ಬಸವಣ್ಣ ಕೊಟ್ಟಂತಹ ವಿಶ್ವ ಕುಟುಂಬ ವ್ಯವಸ್ಥೆ ಜಗತ್ತಿಗೇ ಮಾದರಿ
ಮೈಸೂರು

ಬಸವಣ್ಣ ಕೊಟ್ಟಂತಹ ವಿಶ್ವ ಕುಟುಂಬ ವ್ಯವಸ್ಥೆ ಜಗತ್ತಿಗೇ ಮಾದರಿ

October 11, 2020

ಮೈಸೂರು,ಅ.10-ಬಸವಣ್ಣ ಕೊಟ್ಟಂ ತಹ ವಿಶ್ವಕುಟುಂಬ ವ್ಯವಸ್ಥೆ ಜಗತ್ತಿಗೇ ಮಾದರಿ ಎಂದು ಬೆಂಗಳೂರು ಭ್ರಷ್ಟಾಚಾರ ನಿಗ್ರಹ ದಳ ಕೇಂದ್ರ ಸ್ಥಾನದ ಪೊಲೀಸ್ ಅಧೀ ಕ್ಷಕಿ ಉಮಾ ಪ್ರಶಾಂತ್ ಹೇಳಿದರು.

ಶರಣು ವಿಶ್ವವಚನ ಫೌಂಡೇಷನ್ ಅಂತ ರ್ಜಾಲದ ಮುಖಾಂತರ ಹಮ್ಮಿಕೊಂಡಿದ್ದ ಹದಿಮೂರನೆಯ ಆರಕ್ಷಕರಿಗಾಗಿ ವಚನ ಮಾಧುರ್ಯ ಕಾರ್ಯಕ್ರಮವನ್ನು ಉದ್ಘಾ ಟಿಸಿ ಮಾತನಾಡಿದ ಅವರು, ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ವಚನಗಳಲ್ಲಿ ಇಲ್ಲದೆ ಇರುವ ವಿಷಯವಿಲ್ಲ. ಎಲ್ಲಾ ಕ್ಷೇತ್ರಗಳಿಗೂ ಸಾರ್ವಕಾಲಿಕವಾಗಿ ಅನ್ವಯವಾಗುವ ವಚನ ಸಾಹಿತ್ಯವನ್ನು ಶರಣರು ನೀಡಿದ್ದಾರೆ. ದಾಸೋಹ ಹಾಗೂ ಕಾಯಕಕ್ಕೆ ಹೆಚ್ಚು ಮಹತ್ವವನ್ನು ನೀಡಿ ಪ್ರತಿಯೊಂದು ಕಾಯಕವೂ ಶ್ರೇಷ್ಠ ಎಂಬುದನ್ನು ಉಮಾ ಪ್ರಶಾಂತ್ ತಿಳಿಸಿದರು.

ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ಡಾ.ವಚನ ಕುಮಾರಸ್ವಾಮಿ ಮಾತನಾಡಿ, ಬಸವಣ್ಣನವರ ಕಾಯಕವೇ ಕೈಲಾಸ ಎಂಬ ವಚನದ ಸಾಲಿನಂತೆ ಕಾಯ ಕದ ಮಹತ್ವ ಎತ್ತಿ ಹಿಡಿದವರು ಆರಕ್ಷಕ ಬಂಧುಗಳು. ಮನೆ, ಬಂಧು ಬಳಗ ಎಲ್ಲ ವನ್ನೂ ಬಿಟ್ಟು ಅನೇಕ ಸಂದರ್ಭಗಳಲ್ಲಿ ಕಾಯದಲ್ಲಿಯೇ ದೇವರನ್ನು ಕಾಣುವುದನ್ನು ಮನಗಾಣಬಹುದು. ಅವರ ಕರ್ತವ್ಯದ ಮೌಲ್ಯವನ್ನು ಎತ್ತಿ ಹಿಡಿಯುವ ಸಲುವಾಗಿ ಆರಕ್ಷಕರಿಂದ ವಚನ ಮಾಧುರ್ಯ ಕಾರ್ಯ ಕ್ರಮ ಏರ್ಪಡಿಸಲಾಗಿದೆ. ಕಾನೂನನ್ನು ಜಾರಿ ಗೊಳಿಸಿ, ನಾಗರಿಕರ ಸುರಕ್ಷತೆ ಕಾಪಾಡಿ, ಆರೋಗ್ಯ ಮತ್ತು ಆಸ್ತಿಯನ್ನು ಖಾತರಿ ಪಡಿಸಿ, ಅಪರಾಧ ಮತ್ತು ನಾಗರಿಕ ಸ್ವ ಸ್ಥತೆಯನ್ನು ಕಾಪಾಡುವ ಆರಕ್ಷಕರ ಕಾರ್ಯ ಸ್ತುತ್ಯಾರ್ಹ ವಾದುದು ಎಂದರು.

