ರೈತರ ಹಿತದೃಷ್ಟಿಯಿಂದ ಪಾಂಡವಪುರ ಸಕ್ಕರೆ ಕಾರ್ಖಾನೆ ಖಾಸಗೀಕರಣ: ಸಚಿವ ಎಸ್.ಟಿ.ಸೋಮಶೇಖರ್
ಮೈಸೂರು

ರೈತರ ಹಿತದೃಷ್ಟಿಯಿಂದ ಪಾಂಡವಪುರ ಸಕ್ಕರೆ ಕಾರ್ಖಾನೆ ಖಾಸಗೀಕರಣ: ಸಚಿವ ಎಸ್.ಟಿ.ಸೋಮಶೇಖರ್

June 9, 2020

ಮೈಸೂರು, ಜೂ.8(ಎಂಟಿವೈ)- ರೈತರ ಹಿತದೃಷ್ಟಿಯಿಂದಲೇ ಪಾಂಡವಪುರ ಸಕ್ಕರೆ ಕಾರ್ಖಾನೆ ಖಾಸಗಿಯವರಿಗೆ ವಹಿಸಲಾಗಿದೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.

ಮೈಸೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಅಭಿವೃದ್ಧಿ ಹಾಗೂ ಸ್ಥಳೀಯ ಸಮಸ್ಯೆ ಬಗೆಹರಿಯಲಿದೆ ಎಂಬ ಕಾರಣಕ್ಕೆ ಸರಕಾರ ಪಾಂಡವಪುರ ಸಕ್ಕರೆ ಕಾರ್ಖಾನೆಯನ್ನು ನಿರಾಣಿ ಕಂಪೆನಿಗೆ ಗುತ್ತಿಗೆ ನೀಡಿದೆ. ಈಗಾಗಲೇ ಅವರು ನಾಲ್ಕೈದು ಸಕ್ಕರೆ ಕಾರ್ಖಾನೆಗಳನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ. ಕಬ್ಬಿನ ಬಾಕಿ ಹಣವನ್ನು ಸಕಾಲಕ್ಕೆ ಪಾವತಿಸಿದ್ದಾರೆ. ಪಾಂಡವಪುರ ಸಕ್ಕರೆ ಕಾರ್ಖಾನೆಗೆ 430 ಕೋಟಿ ರೂ. ತೊಡಗಿಸುತ್ತಿದ್ದಾರೆ. ಹಾಗಾಗಿ ಅವರ ನೇತೃತ್ವದಲ್ಲಿ ಕಾರ್ಖಾನೆ ಸೂಕ್ತ ನಿರ್ವಹಣೆ ಕಾಣಲಿದೆ. ಸರಕಾರವಾಗಲಿ, ಖಾಸಗಿಯವರಾಗಲಿ, ಒಟ್ಟಾರೆ ಸಕ್ಕರೆ ಕಾರ್ಖಾನೆ ಚೆನ್ನಾಗಿ ನಡೆಯಬೇಕಿದೆ. ರೈತರ ಹಿತದೃಷ್ಟಿಯಿಂದಲೇ ಕಾರ್ಖಾನೆ ಯನ್ನು ಖಾಸಗೀಕರಣ ಮಾಡಲಾಗಿದೆ. ಒಂದು ವೇಳೆ ನಿರಾಣಿ ಕಂಪೆನಿಯವರು ರೈತರಿಗೆ ಯಾವುದಾದರೂ ಹಣ ಬಾಕಿ ನೀಡಬೇಕಿದ್ದರೆ, ಸಂಸದೆ ಸುಮಲತಾ ಹಾಗೂ ಕಾರ್ಮಿಕ ಮಂತ್ರಿಗಳು ಸಭೆ ನಡೆಸಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು

Translate »