ಚಾಮರಾಜನಗರದಲ್ಲಿ ಸರಳವಾಗಿ ಜಗಜ್ಯೋತಿ ಬಸವೇಶ್ವರ ಜಯಂತಿ ಆಚರಣೆ
ಚಾಮರಾಜನಗರ

ಚಾಮರಾಜನಗರದಲ್ಲಿ ಸರಳವಾಗಿ ಜಗಜ್ಯೋತಿ ಬಸವೇಶ್ವರ ಜಯಂತಿ ಆಚರಣೆ

April 27, 2020

ಚಾಮರಾಜನಗರ, ಏ.26- ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಜಗಜ್ಯೋತಿ ಬಸವೇಶ್ವರ ಜಯಂತಿಯನ್ನು ನಗರದಲ್ಲಿ ಸರಳವಾಗಿ ಆಚರಿಸಲಾಯಿತು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಬಸವೇಶ್ವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದ ಶಾಸಕ ಸಿ. ಪುಟ್ಟರಂಗಶೆಟ್ಟಿ, ಬಸವಣ್ಣನವರು ಮಹಾನ್ ಮಾನ ವತಾವಾದಿ. ತಮ್ಮ ಅನುಭವ ಮಂಟಪದಲ್ಲಿ ಎಲ್ಲರಿಗೂ ಸರಿ ಸಮಾನವಾದ ಅವಕಾಶ ಮಾಡಿ ಕೊಡುವ ಮೂಲಕ ಸಮಾನತೆಯ ಮಹತ್ವವನ್ನು ಅಂದೇ ಸಾರಿದ್ದರು. ಇವರ ವಚನಗಳ ಸಾರವು ಅರ್ಥಪೂರ್ಣ ವಾಗಿದೆ. ಬಸವಣ್ಣನವರ ತತ್ವ ಆದರ್ಶಗಳನ್ನು ನಾವೆಲ್ಲರೂ ಪಾಲನೆ ಮಾಡಬೇಕಿದೆ ಎಂದರು.

ಜಿಪಂ ಅಧ್ಯಕ್ಷÀ ಕೆ.ಎಸ್.ಮಹೇಶ್ ಮಾತನಾಡಿ, ಬಸವಣ್ಣ ನವರು ಸರ್ವವ್ಯಾಪಿಯಾಗಿದ್ದು, ಸರ್ವ ಜನಾಂಗವನ್ನು ಪ್ರೀತಿಸಿ ಮನುಕುಲದ ಒಳಿತನ್ನು ಬಯಸಿದರು. ಇಂದು ಎಲ್ಲರೂ ಸಂಕಷ್ಟದಲ್ಲಿದ್ದೇವೆ. ವಿಶ್ವವೇ ಕೊರೊನಾ ದಿಂದ ತೊಂದರೆಗೀಡಾಗಿದೆ. ಇಂತಹ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಕೈಗೊಂಡಿರುವ ಕೊರೊನಾ ತಡೆ ಮುಂಜಾಗ್ರತಾ ಕ್ರಮಗಳಿಗೆ ಜನರೆಲ್ಲರೂ ಸಹಕರಿಸಬೇಕು ಎಂದರು.

ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಮಾತನಾಡಿ, 800 ವರ್ಷಗಳ ನಂತರವೂ ಬಸವಣ್ಣನವರ ಜೀವನ ಕಾಯಕ ತತ್ವ ಮನುಕುಲದ ಬಗೆಗಿನ ಪ್ರೀತಿ ಇಂದಿಗೂ ಪ್ರಸ್ತುತವಾಗಿದೆ. ಬಸವಣ್ಣನವರಲ್ಲಿ ಪ್ರಗತಿಪರ ಆಲೋಚನೆ ಗಳು ಮೊಳಕೆಯೊಡೆದು ಅನುಷ್ಠಾನಕ್ಕೆ ಬಂದವು. ಸಮಾಜ ವನ್ನು ಕ್ರಿಯಾಶೀಲವಾಗಿಸುವ ಕೆಲಸ ನಡೆಸಿದವರ ಪೈಕಿ ಸಹ ಪ್ರಮುಖರು ಎಂದರು. ಬಸವಣ್ಣನವರ ವಚನಗಳಲ್ಲಿ ಎಲ್ಲರ ಮನಸ್ಸಿಗೆ ನೇರವಾಗಿ ಮುಟ್ಟುವ ಶ್ರೇಷ್ಠ ಅಂಶಗಳಿವೆ. ಅವರ ವಚನ ಸಾರದಿಂದ ಬಹಳಷ್ಟು ಕಲಿಯಬೇಕಾಗಿದೆ. ಬಸವಣ್ಣನವರ ಪ್ರಭಾವ, ಬದುಕಿನ ನಡೆ, ಜೀವನಶೈಲಿ ಎಲ್ಲಾ ಕಾಲಕ್ಕೂ ಅನುಕರಣೀಯ ಎಂದರು. ಜಿಲ್ಲಾ ಎಸ್ಪಿ ಎಚ್.ಡಿ. ಆನಂದಕುಮಾರ್ ಮಾತನಾಡಿದರು. ಜಿಪಂ ಸದಸ್ಯ ನವೀನ್, ಜಿಪಂ ಸಿಇಓ ನಾರಾಯಣರಾವ್, ಎಡಿಸಿ ಸಿ.ಎಲ್.ಆನಂದ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಕೆ.ಗಿರೀಶ್ ಇತರರು ಕಾರ್ಯಕ್ರಮದಲ್ಲಿದ್ದರು.

ಈ ವೇಳೆ ನಗರದ ರೋಟರಿ ಸಂಸ್ಥೆಯಿಂದ ಮುಖ್ಯಮಂತ್ರಿ ಗಳ ಪರಿಹಾರನಿಧಿಗೆ 50 ಸಾವಿರ ಹಾಗೂ ಪ್ರಧಾನಮಂತ್ರಿ ಯವರ ಕೇರ್ಸ್‍ಗೆ 50 ಸಾವಿರ ರೂ. ಗಳ ಚೆಕ್ಕನ್ನು ಜಿಲ್ಲಾಧಿಕಾರಿ ಯವರಿಗೆ ಸಲ್ಲಿಸಲಾಯಿತು. ಬಿಲ್ವ ಬಳಗದ ವತಿಯಿಂದ 50 ಸಾವಿರ ರೂ. ಗಳ ಡಿಡಿಯನ್ನು ಪರಿಹಾರನಿಧಿಗೆ ನೀಡಲಾಯಿತು.

ರೋಟರಿ ಅಧ್ಯಕ್ಷ ಆರ್.ಎಂ.ಸ್ವಾಮಿ, ಕಾರ್ಯದರ್ಶಿ ಮಹದೇವಸ್ವಾಮಿ, ರೋಟರಿ ಮಾಜಿ ಜಿಲ್ಲಾ ಗೌರ್ನರ್ ಡಾ.ಆರ್.ಎಸ್. ನಾಗಾರ್ಜುನ, ಬಿ.ಪ್ರಕಾಶ್, ಬಿಲ್ವ ಬಳಗದ ಸುಭಾಷ್, ಬಿಲ್ವ ಬಳಗದ ಶಿವಕುಮಾರಸ್ವಾಮಿ, ಕೆ.ಪಿ. ಕೊಂಗಡಪ್ಪ, ಡಿ.ಎಂ.ಮಹದೇವಪ್ಪ, ಇತರರಿದ್ದರು.

Translate »