ಇಂದು ಪ್ರಧಾನಿ ಮೋದಿಯಿಂದ ಶಿವಮೊಗ್ಗ ಏರ್‍ಪೋರ್ಟ್ ಲೋಕಾರ್ಪಣೆ
News

ಇಂದು ಪ್ರಧಾನಿ ಮೋದಿಯಿಂದ ಶಿವಮೊಗ್ಗ ಏರ್‍ಪೋರ್ಟ್ ಲೋಕಾರ್ಪಣೆ

February 27, 2023

ಬೆಂಗಳೂರು, ಫೆ.26- ಕರ್ನಾಟಕದಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ಚುನಾವಣಾ ಚಾಣಕ್ಯ ಅಮಿತ್ ಶಾ ಅವರು ರಣತಂತ್ರಗಳನ್ನು ರೂಪಿಸಿದ್ದು, ರಾಜ್ಯದಲ್ಲಿ ಸರಣಿ ಸಭೆ, ಸಮಾರಂಭಗಳಿಗೆ ಮುಂದಾಗಿದ್ದಾರೆ.

ಮತ್ತೊಂದೆಡೆ ಪ್ರಧಾನಿ ನರೇಂದ್ರ ಮೋದಿ ಅವರು ಸರ್ಕಾರಿ ಕಾರ್ಯಕ್ರಮಗಳ ಹೆಸರಿ ನಲ್ಲಿ ಪದೇ ಪದೆ ರಾಜ್ಯಕ್ಕೆ ಭೇಟಿ ನೀಡುವ ಮೂಲಕ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂ ರಪ್ಪ ಅವರ ಕನಸಿನ ಯೋಜನೆಯಾದ ಶಿವಮೊಗ್ಗ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಫೆಬ್ರವರಿ 27ರಂದು ಉದ್ಘಾ ಟಿಸಲಿದ್ದಾರೆ. ಸುಸಜ್ಜಿತ ವಿಮಾನ ನಿಲ್ದಾಣವು 662.38 ಎಕರೆ ಭೂಮಿಯಲ್ಲಿದೆ. ರನ್‍ವೇ, ಟರ್ಮಿನಲ್ ಕಟ್ಟಡ, ಎಟಿಸಿ ಟವರ್ ಮತ್ತು ಅಗ್ನಿಶಾಮಕ ಠಾಣೆ ಕಟ್ಟಡವನ್ನು ಹೊರತು ಪಡಿಸಿ, ಇದು ಟ್ಯಾಕ್ಸಿವೇ, ಏಪ್ರನ್, ಅಪೆÇ್ರೀಚ್ ರಸ್ತೆ, ಪೆರಿಫೆರಲ್ ರಸ್ತೆ ಮತ್ತು ಕಾಂಪೌಂಡ್ ಗೋಡೆಯನ್ನು ಹೊಂದಿದೆ. ಇನ್ನೂ ಹಲವು ಅಭಿವೃದ್ಧಿ ಕಾಮಗಾರಿಗಳು ಇಲ್ಲಿ ನಡೆಯ ಬೇಕಿದೆ. ಶಿವಮೊಗ್ಗ ಜಿಲ್ಲೆಯ ಸೊಗಾನೆ ಯಲ್ಲಿರುವ ಗ್ರೀನ್‍ಫೀಲ್ಡ್ ದೇಶೀಯ ವಿಮಾನ ನಿಲ್ದಾಣವನ್ನು ಕೇಂದ್ರದ ಉಡಾನ್ ಯೋಜನೆ ಯಡಿ ಎಲ್ಲರಿಗೂ ಕೈಗೆಟುಕುವ ವಿಮಾನ ಪ್ರಯಾಣ ಸಿಗುವ ಉದ್ದೇಶದಿಂದ ನಿರ್ಮಿ ಸಲಾಗಿದೆ. ಫೆಬ್ರವರಿ 27 ರಂದು ಶಿವಮೊಗ್ಗ ವಿಮಾನ ನಿಲ್ದಾಣವನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದು, ಉದ್ಘಾಟನಾ ದಿನದಂದು ಅವರ ವಿಶೇಷ ವಿಮಾನವು ವಿಮಾನ ನಿಲ್ದಾಣಕ್ಕೆ ಮೊದಲು ಇಳಿಯಲಿದೆ ಎಂದು ಯಡಿಯೂರಪ್ಪ ಅವರ ಪುತ್ರ, ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಭಾರತೀಯ ವಾಯು ಸೇನೆಯ ವಿಮಾನ ಪ್ರಯೋಗಿಕವಾಗಿ ಲ್ಯಾಂಡಿಂಗ್ ಆಗಿರುವ ವಿಡಿಯೋ ಕ್ಲಿಪ್‍ನೊಂದಿಗೆ ತಮ್ಮ ಟ್ವಿಟರ್ ನಲ್ಲಿ ಹಂಚುಕೊಂಡು ಮಾಹಿತಿ ನೀಡಿರುವ ಶಿವಮೊಗ್ಗ ಸಂಸದರು, ಮೊದಲ ಪ್ರಾಯೋಗಿಕ ವಿಮಾನವು ಶಿವಮೊಗ್ಗಕ್ಕೆ ಬಂದಿಳಿದಿದೆ. ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಜೀ ಅವರು ಫೆ.27ರಂದು ಈ ಹೊಸದಾಗಿ ನಿರ್ಮಿಸಲಾದ ವಿಮಾನ ನಿಲ್ದಾಣದಲ್ಲಿ ಇಳಿಯುವ ಮೂಲಕ ಶಿವಮೊಗ್ಗ ವಿಮಾನ ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ. ಬನ್ನಿ, ನಾವೆಲ್ಲರೂ ಈ ಐತಿಹಾಸಿಕ ಕ್ಷಣದಲ್ಲಿ ಭಾಗಿಗಳಾಗೋಣ ಎಂದಿದ್ದಾರೆ. ಕೇಂದ್ರದ ನಾಗರಿಕ ವಿಮಾನಯಾನ ಸಚಿವರಾದ ಜ್ಯೋತಿರಾದಿತ್ಯ ಸಿಂಧಿಯಾ ಅವರು ಕೂಡ ಕನ್ನಡಲ್ಲೇ ಟ್ವೀಟ್ ಮಾಡಿ, ಕರ್ನಾಟಕದ ಜನರೇ, ನಿಮ್ಮ ಭೂಮಿಗೆ 148ನೇ ವಿಮಾನ ನಿಲ್ದಾಣ ದೊರೆಯುತ್ತಿದ್ದು, ಬನ್ನಿ ನಮ್ಮೊಂದಿಗೆ ಕೈಜೋಡಿಸಿ ಎಂದಿದ್ದಾರೆ. ಸಚಿವ ಟ್ವೀಟ್‍ಗೆ ಸಂಸದ ಬಿ.ವೈ.ರಾಘವೇಂದ್ರ ಅವರು ಧನ್ಯವಾದ ಸಲ್ಲಿಸಿದ್ದಾರೆ.

