟ್ಟಲು ಹದ್ದಿನ ಕಣ ್ಣಡಲಾಗಿತ್ತು. ಚುನಾವಣಾಧಿಕಾರಿಯಾಗಿ ಎಂ. ಕಾರ್ತಿಕ್ ಕಾರ್ಯನಿರ್ವಹಿಸಿದರು. ಪ್ರತಿ ಮತಗಟ್ಟೆಯಲ್ಲೂ ೪-೫ ಮಂದಿ ಭದ್ರತಾ ಸಿಬ್ಬಂದಿಗಳಿದ್ದರು. ಮತಗಟ್ಟೆ ಅಧಿಕಾರಿ ನೇತೃತ್ವದಲ್ಲಿ ೪-೫ ಮಂದಿ ಮತಗಟ್ಟೆ ಸಿಬ್ಬಂದಿ ಚುನಾವಣಾ ಕರ್ತವ್ಯ ನಿರ್ವಹಿಸಿದರು.

Translate »