ತಮಿಳುನಾಡಿಗೆ ನೀರು ಬಿಡದಂತೆ ಆಗ್ರಹಿಸಿ ತಲೆ ಮೇಲೆ ಕಲ್ಲು ಹೊತ್ತು ಪ್ರತಿಭಟನೆ
Uncategorized, ಮೈಸೂರು

ತಮಿಳುನಾಡಿಗೆ ನೀರು ಬಿಡದಂತೆ ಆಗ್ರಹಿಸಿ ತಲೆ ಮೇಲೆ ಕಲ್ಲು ಹೊತ್ತು ಪ್ರತಿಭಟನೆ

September 4, 2021

ಮೈಸೂರು, ಸೆ.೩(ಆರ್‌ಕೆಬಿ)- ತಮಿಳು ನಾಡಿಗೆ ೩೦.೬ ಟಿಎಂಸಿ ನೀರು ಬಿಡುವಂತೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿ ಕಾರ ಸೂಚಿಸಿರುವುದನ್ನು ಖಂಡಿಸಿ, ಮೈಸೂರು ಜಿಲ್ಲಾ ಚಳವಳಿಗಾರರ ಸಂಘದ ಕಾರ್ಯಕರ್ತರು ಶುಕ್ರವಾರ ತಲೆಯ ಮೇಲೆ ಕಲ್ಲು ಹೊತ್ತು, ಜಿಲ್ಲಾಧಿಕಾರಿ ಕಚೇರಿ ಬಳಿ ವಿನೂತನ ಪ್ರತಿಭಟನೆ ನಡೆಸಿದರು.

ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿ ಕಾರವು ತಮಿಳುನಾಡಿಗೆ ಜೂನ್, ಜುಲೈ, ಆಗಸ್ಟ್ ತಿಂಗಳ ಬಾಕಿ ೩೦.೬ ಟಿಎಂಸಿ ನೀರು ಹರಿಸುವಂತೆ ಕರ್ನಾಟಕಕ್ಕೆ ಸೂಚಿಸಿರು ವುದನ್ನು ಖಂಡಿಸಿದರು. ಕಾವೇರಿ ಕೊಳ್ಳ ದಲ್ಲಿ ಶೇ.೨೫ರಷ್ಟು ಮಳೆ ಕೊರತೆಯಾಗಿದೆ. ೨೮ ಟಿಎಂಸಿಯಷ್ಟು ನೀರು ಕೊರತೆ ಯಾಗಿದೆ. ಇದೇ ಪರಿಸ್ಥಿತಿ ಮುಂದುವರಿ ದರೆ ಜನ ಜಾನುವಾರುಗಳಿಗೆ ನೀರಿನ ತೊಂದರೆ ಉಂಟಾಗಲಿದೆ. ಅಲ್ಲದೆ ರೈತರು ಭತ್ತ, ಕಬ್ಬು ಇತ್ಯಾದಿ ಬೆಳೆಗಳನ್ನು ಬಿತ್ತುವ ಕಾರ್ಯದಲ್ಲಿ ತೊಡಗಿದ್ದಾರೆ. ಈ ಬಗ್ಗೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಮನ ವರಿಕೆ ಮಾಡಿಕೊಡಬೇಕು. ಯಾವುದೇ ಕಾರಣಕ್ಕೂ ನೀರು ಬಿಡಲಾಗದು ಎಂಬ ದಿಟ್ಟ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಳ್ಳಬೇಕು ಎಂದು ಪ್ರತಿಭಟನಾ ಕಾರರು ಆಗ್ರಹಿಸಿದರು.
ಮೇಕೆದಾಟು ಯೋಜನೆ ಶೀಘ್ರ ಕೈಗೆತ್ತಿ ಕೊಳ್ಳಬೇಕು. ರಾಜ್ಯದ ಜಲಾಶಯಗಳು ತಮಿಳುನಾಡಿನ ನೀರು ಸಂಗ್ರಹಣಾ ತೊಟ್ಟಿ ಗಳಲ್ಲ ಎಂಬುದನ್ನು ಕೇಂದ್ರಕ್ಕೆ ಮನವರಿಕೆ ಮಾಡಿಕೊಡಬೇಕು. ಕಾವೇರಿ ನದಿ ನೀರು ಪ್ರಾಧಿಕಾರ ರದ್ದುಪಡಿಸಬೇಕು. ರಾಷ್ಟಿçÃಯ ಜಲನೀತಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಬಿ.ಎ.ಶಿವಶಂಕರ್, ಉಪಾಧ್ಯಕ್ಷ ಸೋಗಹಳ್ಳಿ ತುಂಗ, ಪದಾಧಿಕಾರಿಗಳಾದ ದೂರ ಸುರೇಶ್, ವೀರನಹಳ್ಳಿ ಕುಮಾರ್, ನಂಜನಗೂಡು ಜಯಕುಮಾರ್, ಹುಣ ಸೂರು ರಮೇಶ್, ಟಿ.ನರಸೀಪುರ ಮಹದೇವ ಸ್ವಾಮಿ, ಹರದನಹಳ್ಳಿ ಬಸವರಾಜು, ಪ್ರಸನ್ನ ಕುಮಾರ್, ರಾಮೇಗೌಡ ಇನ್ನಿ ತರರು ಉಪಸ್ಥಿತರಿದ್ದರು.

Translate »