ಪದವಿ, ಸ್ನಾತಕೋತ್ತರ ಪದವಿ ತರಗತಿ ಆರಂಭ
ಮೈಸೂರು

ಪದವಿ, ಸ್ನಾತಕೋತ್ತರ ಪದವಿ ತರಗತಿ ಆರಂಭ

January 20, 2021

ಮೈಸೂರು, ಜ.19(ಆರ್‍ಕೆ)-ಕೋವಿಡ್-19 ನಿರ್ಬಂಧದಿಂದಾಗಿ ಕಳೆದ 8 ತಿಂಗ ಳಿಂದ ಸ್ಥಗಿತ ಗೊಂಡಿದ್ದ ಮೈಸೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಪದವಿ, ಸ್ನಾತಕೋತ್ತರ ಪದವಿ ತರಗತಿ (ಆಫ್ ಲೈನ್)ಗಳು ಇಂದಿನಿಂದ ಆರಂಭ ವಾದವು. ನಿನ್ನೆ (ಜ.18)ಯಷ್ಟೇ ಕಾಲೇಜು ಪ್ರಾಂಶುಪಾಲರುಗಳ ಸಭೆ ಯಲ್ಲಿ ತರಗತಿ ಆರಂಭವಾಗುವ ಬಗ್ಗೆ ತೀರ್ಮಾನ ಕೈಗೊಂಡಂತೆ ಮಹಾರಾಜ, ಯುವರಾಜ, ಮಹಾರಾಣಿ ಸೇರಿದಂತೆ ಎಲ್ಲಾ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾ, ಪಿಜಿ ಡಿಪ್ಲೊಮಾ ಕೋರ್ಸುಗಳ ಸೆಮಿಸ್ಟರ್ ತರಗತಿಗಳು ಆರಂಭವಾಗಿದ್ದು, ಮೊದಲ ದಿನವಾದ ಇಂದು ಶೇ.60 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಹಾಜರಾಗಿದ್ದರು ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಜಿ. ಹೇಮಂತಕುಮಾರ್ `ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

ಕಾಲೇಜುಗಳಲ್ಲಿ ಥರ್ಮಲ್ ಸ್ಕ್ಯಾನಿಂಗ್, ಸ್ಯಾನಿಟೈಸ್, ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದು ಕೊಳ್ಳುವುದು, ಸ್ವಚ್ಛತೆ, ಕ್ಯಾಂಟಿನ್‍ಗಳಲ್ಲಿ ಬಿಸಿ ನೀರು ಪೂರೈಸುವುದೂ ಸೇರಿದಂತೆ ಸರ್ಕಾರದ ಮಾರ್ಗಸೂಚಿ ಯನ್ವಯ ಕೊರೊನಾ ವೈರಸ್ ಹರಡದಂತೆ ಎಲ್ಲಾ ಸುರ ಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ವಿಶ್ವವಿದ್ಯಾನಿಲಯ, ಬೇರೆ ಬೇರೆ ಇಲಾಖಾ ವಿದ್ಯಾರ್ಥಿನಿಲಯಗಳನ್ನೂ ಆರಂಭಿಸಲಾಗಿದ್ದು, ಕೊಠಡಿಗಳು, ಅಡುಗೆ ಮನೆಗಳನ್ನು ಸ್ವಚ್ಛಗೊಳಿಸಿ ಸ್ಯಾನಿಟೈಸ್ ಮಾಡಿ, ನಿರಂತರ ವಾಗಿ ಈ ವ್ಯವಸ್ಥೆಯನ್ನು ಮೇಲ್ವಿಚಾರಣೆ ಮಾಡಲೆಂದು ಪ್ರತ್ಯೇಕ ಸಿಬ್ಬಂದಿಗೆ ಜವಾಬ್ದಾರಿ ನೀಡಲಾಗಿದೆ. ವಾರ್ಡನ್ ಗಳೂ ಕೊರೊನಾ ವೈರಸ್ ಹರಡದಂತೆ ಅಗತ್ಯ ಮುಂಜಾ ಗ್ರತಾ ಕ್ರಮ ವಹಿಸಬೇಕೆಂದು ಸೂಚನೆ ನೀಡಲಾಗಿದೆ ಎಂದು ಪ್ರೊ.ಹೇಮಂತಕುಮಾರ್ ತಿಳಿಸಿದರು. ಕೇವಲ ಆನ್‍ಲೈನ್ ತರಗತಿಗಳಲ್ಲಿ ಪಾಲ್ಗೊಳ್ಳುತ್ತಿದ್ದ ವಿದ್ಯಾರ್ಥಿಗಳು ನಿರ್ಭಯ ವಾಗಿ ಆಫ್‍ಲೈನ್ ತರಗತಿ ಗಳಿಗೂ ಹಾಜರಾಗುತ್ತಿರುವುದು ಉತ್ತಮ ಬೆಳವಣಿಗೆ ಯಾಗಿರುವುದರಿಂದ ಪಠ್ಯಕ್ರಮ ಪೂರ್ಣಗೊಳಿಸಿ ಪರೀಕ್ಷೆಯನ್ನು ಸುಲಲಿತವಾಗಿ ನಡೆಸುತ್ತೇವೆ ಎಂದು ಮೈವಿವಿ ಕುಲಪತಿ ಹೇಮಂತ್‍ಕುಮಾರ್ ತಿಳಿಸಿದರು.

 

 

 

 

Translate »