ಮೈಶುಗರ್ ಕಾರ್ಖಾನೆ ವಿಚಾರದಲ್ಲಿ ಕೆಲವರಿಂದ ಬರೀ ರಾಜಕಾರಣ
ಮೈಸೂರು

ಮೈಶುಗರ್ ಕಾರ್ಖಾನೆ ವಿಚಾರದಲ್ಲಿ ಕೆಲವರಿಂದ ಬರೀ ರಾಜಕಾರಣ

June 9, 2020

ಮೈಸೂರು, ಜೂ.8(ಎಂಟಿವೈ)- ಭ್ರಷ್ಟಾಚಾರದಿಂದ ಸಂಕಷ್ಟ ಕ್ಕೀಡಾಗಿದ್ದ ಸಕ್ಕರೆ ಕಾರ್ಖಾನೆ ಯನ್ನು ಪುನರಾರಂಭಿಸಿ ರೈತ ರಿಗೆ ನೆರವಾಗುವ ನಿಟ್ಟಿನಲ್ಲಿ ಖಾಸಗಿ ಸಂಸ್ಥೆಗೆ ಜವಾಬ್ದಾರಿ ನೀಡಲಾಗಿದೆ. ಇದನ್ನು ವಿರೋಧ ಪಕ್ಷಗಳ ಮುಖಂ ಡರು ವಿರೋಧ ಮಾಡುವು ದಕ್ಕೆಂದೇ ಮಾತನಾಡುತ್ತಿರು ವುದು ಸರಿಯಲ್ಲ ಎಂದು ಸಂಸದೆ ಸುಮಲತಾ ಅಂಬರೀಷ್ ವಿಷಾದಿಸಿದ್ದಾರೆ.

ಮೈಸೂರಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮೈಶುಗರ್ ಕಾರ್ಖಾನೆಯನ್ನು ಖಾಸಗೀಕರಣ ಮಾಡುವ ವಿಚಾರ ದಲ್ಲಿ ಕೆಲವರು ರಾಜಕೀಯ ಮಾಡುತ್ತಿz್ದÁರೆ. ಇದನ್ನು ನಾನು ಖಂಡಿಸುತ್ತೇನೆ. ನನ್ನ ಮೊದಲ ಆದ್ಯತೆ, ಹೋರಾಟ ರೈತರಿಗಾಗಿ. ಅವರ ಕಷ್ಟ ನಮಗೆ ಗೊತ್ತಿದೆ. ಪ್ರತಿ ವರ್ಷ ಕಬ್ಬು ಕಟಾವು ಸಂದರ್ಭದಲ್ಲಿ ಅವರಿಗೆ ತುಂಬಾ ಕಷ್ಟವಾಗುತ್ತಿದೆ. ಈಗಾಗಲೇ ಎರಡು ಕಾರ್ಖಾನೆಗಳು ಮುಚ್ಚಿವೆ. ಇದರಿಂದ ರೈತರಿಗೆ ಕಷ್ಟವಾಗುತ್ತಿದೆ. ಇನ್ನೆರಡು ವರ್ಷದಲ್ಲಿ ಕಾರ್ಖಾನೆಗಳು ಕಾರ್ಯಾ ರಂಭಗೊಳ್ಳಲಿವೆ. ಖಾಸಗೀಕರಣದಿಂದ ಯಾರಿಗೂ ಕಷ್ಟ ಆಗುವು ದಿಲ್ಲ. ಹಾಗಾಗಿ ಪಾಂಡವಪುರ ಸಕ್ಕರೆ ಕಾರ್ಖಾನೆ ನಿರ್ವಹಣೆ ಯನ್ನು ಖಾಸಗಿಯವರಿಗೆ ನೀಡಲಾಗುತ್ತಿದೆ. ಅದಕ್ಕಾಗಿ ನಾನು ಈಗಾಗಲೇ ಸಿಎಂ, ಇದಕ್ಕೆ ಸಂಬಂಧಿಸಿದ ಸಚಿವರ ಜೊತೆ ಮಾತನಾಡಿz್ದÉೀನೆ ಎಂದು ತಿಳಿಸಿದರು.

ಮೈಶುಗರ್ ಕಾರ್ಖಾನೆ ನಡೆಸಲು ಆಗುವುದಿಲ್ಲ ಎಂಬುದನ್ನು ಸಿಎಂ ಖುz್ದÁಗಿಯೆ ಹೇಳಿz್ದÁರೆ. ಕಾರ್ಖಾನೆಯ ಸಮಸ್ಯೆಗಳ ಬಗ್ಗೆಯೂ ಹೇಳಿz್ದÁರೆ. ಈಗಾಗಲೇ 420 ಕೋಟಿ ರೂ.ಗಳನ್ನು ಸರಕಾರ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಸರಕಾರ ಮುಂದುವರಿಸಲು ಆಗದೆ ಇರುವಾಗ ಖಾಸಗಿಯವ ರಿಗೆ ನೀಡಿದರೆ ತಪ್ಪೇನಿಲ್ಲ ಎಂದು ಸ್ಪಷ್ಟಪಡಿಸಿದರು.

Translate »