ಕೇಂದ್ರದ ನಾಗರಿಕ ವಿಮಾನಯಾನ ಸಚಿವರಾದ ಶ್ರೀ ಜ್ಯೋತಿರಾದಿತ್ಯ ಮಾಧವ ರಾವ್ ಸಿಂಧಿಯಾ ಅವರು ಶಿವಮೊಗ್ಗಕ್ಕೆ ವಿಮಾನ ನಿಲ್ದಾಣ ದೊರೆತಿರುವುದಕ್ಕೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ರಾಜ್ಯದ ಜನತೆಯ ಪರವಾಗಿ ಅವರಿಗೆ ಹೃತ್ಪೂರ್ವಕವಾದ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದಿದ್ದಾರೆ.

ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಸ್ಥಾಪನೆ ಮಲೆನಾಡಿನ ಜನರ ಬಹುದಿನಗಳ ಕನಸಾಗಿತ್ತು. ಇದೀಗ ಆ ಕನಸು ನನಸಾಗುತ್ತಿದ್ದು, ಶಿವಮೊಗ್ಗದ ಕುವೆಂಪು ವಿಮಾನ ನಿಲ್ದಾಣಕ್ಕೆ ಮೊದಲ ವಿಮಾನ ಆಗಮಿಸಿದೆ. ಭಾರತೀಯ ವಾಯು ಸೇನೆಯ ವಿಮಾನ ಪ್ರಯೋಗಿಕ ಪರೀಕ್ಷೆಯ ಭಾಗವಾಗಿ ಏರ್‍ಪೋರ್ಟ್‍ಗೆ ಬಂದಿಳಿದಿದೆ. ವಿಮಾನ ಲ್ಯಾಂಡಿಂಗ್ ಆಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಫೆಬ್ರವರಿ 27ರಂದು ಪ್ರಧಾನಿ ನರೇಂದ್ರ ಮೋದಿ ಅವರು ಶಿವಮೊಗ್ಗ ವಿಮಾನ ನಿಲ್ದಾಣವನ್ನು ಲೋಕಾರ್ಪಣೆ ಮಾಡಲಿದ್ದಾರೆ. 600 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಏರ್‍ಪೋರ್ಟ್ ನಿರ್ಮಾಣ ಮಾಡಲಾಗಿದೆ.

Translate »