ಮದುವೆ, ಇತರೆ ಸಮಾರಂಭ ನಿಷೇಧಿಸಿ: ಕುರುಬೂರು ಆಗ್ರಹ
ಮೈಸೂರು

ಮದುವೆ, ಇತರೆ ಸಮಾರಂಭ ನಿಷೇಧಿಸಿ: ಕುರುಬೂರು ಆಗ್ರಹ

July 9, 2020

ಮೈಸೂರು, ಜು.8 (ಆರ್‍ಕೆಬಿ)- ರಾಜ್ಯ ದಲ್ಲಿ ಮಹಾಮಾರಿ ಕೊರೊನಾ ಸೋಂಕು ಪ್ರಕರಣಗಳು ತೀವ್ರಗತಿಯಲ್ಲಿ ಹೆಚ್ಚುತ್ತಿದ್ದು, ಮದುವೆ ಮೊದಲಾದ ಸಮಾರಂಭ ಗಳನ್ನು ನಿಷೇಧಿಸುವಂತೆ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ಅವರಿಗೆ ಬರೆದ ಪತ್ರದಲ್ಲಿ ಸೋಂಕು ತಗಲುವುದು ಮತ್ತು ಸಾವಿನ ಸಂಖ್ಯೆ ದಿನೇದಿನೆ ಏರಿಕೆಯಾಗುತ್ತಲೇ ಇದೆ. ಅಲ್ಲದೇ ಸೋಂಕು ತಗುಲಿದವರಿಗೆ ಚಿಕಿತ್ಸೆ ಕೊಡಿಸಲೂ ಸರ್ಕಾರಕ್ಕೆ ಸಮಸ್ಯೆ ಯಾಗುತ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಹಾಗೂ ಚಿಕಿತ್ಸೆ ಸಮಸ್ಯೆ ಹೆಚ್ಚು ತ್ತಿದೆ. ಇಂಥ ವಿಚಾರ ಗಳಲ್ಲಿ ಜನರು ಗಂಭೀರವಾಗಿ ಚಿಂತಿ ಸದೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಮದುವೆ, ನಾಮಕರಣ, ಹುಟ್ಟುಹಬ್ಬ ಸಮಾರಂಭ ಗಳಲ್ಲಿ ಹೆಚ್ಚು ಜನರನ್ನು ಸೇರಿಸಿ, ಯಾವುದೇ ಮುಂಜಾಗ್ರತಾ ಕ್ರಮ ಪಾಲಿಸದೆ ನಡೆಸು ತ್ತಿದ್ದಾರೆ. ಇದರಿಂದ ಸೋಂಕು ಹೆಚ್ಚುತ್ತಲೇ ಇದೆ. ಬಾಗಲಕೋಟೆ ಜಿಲ್ಲಾಡಳಿತ ಸಮಾ ರಂಭಗಳನ್ನು ನಿಷೇಧಿಸಿ ಆದೇಶ ಹೊರಡಿ ಸಿದೆ. ಅತೀ ಅವಶ್ಯಕವಿದ್ದಲ್ಲಿ ಜಿಲ್ಲಾಡ ಳಿತದ ಅನುಮತಿ ಪಡೆಯಬೇಕೆಂದು ಆದೇ ಶಿಸಿದೆ. ಇದೇ ಮಾದರಿ ಕ್ರಮವನ್ನು ಇಡೀ ರಾಜ್ಯಾದ್ಯಂತ ಅಳವಡಿಸಿಕೊಳ್ಳಬೇಕು. ಮದುವೆ ಮತ್ತಿತರ ಸಮಾರಂಭಗಳನ್ನು ನಿಷೇಧಿಸಬೇಕು. ಆದೇಶ ಉಲ್ಲಂಘಿಸಿದವ ರಿಗೆ ದಂಡ ವಿಧಿಸುವ ಎಚ್ಚರಿಕೆ ನೀಡ ಬೇಕು ಎಂದು ಒತ್ತಾಯಿಸಿದ್ದಾರೆ.

Translate »