ಬೆಂಗಳೂರು: ದಾಖಲೆ ರಹಿತ 65 ಲಕ್ಷ ರೂ. ಹಣ ಸಾಗಾಟ, ಮೂವರು ಪೆÇಲೀಸ್ ವಶಕ್ಕೆ!
ಮೈಸೂರು

ಬೆಂಗಳೂರು: ದಾಖಲೆ ರಹಿತ 65 ಲಕ್ಷ ರೂ. ಹಣ ಸಾಗಾಟ, ಮೂವರು ಪೆÇಲೀಸ್ ವಶಕ್ಕೆ!

September 4, 2020

ಬೆಂಗಳೂರು: ದಾಖಲೆ ಇಲ್ಲದ ಸುಮಾರು 65 ಲಕ್ಷ ರೂ ಹಣ ವನ್ನು ಸಾಗಿಸುತ್ತಿದ್ದ ಆರೋಪದ ಮೇರೆಗೆ ಬೆಂಗಳೂರಿನ ಕೆಆರ್ ಮಾರುಕಟ್ಟೆ ಪೆÇಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ. ಅಕ್ರಮವಾಗಿ ಸಾಗಿಸುತ್ತಿದ್ದ 65 ಲಕ್ಷ ರೂ. ಹಣವನ್ನು ಸಿಟಿ ಮಾರ್ಕೆಟ್ ಠಾಣೆ ಪೆÇಲೀಸರು ಜಪ್ತಿ ಮಾಡಿದ್ದು, ಈ ಸಂಬಂಧ ಮೂವರನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ದಸ್ತಗಿರ್, ಕಿರಣ್‍ಕುಮಾರ್ ಮತ್ತು ಮಸ್ತಾನ್ ಎಂದು ಗುರುತಿಸಲಾಗಿದೆ. ಮೂಲಗಳ ಪ್ರಕಾರ ಆಂಧ್ರಪ್ರದೇಶದ ನೋಂದಣಿಯುಳ್ಳ ಎರ್ಟಿಗಾ ಕಾರಿನಲ್ಲಿ ಆರ್.ಟಿ. ಸ್ಟ್ರೀಟ್‍ನ ರಂಗಸ್ವಾಮಿ ದೇವಸ್ಥಾನದ ಬಳಿ ಬಂದಿದ್ದ ಮೂವರು ಆರೋಪಿಗಳು ಅನುಮಾನಾಸ್ಪದವಾಗಿ ಓಡಾಡುತ್ತಿದ್ದರು. ಬೀಟ್ ನಲ್ಲಿದ್ದ ಸಿಟಿ ಮಾರ್ಕೆಟ್ ಪೆÇಲೀಸರು ಇದನ್ನು ಗಮನಿಸಿ ಅವ ರನ್ನು ವಿಚಾರಿಸಿದ್ದಾರೆ. ಪೆÇಲೀಸರ ವಿಚಾರಣೆ ವೇಳೆ ಆರೋಪಿ ಗಳು ತಬ್ಬಿಬ್ಬಾಗಿದ್ದು, ಕಾರಿನಲ್ಲಿ 20 ಲಕ್ಷ ರೂ ಹಣವಿದೆ ಎಂದು ಹೇಳಿದ್ದಾರೆ. ಅನುಮಾನದ ಮೇಲೆ ಪೆÇಲೀಸರು ಕಾರಿನ ಡಿಕ್ಕಿ ತೆಗೆಸಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಬ್ಯಾಗ್ ಪತ್ತೆಯಾಗಿದ್ದು, ಬ್ಯಾಗ್‍ನಲ್ಲಿ 65 ಲಕ್ಷ ರೂ. ಹಣವಿರುವುದು ಪತ್ತೆಯಾಗಿದೆ. ಕೂಡಲೇ ಬೀಟ್ ಪೆÇಲೀಸರು ಇನ್ಸ್‍ಪೆಕ್ಟರ್ ಕುಮಾರಸ್ವಾಮಿ ಅವರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು, ಬ್ಯಾಗ್ ಅನ್ನು ಜಪ್ತಿ ಮಾಡಿ ಮೂವರನ್ನೂ ವಶಕ್ಕೆ ಪಡೆದಿದ್ದಾರೆ. ಕೆಆರ್ ಮಾರುಕಟ್ಟೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

Translate »