ಬಂಜಾರ ಸಮುದಾಯ ವಿಶಿಷ್ಟ ಸಂಸ್ಕøತಿ, ಗುರು ಪರಂಪರೆ ಹೊಂದಿದೆ
ಮೈಸೂರು

ಬಂಜಾರ ಸಮುದಾಯ ವಿಶಿಷ್ಟ ಸಂಸ್ಕøತಿ, ಗುರು ಪರಂಪರೆ ಹೊಂದಿದೆ

February 27, 2023

ಮೈಸೂರು, ಫೆ.26(ಎಂಟಿವೈ)-ಬಂಜಾರ ಸಮುದಾಯ ತನ್ನದೇ ಆದ ವಿಶಿಷ್ಟ ಸಂಸ್ಕೃತಿ ಮತ್ತು ಗುರುಪರಂಪರೆ ಯನ್ನು ಹೊಂದಿದೆ ಎಂದು ಬಂಜಾರ ಗುರುಪೀಠದ ಶ್ರೀ ಸರ್ದಾರ್ ಸೇವಾ ಲಾಲ್ ಸ್ವಾಮೀಜಿ ತಿಳಿಸಿದ್ದಾರೆ.

ಮೈಸೂರಿನ ಕಲಾಮಂದಿರದಲ್ಲಿ ಭಾನುವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ನಮ್ಮಲ್ಲಿ ನಡೆಯುವ ಬುಡಕಟ್ಟು ಸಂಸ್ಕೃತಿ ಉತ್ಸವ ವಿಭಿನ್ನವಾಗಿರುತ್ತದೆ. ಯಾವುದೇ ಧರ್ಮದಲ್ಲಿಯೂ ಇಲ್ಲದ ಆಚರಣೆ ಮತ್ತು ಸಂಪ್ರದಾಯ ನಮ್ಮಲ್ಲಿದೆ. ಸಂತ ಸೇವಾಲಾಲ್‍ರ ಸಂದೇಶವು ಸೇವೆಗಾಗಿ ಬಾಳು ಎನ್ನುವುದೇ ಆಗಿದೆ. ತಾಂಡ್ಯವೊಂ ದರಲ್ಲಿ 145 ಯುವಕರು ದೇಶಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇವಾಲಾಲರ ಪೀಠಕ್ಕೆ ಭೇಟಿ ನೀಡಿ 10 ಕೋಟಿ ರೂ. ನೀಡುವುದಾಗಿ ಹೇಳಿದ್ದಾರೆ. ಈಗಾಗಲೇ 5 ಕೋಟಿ ರೂ. ನೀಡಿದ್ದಾರೆ. ಪ್ರಧಾನಿ ನರೇಂದ್ರಮೋದಿ ಅವರು ನಮ್ಮ ತಾಂಡ್ಯಗಳಿಗೆ ಭೇಟಿ ನೀಡಿ ಹಕ್ಕುಪತ್ರ ನೀಡಿದ್ದಾರೆ. ಇದೆಲ್ಲವೂ ನಮಗೆ ಸಂತೋ ಷವನ್ನುಂಟು ಮಾಡಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಗಳಾಗಿದ್ದ ಗುರು ಭಾರಧ್ವಾಜ್ ಮಾತ ನಾಡಿ, ಸಂತರು ತನ್ನ ಸೇವೆಯಿಂದಾ ಗಿಯೇ ಹೆಸರು ಮಾಡಿದರು. ಬಂಜಾರ ಸಮುದಾಯ ಅಲೆಮಾರಿಗಳು ಎಂಬ ಭಾವನೆ ಈಗಲೂ ಅನೇಕರಲ್ಲಿದೆ. ಆದರೆ ಬಂಜಾರರು ಹೆಚ್ಚು ಪ್ರತಿಭಾವಂತರಾಗಿ ದ್ದಾರೆ. ನಿಂತಿದ್ದರೂ ಯಾವುದಾದರೂ ಕೆಲಸ ಮಾಡುವ ಶಕ್ತಿ ಹೊಂದಿದ್ದಾರೆ. ತಾಂತ್ರಿಕ ನೈಪುಣ್ಯತೆ ಇದೆ. ಅನೇಕ ಮಂದಿ ವಿದ್ಯಾವಂತರೂ ಹಾಗೂ ಅಧಿಕಾರಿಗಳಾ ಗಿಯೂ ಇದ್ದಾರೆ, ಗ್ರಾಮಾಂತರ ಪ್ರದೇಶ ದಲ್ಲಿ ಹಿಂದುಳಿದವರನ್ನು ಗುರುತಿಸಿ ಮುಂದೆ ತರಬೇಕಾದ ಜವಾಬ್ದಾರಿ ಸರ್ಕಾರ ಮತ್ತು ಸಂಘದ ಮೇಲಿದೆ ಎಂದು ಅಭಿಪ್ರಾಯಪಟ್ಟರು.

ಬಂಜಾರ ಸಂಘದ ಜಿಲ್ಲಾಧ್ಯಕ್ಷ ಎಂ. ಸುಂದರ್ ಮಾತನಾಡಿ, 17ನೇ ಶತ ಮಾನದಲ್ಲಿ ಸಂತ ಸೇವಾಲಾಲ್ ಅವರು ಕಷ್ಟಪಟ್ಟು ದುಡಿದು ತಿನ್ನುವುದನ್ನು ಹೇಳಿಕೊಟ್ಟರು. ಕಾಡು ಇರುವ ಕಡೆ ಬಂಜಾರರು ನೆಲೆಸಿದರು. ಸುದೀರ್ಘ ಅವಧಿಯ ನಂತರ ತಾಂಡ್ಯಗಳನ್ನು ಗುರುತಿಸಿ ಕಂದಾಯ ಗ್ರಾಮ ಎಂದು ಘೋಷಿಸಿ ಹಕ್ಕುಪತ್ರ ನೀಡಲಾಗಿದೆ. ದಕ್ಷಿಣ ಭಾಗದಲ್ಲಿ ಕೆಲವು ತಾಂಡ್ಯಗಳನ್ನು ಕೈಬಿಡಲಾಗಿದೆ. ಅದನ್ನು ಸರಿಪಡಿಸುವುದಾಗಿ ಕಂದಾಯ ಸಚಿವ ಆರ್. ಅಶೋಕ್ ಭರವಸೆ ನೀಡಿದ್ದಾರೆ. ಭಾರತ ಸರ್ಕಾರ ಕೂಡ ಭಾಷಾ ಅಕಾಡೆಮಿಯನ್ನು ಸ್ಥಾಪಿಸಿ ನಮಗೆ ನೆರವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕನ್ನಡ ಹೋರಾಟ ಗಾರ ತಾಯೂರು ವಿಠಲಮೂರ್ತಿ, ಮುಕ್ತ ವಿವಿ ಪ್ರಾಧ್ಯಾಪಕ ಡಾ.ಆರ್. ಸಂತೋಷ್ ನಾಯಕ್, ಎಲ್. ಚಂದ್ರ ನಾಯಕ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ ಸ್ವಾಮಿ, ಮುನಿರಾಜು, ಉದಯಕುಮಾರ್ ಇನ್ನಿತರರು ಉಪಸ್ಥಿತರಿದ್ದರು.

Translate »