ಮೈಸೂರು, ಸೆ.೩ (ಆರ್‌ಕೆಬಿ)- ಮೈಸೂರು ವಿವಿ ಹಾಸ್ಟೆಲ್‌ನಲ್ಲಿ ಕಳಪೆ ಆಹಾರ ಪೂರೈಕೆ ಮಾಡ ಲಾಗುತ್ತಿದೆ ಎಂದು ಆರೋಪಿಸಿ ಶುಕ್ರವಾರ ಹಾಸ್ಟೆಲ್ ವಿದ್ಯಾರ್ಥಿಗಳು ಮಾನಸಗಂಗೋತ್ರಿಯ ಮುಖ್ಯ ದ್ವಾರದಲ್ಲಿ ಪ್ರತಿಭಟನೆ ನಡೆಸಿದರು.
ಮೈಸೂರು ವಿವಿ ದಲಿತ ವಿದ್ಯಾರ್ಥಿ ಒಕ್ಕೂಟ, ಮೈಸೂರು ವಿವಿ ಸಂಶೋಧಕರ ಸಂಘದ ಆಶ್ರಯ ದಲ್ಲಿ ವಿದ್ಯಾರ್ಥಿಗಳು ಮಾನಸ ಗಂಗೋತ್ರಿಯ ಮುಖ್ಯ ಪ್ರವೇಶ ದ್ವಾರವನ್ನು ಬಂದ್ ಮಾಡಿದರು. ಹಾಸ್ಟೆಲ್‌ನ ಆಹಾರ ಪದಾರ್ಥಗಳನ್ನು ರಸ್ತೆಯಲ್ಲಿ ಪ್ರದರ್ಶಿಸಿದರು. ಗುಣಮಟ್ಟದ ಆಹಾರ ಪೂರೈಸುವಂತೆ ಒತ್ತಾಯಿಸಿದರು.
ಹಾಸ್ಟೆಲ್‌ನಲ್ಲಿ ಊಟಕ್ಕೆ ಸಂದಾಯವಾಗುತ್ತಿರುವ ದರಕ್ಕೆ ಅನುಗುಣವಾಗಿ ಗುಣಮಟ್ಟದ ರುಚಿಕರ ಆಹಾರ ನೀಡುತ್ತಿಲ್ಲ. ಕುಡಿಯವ ನೀರು, ಶೌಚಾಲಯ ವ್ಯವ ಸ್ಥೆಯೂ ಸರಿಯಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ನಿತ್ಯ ತೊಂದರೆ ಅನುಭವಿಸುತ್ತಿದ್ದೇವೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿ ಮುಖಂಡ ಸಂಶೋಧಕ ಬಿ.ಸಿ.ಸಂಜಯ್ ಮಾತನಾಡಿ, ಹಾಸ್ಟೆಲ್ ನಲ್ಲಿ ಗುಣಮಟ್ಟದ ಆಹಾರ ಪೂರೈಸುವಂತೆ ಹಲವು ಬಾರಿ ಹೋರಾಟ ನಡೆಸಿದ ಪರಿಣಾಮ ಗುತ್ತಿಗೆ ವ್ಯವಸ್ಥೆ ತೆಗೆದು ವಾರ್ಡನ್‌ನಿಂದ ಊಟದ ವ್ಯವಸ್ಥೆ ಮಾಡಿ ದ್ದರೂ ಊಟದ ವ್ಯವಸ್ಥೆ ಸರಿಹೋಗಿಲ್ಲ. ಸೆ.೧೫ ಮತ್ತು ೧೬ರಂದು ನ್ಯಾಕ್ ಸಮಿತಿ ವಿವಿಗೆ ಭೇಟಿ ನೀಡುತ್ತಿದ್ದು, ಇಂತಹ ಸಮಯದಲ್ಲಿಯೇ ಕಳಪೆ ಆಹಾರ ಪೂರೈಸ ಲಾಗುತ್ತಿದೆ ಎಂದು ವಿದ್ಯಾರ್ಥಿಗಳು ಖಂಡಿಸಿದರು.
ಬಳಿಕ ಮೈಸೂರು ವಿವಿ ಕುಲಸಚಿವ ಪ್ರೊ.ಆರ್. ಶಿವಪ್ಪ ಸ್ಥಳಕ್ಕೆ ಭೇಟಿ ನೀಡಿ, ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರಾದರೂ ಇದಕ್ಕೆ ಪ್ರತಿಭಟನಾ ಕಾರರು ಒಪ್ಪಲಿಲ್ಲ. ನಂತರ ಕುಲಪತಿ ಪ್ರೊ.ಜಿ. ಹೇಮಂತ್‌ಕುಮಾರ್ ಭೇಟಿ ನೀಡಿ, ಗುಣಮಟ್ಟದ ರುಚಿಕರ ಆಹಾರ ಪೂರೈಸುವ ಜೊತೆಗೆ ಮೂಲ ಸೌಕರ್ಯ ಅಭಿವೃದ್ದಿಗೆ ಒತ್ತು ನೀಡುವುದಾಗಿ ನೀಡಿದ ಭರವಸೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪ್ರತಿ ಭಟನೆಯನ್ನು ವಾಪಸ್ ಪಡೆದರು.
ಪ್ರತಿಭಟನೆಯಲ್ಲಿ ದಲಿತ ವಿದ್ಯಾರ್ಥಿಗಳ ಒಕ್ಕೂಟ ಕಿರಣ್, ಮಣ , ವಿಶ್ವಪ್ರಸಾದ್, ಚೇತನ್, ಸಂಶೋ ಧಕರ ಸಂಘದ ಪದಾಧಿಕಾರಿಗಳಾದ ಮರಿದೇವಯ್ಯ, ಗೋಪಾಲ್, ನಾಗೇಶ್, ಮದನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.