`ಸಂಸ’ ಕಾದಂಬರಿ ಮನೋವಿಜ್ಞಾನಕ್ಕೆ ಮೂಲ ಸಾಮಗ್ರಿ
ಮೈಸೂರು

`ಸಂಸ’ ಕಾದಂಬರಿ ಮನೋವಿಜ್ಞಾನಕ್ಕೆ ಮೂಲ ಸಾಮಗ್ರಿ

October 5, 2020

ಮೈಸೂರು, ಅ.4(ಆರ್‍ಕೆಬಿ)- ಮನೋ ವಿಜ್ಞಾನದ ಅಧ್ಯಯನಕ್ಕೆ ಮಲೆಯೂರು ಗುರುಸ್ವಾಮಿ ಅವರ `ಸಂಸ’ ಕಾದಂಬರಿ ಮೂಲ ಸಾಮಗ್ರಿಯಾಗಿದೆ ಎಂದು ಹಿರಿಯ ಸಾಹಿತಿ ಡಾ. ಸಿ.ಪಿ.ಕೃಷ್ಣ ಕುಮಾರ್ ಅಭಿಪ್ರಾಯಪಟ್ಟರು.

ಮೈಸೂರಿನ ಜೆಎಲ್‍ಬಿ ರಸ್ತೆಯಲ್ಲಿರುವ ಇಂಜಿನಿಯರುಗಳ ಸಂಸ್ಥೆ ಸಭಾಂಗಣ ದಲ್ಲಿ ಸಂವಹನ ಪ್ರಕಾಶನ ಮತ್ತು ಅನನ್ಯ ಪುಸ್ತಕಗಳು ಭಾನುವಾರ ಜಂಟಿಯಾಗಿ ಆಯೋಜಿಸಿದ್ದ ಹಿರಿಯ ಸಾಹಿತಿ ಪ್ರೊ.ಮಲೆ ಯೂರು ಗುರುಸ್ವಾಮಿ ಅವರ `ಸಂಸ’ ಕಾದಂ ಬರಿ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಂಸ ದುರಂತ ನಾಯಕ. ಅಗಾಧ ಪ್ರತಿಭೆ, ಆದರೆ ಬದುಕು ಮತ್ತು ವ್ಯಕ್ತಿತ್ವ ನಿಗೂಢ. ಅಸ್ಪಷ್ಟ ವ್ಯಕ್ತಿಯನ್ನು ಕುರಿತು ಬರೆದ ಈ ಕಾದಂಬರಿಯ ವಸ್ತುವಿನಲ್ಲಿ ಭಿನ್ನತೆ ಇದೆ. ಅವರ ಬದುಕು ಅನೇಕ ಪ್ರಶ್ನೆಗಳನ್ನು ಹೇಳುತ್ತದೆ. ಬಹಳಷ್ಟು ಪ್ರಶ್ನೆಗಳಿಗೆ ಈ ಕಾದಂಬರಿಯಲ್ಲಿ ಉತ್ತರ ಸಿಗುತ್ತದೆ. ಸಚಿತ್ರ ರಾಮಾಯಣ ಇದ್ದ ಹಾಗೆ ಇದು ಸಚಿತ್ರ ಸಂಸಾಯಣ ಎಂದರು.

ಸಂಸರ ವ್ಯವಸ್ಥೆ ಮತ್ತು ಅವ್ಯವಸ್ಥೆಯನ್ನು ಹಾಗೂ ನೆರಳು ಬೆಳಕಿನ ಆಟವನ್ನು ಲೇಖ ಕರು ಚೆನ್ನಾಗಿ ಚಿತ್ರಿಸಿ, ನಾಟಕ ರೂಪದಲ್ಲಿ ಬರೆದಿದ್ದರೆ, ಇದೊಂದು ದುರಂತ ನಾಟಕ ಎನಿಸುತ್ತಿತ್ತು ಎಂದು ಅಭಿಪ್ರಾಯಪಟ್ಟರು.

ಕಾದಂಬರಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಕನ್ನಡ ಪುಸ್ತಕ ಪ್ರಾಧಿ ಕಾರದ ಅಧ್ಯಕ್ಷ ನಂದೀಶ್ ಹಂಚೆ, ಕನ್ನಡ ಸಾಹಿತ್ಯದಲ್ಲಿ ವ್ಯಕ್ತಿ ಕೇಂದ್ರಿತ ಕಥನ ಮತ್ತು ವ್ಯವಸ್ಥೆ ಕೇಂದ್ರ ಕಥನ ಎಂಬ ಎರಡು ಮಾದರಿ ಕಥನಗಳಲ್ಲಿ ಮಲೆಯೂರು ಗುರುಸ್ವಾಮಿ ಅವರ `ಸಂಸ’ ವ್ಯಕ್ತಿ ಕೇಂದ್ರಿತ ಕಥನವಾಗಿ ಹೊರಹೊಮ್ಮಿದೆ ಎಂದರು.

ವಸುದೇಂದ್ರ ಅವರಂತಹ ಯುವ ಲೇಖಕ ವ್ಯವಸ್ಥೆಯನ್ನು ಶೋಧಿಸುವ ಯುವ ಮನಸ್ಸು, ಆದರೆ ಮಲೆಯೂರು ಗುರುಸ್ವಾಮಿ ಅವ ರಂತಹ ಹಿರಿಯ ಮನಸ್ಸಿನ ಲೇಖಕರು ವ್ಯಕ್ತಿ ಯನ್ನು ಇಟ್ಟುಕೊಂಡು ಬರೆಯುತ್ತಾರೆ. ಈ ಕಾದಂಬರಿಯಲ್ಲಿ ಲೇಖಕರು ಮೌಲ್ಯ ವೊಂದನ್ನು ಸಮಾಜದಲ್ಲಿ ಮರು ಸ್ಥಾಪಿಸುವ ಹಾಗೂ ಸಮಾಜದಲ್ಲಿ ಕಾಣಸಿಗದಿರುವು ದನ್ನು ಕಾಣುವಂತೆ ಮಾಡುವ ಪ್ರಯತ್ನ ಮಾಡಿದ್ದಾರೆ ಎಂದು ಹೇಳಿದರು.

ನವ್ಯ ಕಾಲದಲ್ಲಿ ಈ ಕಾದಂಬರಿ ಬಂದಿ ದ್ದರೆ ಮನೋವಿಜ್ಞಾನದ ಕಾದಂಬರಿಯಾಗಿ ಬರುತ್ತಿತ್ತೇನೋ ಎಂದ ಅವರು, ನಾಟಕ ಕಾರ ಸಂಸರನ್ನು ಬರೆಯುವುದಿದೆಯಲ್ಲ, ಅದು ಭಾರತದಂತಹ ದೇಶಕ್ಕೆ ಅದ್ಭುತ ಏನಲ್ಲ. ಗಾಬರಿ ಹುಟ್ಟಿಸುವ ಸಂಗತಿಯಲ್ಲ ಎಂದರು. ಪರಸ್ಪರ ವಿರೋಧಗಳನ್ನು ವೃದ್ಧಿಸಿ ಕೊಳ್ಳುವ ಇಂದಿನ ಸಮಾಜದಲ್ಲಿ ಸಂಸ ಉತ್ತಮ ಕಾದಂಬರಿಯಾಗಿ ಹೊರ ಹೊಮ್ಮಿದೆ ಎಂದ ಅವರು, ತಮಗಿರುವ ಅಪಾರವಾದ ಶಕ್ತಿಯನ್ನು ಮಲೆಯೂರು ಗುರುಸ್ವಾಮಿ ಸರಿಯಾಗಿ ಬಳಸಿಕೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕೃತಿ ಕುರಿತು ಮಾತನಾಡಿದ ಸಂಸ್ಕøತಿ ಚಿಂತಕ ಮಹೇಶ್ ಹರವೆ, ಇದು ಸಂಕೀರ್ಣವಾಗಿರುವ ವ್ಯಕ್ತಿತ್ವ ಕಥನ, ಸಂಸರ ಮೇಲೆ ಪ್ರೀತಿ ಎಷ್ಟಿತ್ತೋ, ಅಷ್ಟೇ ಭಯವೂ ಇತ್ತು. ಬಹಳ ದೊಡ್ಡ ವ್ಯಕ್ತಿತ್ವ ಸಂಸರದ್ದು. ಮನಸ್ಸಿನ ತಾಕಲಾಟಗಳನ್ನು ಹೇಳುವ ಕೃತಿ ಇದು ಎಂದರು.

