ಟಿವಿಎಸ್ ಕಾರ್ಖಾನೆಯಿಂದ ಅಸ್ಸಾಂಗೆ ಗೂಡ್ಸ್ ರೈಲಿನಲ್ಲಿ ದ್ವಿಚಕ್ರ ವಾಹನ ರವಾನೆ
ಮೈಸೂರು

ಟಿವಿಎಸ್ ಕಾರ್ಖಾನೆಯಿಂದ ಅಸ್ಸಾಂಗೆ ಗೂಡ್ಸ್ ರೈಲಿನಲ್ಲಿ ದ್ವಿಚಕ್ರ ವಾಹನ ರವಾನೆ

October 11, 2020

ಮೈಸೂರು,ಅ.10(ಆರ್‍ಕೆ)-ಮೈಸೂರು ಜಿಲ್ಲೆಯ ಕಡಕೊಳ ಬಳಿಯ ಟಿವಿಎಸ್ ಕಾರ್ಖಾನೆಯಿಂದ ದ್ವಿಚಕ್ರ ವಾಹನಗಳನ್ನು 3,000 ಕಿ.ಮೀ. ದೂರದ ಅಸ್ಸಾಂನ ಗೌಹಾಟಿ ಬಳಿಯ ಚಂಗ್‍ಸಾರಿಗೆ ರವಾನಿಸಲು ಮೈಸೂರು ರೈಲ್ವೇ ವಿಭಾಗವು ಸಿದ್ಧತೆ ನಡೆಸಿದೆ.

ಆಟೋಮೊಬೈಲ್ ಸಾರಿಗೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಟಿವಿಎಸ್‍ನ ದ್ವಿಚಕ್ರ ವಾಹನಗಳನ್ನು ನ್ಯೂ ಮಾಡಿಫೈಡ್ ಗೂಡ್ಸ್ (ಓಒಉ) ರೇಕ್‍ನಲ್ಲಿ ಸಾಗಿಸಲು ರೈಲ್ವೇ ವಿಭಾಗದ ಬ್ಯುಸಿನೆಸ್ ಡೆವೆಲಪ್‍ಮೆಂಟ್ ಯೂನಿಟ್ ಮೂಲಕ ಮುಂದಾಗಿದೆ.

ಆಟೋಮೊಬೈಲ್ಸ್ ಉತ್ಪನ್ನ ಸಾಗಣೆ ಮಾಡಲು ಅನುಕೂಲವಾಗುವಂತೆ ಎನ್‍ಎಂಜಿ ರೇಕ್‍ಗಳನ್ನು ಮಾಡಿಫೈ ಮಾಡಲಾಗಿದ್ದು, ಒಂದು ರೇಕ್ 25 ಕೋಚ್‍ಗಳನ್ನು ಹೊಂದಿದೆ. ಒಂದು ಕೋಚ್‍ನಲ್ಲಿ 40 ದ್ವಿಚಕ್ರವಾಹನಗಳನ್ನು ಇರಿಸಬಹುದಾಗಿರು ವುದರಿಂದ ಒಮ್ಮೆಗೆ 1,000 ವಾಹನಗಳನ್ನು ಸಾಗಿಸುವ ಸಾಮಥ್ರ್ಯ ಹೊಂದಿದೆ ಎಂದು ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕಿ ಪ್ರಿಯಾಶೆಟ್ಟಿ ತಿಳಿಸಿದ್ದಾರೆ.

ಕೃಷಿ ಉತ್ಪನ್ನಗಳಾದ ಅರೇಕಾ ನಟ್, ಜಿಂಜರ್, ಸ್ಪೈಸಸ್, ಕೊಕೊನಟ್ ಅನ್ನು ರಾಜ್ಯದ ಹಲವು ಸ್ಥಳಗಳಿಂದ ಬ್ಯುಸಿನೆಸ್ ಡೆವೆಲಪ್‍ಮೆಂಟ್ ಯೂನಿಟ್ ವಿಭಾಗದ ಮೂಲಕ ಸಾಗಣೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

 

 

 

Translate »