ಕರ್ನಾಟಕ ಸಂಗೀತ ಪರಂಪರೆಗೆ ಪಿಟೀಲು ಟಿ.ಚೌಡಯ್ಯರಿಂದ ವಿಶ್ವದರ್ಜೆ ಕೊಡುಗೆ
ಮೈಸೂರು

ಕರ್ನಾಟಕ ಸಂಗೀತ ಪರಂಪರೆಗೆ ಪಿಟೀಲು ಟಿ.ಚೌಡಯ್ಯರಿಂದ ವಿಶ್ವದರ್ಜೆ ಕೊಡುಗೆ

February 27, 2023

ಮೈಸೂರು,ಫೆ.26(ಪಿಎಂ)- ಕರ್ನಾ ಟಕ ಸಂಗೀತ ಪರಂಪರೆಗೆ ಮೈಸೂರು ಪಿಟೀಲು ಟಿ.ಚೌಡಯ್ಯನವರು ಅಸಾ ಧಾರಣ, ವಿಶ್ವದರ್ಜೆಯ ಕೊಡುಗೆ ನೀಡಿದ್ದಾರೆ. ಇಂತಹ ಮಹಾನುಭಾವರ ಪರಿಶ್ರಮದಿಂದ ಕರ್ನಾಟಕ ಸಂಗೀತವು ನಿಸ್ಸಂದೇಹವಾಗಿ ಇಡೀ ಪ್ರಪಂಚದಲ್ಲೇ ಅತ್ಯಂತ ಮಾಧರ್ಯವೆಂಬ ಮನ್ನಣೆ ಗಳಿಸಿದೆ ಎಂದು ಚಿತ್ರವೀಣಾ ವಿದ್ವಾಂಸ ಎನ್.ರವಿಕಿರಣ್ ಹೇಳಿದರು.

ಮೈಸೂರಿನ ಕೃಷ್ಣಮೂರ್ತಿಪುರಂನ ನಿತ್ಯೋತ್ಸವ ಕನ್ವೆನ್ಷನ್ ಸೆಂಟರ್‍ನಲ್ಲಿ ಭಾನು ವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಲೇಖಕಿ ಡಾ.ಪದ್ಮಾವತಿ ನರಸಿಂಹನ್ ಅವರ `ಕಲಾ ಕೌಸ್ತುಭ’ ಆಂಗ್ಲ ಪುಸ್ತಕ (ಕರ್ನಾಟಕ ಸಂಗೀತಕ್ಕೆ ಪಿಟೀಲು ಟಿ. ಚೌಡಯ್ಯನವರ ಕೊಡುಗೆ ಕುರಿತು ರಚಿಸಿರುವ ಪುಸ್ತಕ) ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಪಿಟೀಲು ಚೌಡಯ್ಯನವರು ಕರ್ನಾ ಟಕ ಸಂಗೀತ ಪರಂಪರೆಯಲ್ಲಿ ಒಂದು ದಂತಕಥೆ. ಅವರ ಕುರಿತು ಇದೀಗ ಒಂದು ಅದ್ಭುತ ಪುಸ್ತಕ ಹೊರಬಂದಿದೆ. ಇಂಗ್ಲಿಷ್‍ನಲ್ಲಿ ರಚಿಸಿರುವ ಕಾರಣ ಅದು ಕನ್ನಡಿಗರು ಮಾತ್ರವಲ್ಲದೆ, ಪ್ರಪಂಚದ ವಿವಿಧ ಭಾಗಗಳ ಸಂಗೀತಾಸಕ್ತರಿಗೂ ತಲುಪುವ ಮೂಲಕ ಒಬ್ಬ ಅಸಾಧಾರಣ ಕಲಾವಿದನ ಯಶೋಗಾಥೆ ಪರಿಚಯಿ ಸಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಚೌಡಯ್ಯನವರಂತಹ ಮಹಾನು ಭಾವರ ಕೊಡುಗೆಯಿಂದ ಕರ್ನಾಟಕ ಸಂಗೀತವು ನಿಸ್ಸಂದೇಹವಾಗಿ ಅತ್ಯಂತ ಮಾಧುರ್ಯವೆಂಬ ಮನ್ನಣೆಗೆ ಭಾಜನ ವಾಗಿದೆ. ಇಂತಹ ಮಹನೀಯರು ಭಾರತೀಯ ಸಂಸ್ಕøತಿ ಮತ್ತು ಕಲೆಯನ್ನು ಉಳಿಸಿ-ಬೆಳೆಸಲು ಜವಾಬ್ದಾರಿಯುತ ವಾಗಿ ಶ್ರಮಿಸಿದ್ದಾರೆ. ಹಾಗಾಗಿಯೇ ನಮ್ಮ ಸಂಗೀತ, ನೃತ್ಯ ಮತ್ತು ಇತರ ಕಲೆಗಳು ವಿಶ್ವ ಮನ್ನಣೆ ಗಳಿಸಿವೆ ಎಂದರು.