ಕಾದಂಬರಿಕಾರ ಪ್ರೊ.ಮಲೆಯೂರು ಗುರುಸ್ವಾಮಿ ಮಾತನಾಡಿ, `ಸಂಸ’ರÀ ಇಡೀ ಬದುಕನ್ನು ಇಲ್ಲಿ ತೋರಿಸಲು ಪ್ರಯತ್ನಿಸಿ ದ್ದೇನೆ. ಒಮ್ಮೆ ಕುಂ.ವೀರಭದ್ರಪ್ಪನವರು ಸಂಸರ ಬಗ್ಗೆ ಬರೆಯಲಿಲ್ಲವೇ ಎಂದು ಕೇಳಿದ್ದರು. ಅಂತೆಯೇ ಸಂಸರ ಬದುಕನ್ನು ಕಟ್ಟಿ ಕೊಡುವ ಪ್ರಯತ್ನ ಮಾಡಿದ್ದೇನೆ. ಈ ಕಾದಂಬರಿ ಬರೆ ಯುವ ಮುನ್ನ ಮಾಹಿತಿ ಸಂಗ್ರಹಿಸಲು ಒಂದೂವರೆ ವರ್ಷ ಬೇಕಾಯಿತು. ನಂತರ ಕೋವಿಡ್-19 ಲಾಕ್‍ಡೌನ್ ಸಂದರ್ಭ ದಲ್ಲಿ ಮೂರು ತಿಂಗಳ ಅವಧಿಯಲ್ಲಿ ಕಾದಂಬರಿ ಬರೆದಿದ್ದಾಗಿ ತಿಳಿಸಿದರು.

ಚಾಮರಾಜನಗರದ ನಾಟಕಕಾರರಿಗೆ ಕೃತಿಯನ್ನು ಅರ್ಪಿಸಿರುವುದು ಇಲ್ಲಿ ಬಹಳ ಮುಖ್ಯ. ಸಂಸರು ನಟನೆಯ ಜೊತೆಗೆ ಬಹು ದೊಡ್ಡ ನಿದೆರ್Éೀಶಕರೂ ಹೌದು. ಮರೆಯಾಗಿ ಹೋಗಿರುವವರನ್ನು ಹೊರ ಜಗತ್ತಿಗೆ ಲೇಖಕರು ಪರಿಚಯ ಮಾಡಿ ಕೊಟ್ಟಿದ್ದಾರೆ. ನೋವು ಹೊಂದಿರುವವರಿಗೆ ಸಾಂಗತ್ಯ ನೀಡಬೇಕಾದದ್ದು ಸಮಾಜದ ಕರ್ತವ್ಯವೂ ಹೌದು. ಆ ಕರ್ತವ್ಯವನ್ನು ಮಲೆಯೂರು ಗುರುಸ್ವಾಮಿ ಮಾಡಿ ತೋರಿಸಿದ್ದಾರೆ ಎಂದು ತಿಳಿಸಿದರು. ಸಮಾರಂಭದಲ್ಲಿ ಸಂವಹನ ಪ್ರಕಾಶನದ ಡಿ.ಎನ್.ಲೋಕಪ್ಪ ಉಪಸ್ಥಿತರಿದ್ದರು.

Translate »