ಮೈಸೂರು, ಸೆ.12(ಎಂಟಿವೈ)- ಕೊರೊನಾ ಹಾವಳಿ ಯಿಂದಾಗಿ ತತ್ತರಿಸಿರುವ ಪ್ರವಾಸೋದ್ಯಮಕ್ಕೆ ಚೈತನ್ಯ ತುಂಬು ವುದರೊಂದಿಗೆ ಪ್ರವಾಸಿಗರನ್ನು ಸೆಳೆಯುವ ಸಲುವಾಗಿ ಕರ್ನಾ ಟಕ ಟೂರಿಸಂ ಫೆÇೀರಂ(ಕೆಟಿಎಫ್) ನಡೆಸಿದ `ರ್ಯಾಲಿ ಟೂ ಪ್ರಮೋಟ್ ಟೂರಿಸಂ’ ಬೈಕ್ ರ್ಯಾಲಿಯಲ್ಲಿ 12 ರೈಡರ್‍ಗಳು ಬೆಂಗಳೂರಿಂದ ಮೈಸೂರಿಗೆ ಶನಿವಾರ ಆಗಮಿಸಿದರು.
ಬೆಂಗಳೂರಿನ ಯುಬಿ ಸಿಟಿಯಿಂದ ಶನಿವಾರ ಬೆಳಗ್ಗೆ ರ್ಯಾಲಿ ಹೊರಟ ಬೈಕ್ ಸವಾರರು ಮಧ್ಯಾಹ್ನ 12.30ಕ್ಕೆ ಮೈಸೂರಿಗೆ ತಲುಪಿದರು. ಹೈವೆ ವೃತ್ತದ ಗ್ರಾಂಡ್ ಮಕ್ರ್ಯೂರ್ ಹೋಟೆಲ್ ಬಳಿ ಇಂಡಿಯನ್ ಮೋಟಾರ್ ಸೈಕಲ್ ರೈಡರ್ಸ್ ಗ್ರೂಪ್‍ನ 12 ಬೈಕ್ ಸವಾರರನ್ನು ಸೇಫ್ ವೀಲ್ಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಬಿ.ಎಸ್.ಪ್ರಶಾಂತ್ ಬರಮಾಡಿಕೊಂಡರು.
ಬಳಿಕ ಮಾತನಾಡಿದ ಅವರು, ಕೊರೊನಾ ಮತ್ತು ಲಾಕ್ ಡೌನ್ ಹಿನ್ನೆಲೆಯಲ್ಲಿ ಪ್ರವಾಸೋದ್ಯಮಕ್ಕೆ ಭಾರಿ ಹೊಡೆತ ಬಿದ್ದಿದೆ. ಸೆ.1ರಿಂದ ಲಾಕ್‍ಡೌನ್ ನಿಯಮ ಸಡಿಲಗೊಂಡಿದ್ದರೂ ಜನರಲ್ಲಿ ರುವ ಭಯ ಹೋಗಿಲ್ಲ. ಇದಕ್ಕೆ ಪರಿಹಾರವಾಗಿ ಕೆಟಿಎಫ್ ಬೈಕ್ ರ್ಯಾಲಿ ಆಯೋಜಿಸಿದೆ ಎಂದರು.
ಪ್ರವಾಸೋದ್ಯಮವನ್ನೇ ಅವಲಂಬಿಸಿದ ಸಾವಿರಾರು ಕುಟುಂಬ ಗಳು ಸಂಕಷ್ಟಕ್ಕೆ ಸಿಲುಕಿವೆ. ಎಲ್ಲಾ ಚಟುವಟಿಕೆ ಆರಂಭವಾಗಿ ದ್ದರೂ ಪ್ರವಾಸೋದ್ಯಮ ಚೇತರಿಕೆ ಕಾಣುತ್ತಿಲ್ಲ. ಪ್ರವಾಸಿ ತಾಣಗಳು ಸುರಕ್ಷಿತವಾಗಿವೆ. ಪ್ರವಾಸಿಗರು ಭಯವಿಲ್ಲದೆ ಬರಬಹುದು ಎಂದು ಜಾಗೃತಿ ಮೂಡಿಸಲೆಂದೇ ಬೈಕ್ ರ್ಯಾಲಿ ಹಮ್ಮಿಕೊಳ್ಳ ಲಾಗಿದೆ. ಅಂತರ, ಸ್ವ-ಸುರಕ್ಷತೆಯ ನಿಯಮಗಳನ್ನು ಪಾಲಿಸಿದರೆ ಪ್ರವಾಸಿ ತಾಣಗಳಿಗೆ ತೆರಳುವುದು ಸುರಕ್ಷಿತ ಎಂಬ ಅರಿವು ಮೂಡಿಸಲು ರ್ಯಾಲಿ ಸಹಕಾರಿಯಾಗಲಿದೆ ಎಂದರು. ಈ ಸಂದರ್ಭ ಗ್ರಾಂಡ್ ಮಕ್ರ್ಯೂರ್ ಹೋಟೆಲ್ ಎಂಡಿ ಸುನೈನಾ ಮನೇರ್ಕರ್ ಇದ್ದರು. ಬೈಕ್ ರ್ಯಾಲಿಯಲ್ಲಿ ಅನಿಲ್, ಸುರೇಶ್ ನಾಯರ್ ಮತ್ತಿತರರು ಭಾಗವಹಿಸಿದ್ದರು. ಕೆಟಿಎಫ್, ಮೈಸೂರು ಟ್ರಾವೆಲ್ಸ್ ಅಸೋಸಿ ಯೇಷನ್, ಪ್ರೆಸ್ಟೀಜ್, ಓಕ್ವುಡ್, ಮೈಸೂರಿನ ಗ್ರಾಂಡ್ ಮಕ್ರ್ಯೂರ್ ಮತ್ತು ರಾಯಲ್ ಆರ್ಕಿಡ್ ಹೋಟೆಲ್‍ಗಳ ಪ್ರಾಯೋಜಕತ್ವದಲ್ಲಿ ಈ ರ್ಯಾಲಿ ನಡೆದಿದೆ. ಸಂಜೆ ಕೆಆರ್‍ಎಸ್‍ಗೆ ತೆರಳಿ ಮೈಸೂರಿಗೆ ಆಗಮಿ ಸಲಿದೆ. ನಾಳೆ(ಸೆ.13) ಮೈಸೂರಿಂದ ಬೆಂಗಳೂರಿಗೆ ವಾಪಸ್ಸಾಗಲಿದೆ.