ನಂತರ ನಡೆದ ವಚನ ಮಾಧುರ್ಯ ಕಾರ್ಯ ಕ್ರಮದಲ್ಲಿ ಬೀದರ್ ಜಿಲ್ಲೆ ಭಾಲ್ಕಿ ಉಪವಿಭಾಗ ಉಪ ಪೊಲೀಸ್ ವರಿಷ್ಠಾಧಿಕಾರಿ ಡಾ.ದೇವ ರಾಜ ಬಿ, ಹಾವೇರಿ ಉಪಪೊಲೀಸ್ ವರಿಷ್ಠಾಧಿಕಾರಿ ವಿನೋದ್ ಮುಕ್ತೆದಾರ್, ಮೈಸೂರಿನ ಉಪ ಪೊಲೀಸ್ ವರಿಷ್ಠಾಧಿ ಕಾರಿ ಶಿವಬಸಪ್ಪ ಹೊರೆಯಾಲ, ಬೀದರ್ ಜಿಲ್ಲೆ ಭಾಲ್ಕಿ ನಗರ ಪೊಲೀಸ್ ಠಾಣೆಯ ಸಹಾಯಕ ಸಬ್‍ಇನ್ಸ್‍ಪೆಕ್ಟರ್ ಹಂಶ ಕವಿ ವಚನ ಗಾಯನ ಮತ್ತು ತಾತ್ಪರ್ಯ ಮಾಡಿದರು. ಕಾರ್ಯಕ್ರಮದಲ್ಲಿ ಲಾಳನ ಹಳ್ಳಿ ಮಠದ ಜಯದೇವಿತಾಯಿ, ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ನಿರ್ದೇಶಕಿ ರೂಪಕುಮಾರಸ್ವಾಮಿ, ಜಿಲ್ಲಾ ಧ್ಯಕ್ಷ ಅನಿಲ್‍ಕುಮಾರ್ ವಾಜಂತ್ರಿ, ಕೇಂದ್ರೀಯ ಸಂಚಾಲಕಿ ಸುಧಾ ಮೃತ್ಯುಂ ಜಯಪ್ಪ, ಲಿಂಗಣ್ಣ, ಹವ್ಯಾಸಿ ಗಾಯಕ ವೈ.ಟಿ.ಮಹೇಶ್, ಪೊಲೀಸ್ ಕಾನ್ಸ್‍ಟೇಬಲ್ ಸಿ.ಎನ್.ಕೆಂಡಗಣ್ಣಸ್ವಾಮಿ, ಸ್ಮಿತಾ ದಿನೇಶ್, ಅನಿತಾ ನಾಗರಾಜ್, ಸರಸ್ವತಿ ರಾಮಣ್ಣ, ಎಚ್.ಕೆ.ಚನ್ನಪ್ಪ, ಉಮಾಪತಿ ಕೆ.ಎಸ್. ದೀಪ ತೊಲಗಿ, ಸುನಿತಾ ಅಂಗಡಿ ಕೊಡೇ ಕಲ್, ಸಿದ್ಧಪ್ಪ ಬೋರಗಿ, ನೀಲಾಂಬಿಕಾ ದೇವಿ ನಾಗರಾಜ್ ಉಪಸ್ಥಿತರಿದ್ದರು.

 

 

Translate »