ಕರ್ನಾಟಕ ಸಂಗೀತ ಕೇವಲ ಒಬ್ಬರಿಂದ ಉದ್ಭವವಾಗಿಲ್ಲ. ಇದರ ಹುಟ್ಟು ಮತ್ತು ಬೆಳೆವಣಿಗೆಯಲ್ಲಿ ಹಲವು ಮಹನೀಯರ ಕೊಡುಗೆ ಇದೆ. ಶತಮಾನಗಳಿಂದ ಆಯಾಯ ಕಾಲಘಟ್ಟದಲ್ಲಿ ಮಹಾನ್ ಕಲಾವಿದರ ಕೊಡುಗೆಯಿಂದ ಬೆಳೆದು ನಿಂತಿದೆ. ಆದರೆ ನಮ್ಮ ಸಂಗೀತ ಪರಂಪರೆಯ ಶ್ರೇಷ್ಠ ಸಾಧಕರ ಬಗ್ಗೆ ನಮ್ಮ ಯುವ ಪೀಳಿಗೆ ನಿರೀಕ್ಷಿತ ಮಟ್ಟದಲ್ಲಿ ಅರಿವು ಹೊಂದಿಲ್ಲ ಎಂಬುದು ಬೇಸರದ ಸಂಗತಿ ಎಂದು ವಿಷಾದಿಸಿದರು. ಪಿಟೀಲು ನುಡಿಸಲು ವಿಶೇಷವಾದ ಮಾನಸಿಕ ಮತ್ತು ದೈಹಿಕ ಸಾಮಥ್ರ್ಯ ಅಗತ್ಯ. ಚೌಡಯ್ಯನವರು ಒಬ್ಬ ಪರಿಪೂರ್ಣ ಕಲಾವಿದರು. ಶ್ರೇಷ್ಠ ಪಿಟೀಲು ವಾದಕರಲ್ಲಿ ಮುಂಚೂಣಿಯಲ್ಲಿ ದ್ದವರು. ಅವರ ಪಿಟೀಲು ವಾದನ ಸಾರ್ವ ಕಾಲಿಕ ಶ್ರೇಷ್ಠತೆ ಗಳಿಸಿದೆ. ನಾನು ಹುಟ್ಟಿದ ಕೆಲವೇ ದಿನಗಳಲ್ಲಿ ಚೌಡಯ್ಯನವರು ನಿಧನ ಹೊಂದಿದ್ದರು. ಇದು ನನ್ನ ಸಂಗೀತ ಜೀವನದಲ್ಲಿ ದೊಡ್ಡ ನಷ್ಟ ಎಂದೇ ಭಾವಿಸಿದ್ದೇನೆ. ಮೈಸೂರಿನಲ್ಲಿದ್ದ ನಮ್ಮ ಕುಟುಂಬದ ಜೊತೆಗೆ ಅವರು ಉತ್ತಮ ಬಾಂಧವ್ಯ ಹೊಂದಿದ್ದರು. ಅವರು ತಮ್ಮ ದೂರದೃಷ್ಟಿಯಿಂದ ಕರ್ನಾಟಕ ಸಂಗೀತಕ್ಕೆ ಮಹತ್ವಪೂರ್ಣ ಕೊಡುಗೆ ನೀಡಿದ್ದು, ದೂರದೃಷ್ಟಿ ಎಂಬುದು ಸುಮ್ಮನೇ ಬರು ವುದಿಲ್ಲ. ಅದು ಆಳವಾದ ಅಧ್ಯಯನ ಮತ್ತು ಜ್ಞಾನವನ್ನು ಅಪೇಕ್ಷಿಸುತ್ತದೆ ಎಂದು ಹೇಳಿದರು. ಪುಸ್ತಕ ಕುರಿತು ಮಾತನಾಡಿದ ಟಿ.ಚೌಡಯ್ಯನವರ ಹಿರಿಯ ಶಿಷ್ಯೆ ಡಾ.ಅನಸೂಯ ಕುಲಕರ್ಣಿ, ನನ್ನ ಗುರುಗಳ ಕುರಿತ ಪುಸ್ತಕದ ಬಗ್ಗೆ ಮಾತನಾಡುವ ಅವಕಾಶ ಕಲ್ಪಿಸಿರುವುದಕ್ಕೆ ನಾನು ಚಿರಋಣಿ. ಸಂಗೀತ ಕಛೇರಿ ಸ್ಪರ್ಧೆ ಯಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ನನಗೆ ತೀರ್ಪುಗಾರರಾಗಿದ್ದ ಚೌಡಯ್ಯ ನವರ ಪರಿಚಯವಾಯಿತು. ಅದಕ್ಕೂ ಪೂರ್ವದಲ್ಲೇ ನಮ್ಮ ಕುಟುಂಬ ಮತ್ತು ಚೌಡಯ್ಯನವರ ಕುಟುಂಬ ಸ್ನೇಹ ಬಾಂಧವ್ಯ ಹೊಂದಿದೆ ಎಂಬುದು ನನಗೆ ನಂತರ ತಿಳಿಯಿತು. ಈ ಪುಸ್ತಕ ಅತ್ಯಂತ ಸರಳ ಇಂಗ್ಲಿಷ್‍ನಲ್ಲಿದ್ದು, ಆಸಕ್ತಿ ಇದ್ದರೆ ಸಂಗೀತದ ಬಗ್ಗೆ ಜ್ಞಾನವಿಲ್ಲದಿದ್ದರೂ ಅರ್ಥ ಮಾಡಿಕೊಳ್ಳಬಹುದು. ಅಲ್ಲದೇ, ಲೇಖಕರು ಪಿಟೀಲು ನಮ್ಮ ದೇಶಕ್ಕೆ ಬಂದ ಸಂದರ್ಭ ಉಲ್ಲೇಖಿಸಿದ್ದಾರೆ. ಇದು ಸಂಗೀತ ಕುರಿ ತಂತೆ ಹೆಚ್ಚು ಉಪಯುಕ್ತ ಪುಸ್ತಕ ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಹಿರಿಯ ಮೃದಂಗ ವಿದ್ವಾಂಸ ಎ.ವಿ.ಆನಂದ್ ಮಾತನಾಡಿ, ಇಂದು ನಾನೇನಾದರೂ ಸಾಧನೆ ಮಾಡಿದ್ದರೆ ಅದಕ್ಕೆ ಮೂಲ ಕಾರಣ ನನ್ನ ಗುರು ಕೆ.ಎಸ್.ಮಂಜು ನಾಥರು. ಇವರೊಂದಿಗೆ ಚೌಡಯ್ಯನವರು ಬಹಳ ಆತ್ಮೀಯ ಸ್ನೇಹ ಹೊಂದಿದ್ದರು. ಚೌಡಯ್ಯನವರು ನನ್ನ ಗುರುಗಳಿಗೆ ಪ್ರೋತ್ಸಾಹ ನೀಡುತ್ತಿದ್ದರು. ಅಲ್ಲದೆ, ನನಗೂ ಪ್ರೋತ್ಸಾಹ ನೀಡುತ್ತಿದ್ದರು. ಚೌಡಯ್ಯನವರು ಅತ್ಯಂತ ದೈವ ಭಕ್ತರು. ನನಗೆ 11 ವರ್ಷವಿದ್ದಾಗಲೇ ಚೌಡಯ್ಯ ನವರು ತಮ್ಮ ಸಂಗೀತ ಕಛೇರಿಯಲ್ಲಿ ಮೃದಂಗ ನುಡಿಸಲು ನನಗೆ ಅವಕಾಶ ಕಲ್ಪಿಸಿದರು ಎಂದು ಸ್ಮರಿಸಿದರು.

