ಹಾಸ್ಟೆಲ್‍ನಲ್ಲಿ ಬ್ಯಾಟರಿ, ಯುಪಿಎಸ್ ಕದ್ದ ಖದೀಮನ ಬಂಧನ
ಮೈಸೂರು

ಹಾಸ್ಟೆಲ್‍ನಲ್ಲಿ ಬ್ಯಾಟರಿ, ಯುಪಿಎಸ್ ಕದ್ದ ಖದೀಮನ ಬಂಧನ

July 21, 2018

ಮೈಸೂರು: ವಿದ್ಯಾರ್ಥಿನಿಲಯದ ಯುಪಿಎಸ್ ಮತ್ತು ಬ್ಯಾಟರಿ ಕಳವು ಮಾಡಿದ್ದ ಖದೀಮನನ್ನು ಆಲನಹಳ್ಳಿ ಪೊಲೀಸರು ಬಂಧಿಸಿ, 10 ಸಾವಿರ ರೂ. ಮೌಲ್ಯದ ಬ್ಯಾಟರಿ, ಯುಪಿಎಸ್ ವಶಪಡಿಸಿಕೊಂಡಿದ್ದಾರೆ. ಮೈಸೂರು ಗೌಸಿಯಾನಗರದ ಫಾರಂ ಕಾಲೋನಿ ನಿವಾಸಿ ಇಮ್ರಾನ್ @ ಟಮಾಟೋ ಬಿನ್ ರಬ್ಬಾನಿ(23) ಬಂಧಿತ ಆರೋಪಿ. ಈತ ಜು.12ರಂದು ಸರ್ದಾರ್ ವಲ್ಲಭ ಬಾಯ್ ಪಟೇಲ್ ನಗರದ ವಿದ್ಯಾರ್ಥಿನಿಲಯದಲ್ಲಿ ಯುಪಿಎಸ್ ಮತ್ತು ಬ್ಯಾಟರಿಗಳನ್ನು ಕಳವು ಮಾಡಿದ್ದ. ಈ ಸಂಬಂಧ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖ ಲಾಗಿತ್ತು. ತನಿಖೆ ಕೈಗೊಂಡ ಆಲನಹಳ್ಳಿ ಪೊಲೀಸರು, ವಿದ್ಯಾರ್ಥಿನಿಲಯದ ಪಕ್ಕದ ಮನೆಯ ಸಿಸಿಟಿವಿ ಪರಿಶೀಲಿಸಿ ದಾಗ ಲಗೇಜ್ ಆಟೋದಲ್ಲಿ ನಾಲ್ವರು ಕಳವು ಮಾಡಿರುವುದು ರೆಕಾರ್ಡ್ ಆಗಿತ್ತು. ಇಂದು ಇಮ್ರಾನ್‍ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನ ಮಾಡಿ ರುವುದಾಗಿ ಒಪ್ಪಿಕೊಂಡಿದ್ದು, ಬ್ಯಾಟರಿ, ಯುಪಿಎಸ್ ಹಾಗೂ ಗೂಡ್ಸ್‍ಆಟೋ ವಶಪಡಿಸಿಕೊಂಡಿದ್ದಾರೆ. ಉಳಿದ ಆರೋಪಿಗಳ ಪತ್ತೆಗೂ ಬಲೆ ಬೀಸಿದ್ದಾರೆ.

Translate »