ಹಳ್ಳಿ ಮಕ್ಕಳ ಶಾಲೆಗೆ ಸೆಳೆಯಲು ಸಜ್ಜಾಗಿದೆ `ಗ್ರಾಪಂ ಶಿಕ್ಷಣ ಪಡೆ’
ಮೈಸೂರು

ಹಳ್ಳಿ ಮಕ್ಕಳ ಶಾಲೆಗೆ ಸೆಳೆಯಲು ಸಜ್ಜಾಗಿದೆ `ಗ್ರಾಪಂ ಶಿಕ್ಷಣ ಪಡೆ’

September 13, 2020

ಮೈಸೂರು, ಸೆ.12(ಎಸ್‍ಪಿಎನ್)- ಗ್ರಾಮೀಣ ಮಕ್ಕಳು ಹೊಸ ಶಿಕ್ಷಣ ನೀತಿಯಿಂದ ದೂರ ಉಳಿಯದಂತೆ ಹಾಗೂ ಅವರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವ ದೃಷ್ಟಿಯಿಂದ ವಿವಿಧ ಇಲಾಖಾ ಅಧಿಕಾರಿಗಳನ್ನು ಒಳಗೊಂಡ, 15 ಅಂಶಗಳಿರುವ `ಗ್ರಾಮ ಪಂಚಾಯ್ತಿ ಶಿಕ್ಷಣ ಪಡೆ’ ರಚಿಸಿ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಹಾಗೂ ಗ್ರಾಮೀಣಾವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಜಂಟಿಯಾಗಿ ಕಾರ್ಯ ನಿರ್ವಹಿಸಲು ಮುಂದಾಗಿವೆ.

`ಗ್ರಾಪಂ ಶಿಕ್ಷಣ ಪಡೆ’ ರಚನೆಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್ ಜಂಟಿ ಆದೇಶ ಹೊರಡಿಸಿ ದ್ದಾರೆ. ಸಂವಿಧಾನದ ಪರಿಚ್ಛೇದ 21(ಎ) 6ರಿಂದ 14 ವರ್ಷ ದವರೆಗೂ ಮಕ್ಕಳು 8 ವರ್ಷಗಳ ಶಿಕ್ಷಣ ಪಡೆಯುವುದು ಮೂಲ ಭೂತ ಹಕ್ಕು ಎಂದು ಘೋಷಿಸಿದೆ. ಹಾಗಾಗಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ-1993ರ ಪ್ರಕಾರ ಗ್ರಾಪಂ ಪಿಡಿಒ ನೇತೃತ್ವದಲ್ಲಿ ಗ್ರಾಪಂ ಶಿಕ್ಷಣ ಪಡೆ ರಚಿಸಿ, ಗ್ರಾಮದ ಪ್ರತಿ ಮಕ್ಕಳು ಪ್ರಾಥಮಿಕ ಶಾಲೆಗೆ ಪ್ರವೇಶ ಪಡೆದಿರುವುದನ್ನು ಖಚಿತಪಡಿಸಿಕೊಳ್ಳುವ ಅಧಿಕಾರವನ್ನು ಸಮಿತಿಗೆ ನೀಡಲಾಗಿದೆ.

`ಗ್ರಾಮ ಶಿಕ್ಷಣ ರಿಜಿಸ್ಟರ್’: 2012ರ ಕಡ್ಡಾಯ ಶಿಕ್ಷಣ ನಿಯಮದ ಪ್ರಕಾರ ಪ್ರತಿ ಗ್ರಾಪಂನಲ್ಲಿ `ಗ್ರಾಮ ಶಿಕ್ಷಣ ರಿಜಿಸ್ಟರ್’ ನಿರ್ವಹಿಸಬೇಕಿದೆ. ಶಾಲೆ ಬಿಟ್ಟ ಮಕ್ಕಳನ್ನು ಗುರುತಿಸಿ ಮತ್ತೆ ಶಾಲೆಗೆ ಸೇರಿಸುವುದು `ಶಿಕ್ಷಣ ಪಡೆ’ಯ ಜವಾಬ್ದಾರಿ. ಇದನ್ನು `ಗ್ರಾಮ ಶಿಕ್ಷಣ ರಿಜಿಸ್ಟರ್’ನಲ್ಲಿ ದಾಖಲಿಸುವುದನ್ನೂ ಕಡ್ಡಾಯ ಮಾಡಲಾಗಿದೆ.

