ಮೈಸೂರು, ಸೆ.12(ಪಿಎಂ)- ಕಂಟೇ ನ್ಮೆಂಟ್ ವಲಯ ಹೊರತುಪಡಿಸಿ ಉಳಿ ದೆಡೆ ಸಾರ್ವಜನಿಕ ಗ್ರಂಥಾಲಯಗಳನ್ನು ತೆರೆಯಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ರಾಜ್ಯದಲ್ಲಿ ಸಾರ್ವಜನಿಕ ಗ್ರಂಥಾ ಲಯ ಇಲಾಖೆಯ ಎಲ್ಲಾ ವಿಧದ ಗ್ರಂಥಾಲಯಗಳು ಶನಿವಾರದಿಂದ ಓದು ಗರ ಸೇವೆಗೆ ತೆರೆದುಕೊಂಡಿವೆ.
ಮೈಸೂರು ನಗರ ಕೇಂದ್ರ ಗ್ರಂಥಾ ಲಯ ವ್ಯಾಪ್ತಿಯ ಶಾಖಾ ಗ್ರಂಥಾಲಯ ಗಳು, ಸೇವಾ ಕೇಂದ್ರ ಗ್ರಂಥಾಲಯಗಳು, ಸಮುದಾಯ ಮಕ್ಕಳ ಗ್ರಂಥಾಲಯ, ವಾಚ ನಾಲಯಗಳು ಸೇರಿದಂತೆ 39 ಗ್ರಂಥಾ ಲಯಗಳು ಬೆಳಗ್ಗೆ 8ರಿಂದ 11.30ರವರೆಗೆ ಮತ್ತು ಸಂಜೆ 4ರಿಂದ ರಾತ್ರಿ 8ರವರೆಗೆ ಕಾರ್ಯನಿರ್ವಹಿಸಲಿವೆ. ಕುವೆಂಪು ಸಂಚಾರಿ ಗ್ರಂಥಾಲಯ ಬೆಳಗ್ಗೆ 10ರಿಂದ ಸಂಜೆ 6ರವರೆಗೆ ಕಾರ್ಯ ನಿರ್ವಹಿಸಲಿದೆ.
ಮೈಸೂರು ಜಿಲ್ಲಾ ಕೇಂದ್ರ ಗ್ರಂಥಾಲಯ ವ್ಯಾಪ್ತಿಯ ಶಾಖಾ ಗ್ರಂಥಾಲಯ, ಸಂಚಾರಿ ಗ್ರಂಥಾಲಯಗಳು, ಕೊಳಚೆ ಪ್ರದೇಶ ಗ್ರಂಥಾ ಲಯಗಳು, ಪಟ್ಟಣ ಪಂಚಾಯಿತಿ ಗ್ರಂಥಾ ಲಯಗಳು, ಉಪಕಾರಾಗೃಹ ಗ್ರಂಥಾಲಯ ಗಳು, ಗ್ರಾಪಂ ಗ್ರಂಥಾಲಯಗಳು ಸೇರಿ ದಂತೆ ಒಟ್ಟು 252 ಗ್ರಂಥಾಲಯಗಳು ಬೆಳಗ್ಗೆ 9ರಿಂದ 11ರವರೆಗೆ ಮತ್ತು ಸಂಜೆ 4ರಿಂದ 6ರವರೆಗೆ ಕಾರ್ಯನಿರ್ವಹಿಸಲಿವೆ.
ಮುನ್ನೆಚ್ಚರಿಕೆ ಕ್ರಮ ಕಡ್ಡಾಯ: ಓದುಗರು ಮಾಸ್ಕ್ ಧರಿಸುವುದು, ಅಂತರ ಕಾಯ್ದು ಕೊಳ್ಳುವುದು ಕಡ್ಡಾಯ. ಗ್ರಂಥಾಲಯದ ಪ್ರವೇಶ ದ್ವಾರದಲ್ಲಿ ಥರ್ಮಲ್ ಸ್ಕ್ರೀನಿಂಗ್‍ಗೆ ಒಳಪಡಿಸಲಾಗುವುದು. ಒಂದು ವೇಳೆ ದೇಹದ ಉಷ್ಣಾಂಶ ಹೆಚ್ಚಿದ್ದಲ್ಲಿ ಅಂತಹವ ರಿಗೆ ಗ್ರಂಥಾಲಯಕ್ಕೆ ಪ್ರವೇಶ ನಿರ್ಬಂಧಿಸ ಲಾಗುವುದು ಎಂದು ಮೈಸೂರು ನಗರ ಹಾಗೂ ಜಿಲ್ಲಾ ಗ್ರಂಥಾಲಯದ ಉಪ ನಿರ್ದೇಶಕ ಬಿ.ಮಂಜುನಾಥ್ ಪ್ರಕ ಟಣೆಯಲ್ಲಿ ತಿಳಿಸಿದ್ದಾರೆ.