ಇದಕ್ಕೂ ಮುನ್ನ ಕರ್ನಾಟಕ ಸಂಗೀತ ಗಾಯಕರು, ಸಂಗೀತಶಾಸ್ತ್ರಜ್ಞರು ಹಾಗೂ ಪುಸ್ತಕದ ಕರ್ತೃಗಳೂ ಆದ ಡಾ.ಪದ್ಮಾ ವತಿ ನರಸಿಂಹನ್ ಗಾಯನ ನೀಡಿರುವ ಚೌಡಯ್ಯನವರ 3 ಕೃತಿಗಳನ್ನು ಯೂ ಟ್ಯೂಬ್‍ಗೆ ಅಪ್‍ಲೋಡ್ ಮಾಡಲಾ ಯಿತು. ಇದೇ ವೇಳೆ ಶ್ರೀ ವೇದಾಂತ ದೇಶಿಕರು ರಚಿಸಿ, ಎಂ.ಎನ್.ಅನಂತ ನಾರಾಯಣ ಅಯ್ಯಂಗಾರ್ ಅವರು ಕನ್ನಡಕ್ಕೆ ಅನುವಾದಿಸಿರುವ `ಗೋದಾ ಸ್ತುತಿ’ಯ ಗಾಯನದ (ಗಾಯಕರು; ಕೋವಿಲಡಿ ಅರ್ಚನಾ ಎಲ್.ರಾವ್) ಸಿಡಿಯನ್ನು ಬಿಡುಗಡೆ ಮಾಡಲಾಯಿತು. ಉದ್ಯಮಿಗಳು, ರೈತರು, ಅಂಕಣಕಾರರೂ ಆದ ಭಾರತೀಯ ಸೇನೆಯ ನಿವೃತ್ತ ಕ್ಯಾಪ್ಟನ್ ಜಿ.ಆರ್.ಗೋಪಿನಾಥ್, ಅಂಕಣಕಾರ ಡಾ.ಹೆಚ್.ವಿ.ನಾಗರಾಜ ರಾವ್, ಪುಸ್ತಕದ ಕರ್ತೃ ಡಾ.ಪದ್ಮಾವತಿ ನರಸಿಂಹನ್ ಮತ್ತಿತರರು ಹಾಜರಿದ್ದರು.

Translate »