ಶೇ.100ರಷ್ಟು ದಾಖಲಾತಿ: `ಬಯಲುಶೌಚ ಮುಕ್ತ ಗ್ರಾಮ’ ಅಭಿಯಾನದ ರೀತಿ ಯಲ್ಲೇ ಪ್ರತಿ ಗ್ರಾಮದಲ್ಲೂ ಶಾಲೆಗೆ ಶೇ.100 ರಷ್ಟು ದಾಖಲಾತಿಗೆ ಕ್ರಮ ಕೈಗೊಂಡು ಪ್ರತಿಶತ ಹಾಜರಾತಿ ಇರುವ ಶೈಕ್ಷಣಿಕ ಗ್ರಾಮ ಎಂದು ಘೋಷಿಸುವಂತೆ ಇಲಾಖೆ ಅಧಿಕಾರಿ ಗಳಿಗೆ ಸರ್ಕಾರ ಸೂಚನೆ ನೀಡಿದೆ. ಈ ನಿಟ್ಟಿನಲ್ಲಿ ಮೈಸೂರು ಜಿಲ್ಲೆಯ ಅಂಗನ ವಾಡಿಗಳಲ್ಲಿ ಕಲಿತ ಮಕ್ಕಳೆಲ್ಲರೂ ಪ್ರಾಥಮಿಕ ಶಾಲೆಗೆ ದಾಖಲಾಗಿದ್ದಾರೆ ಎಂದು ಡಿಡಿಪಿಐ ಪಾಂಡುರಂಗ ಮಾಹಿತಿ ನೀಡಿದರು.

4 ಇಲಾಖೆಗಳಿಗೆ ಜವಾಬ್ದಾರಿ: ಈವರೆ ವಿಗೂ ಶಾಲಾ ದಾಖಲಾತಿಗೆ ಶಿಕ್ಷಕರು, ತಮ್ಮ ವ್ಯಾಪ್ತಿಯ ಮನೆಗಳಿಗೆ ಭೇಟಿ ನೀಡಿ ಶಾಲೆ ಬಿಟ್ಟ ಮಕ್ಕಳ ಮಾಹಿತಿ ಕಲೆ ಹಾಕುತ್ತಿದ್ದರು. ಮಕ್ಕಳನ್ನು ಶಾಲೆಗೆ ಮರಳಿ ಸೇರಿಸುವಂತೆ ಪೆÇೀಷಕರ ಮನವೊಲಿಸುತ್ತಿದ್ದರು. ಈ ವೇಳೆ ಕೆಲ ಪೋಷ ಕರು ಶಾಲೆ ಬಿಟ್ಟ ಮಕ್ಕಳ ಮಾಹಿತಿಯನ್ನು ಸರಿಯಾಗಿ ನೀಡುತ್ತಿರಲಿಲ್ಲ. ಇದರಿಂದ ಮಕ್ಕಳ ಕಡ್ಡಾಯ ಶಿಕ್ಷಣ ನೀತಿ ಜಾರಿ ಸಾಧ್ಯವಾಗುತ್ತಿ ರಲಿಲ್ಲ. ಇದನ್ನು ಮನಗಂಡ ರಾಜ್ಯ ಸರ್ಕಾರ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಯೊಂದಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಆರೋಗ್ಯ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೂ ಜವಾಬ್ದಾರಿ ವಿಸ್ತರಿಸಿದೆ ಎಂದರು.

Translate »