ಮೈಸೂರು,ಅ.12(ಎಂಟಿವೈ)- ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಒಂದ ಕ್ಕೊಂದು ಸಂಬಂಧವಿರುವ ಇಲಾಖೆ ಯಾಗಿದ್ದು, ರಾಜ್ಯದ ಜನರಿಗೆ ಶೀಘ್ರ ಸೇವೆ ದೊರೆಯಲೆಂಬ ಉದ್ದೇಶದಿಂದ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ನನ್ನ ಮೇಲೆ ವಿಶ್ವಾಸವಿಟ್ಟು ಆರೋಗ್ಯ ಇಲಾಖೆ ಜವಾಬ್ದಾರಿಯನ್ನೂ ನೀಡಿದ್ದಾರೆ. ಅದನ್ನು ಸಮರ್ಥವಾಗಿ ನಿಭಾಯಿಸಲು ಪ್ರಾಮಾ ಣಿಕ ಪ್ರಯತ್ನ ಮಾಡುತ್ತೇನೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.
ಮೈಸೂರಿನ ಸರ್ಕಾರಿ ಅತಿಥಿ ಗೃಹದಲ್ಲಿ ಸೋಮವಾರ ಪತ್ರಕರ್ತರೊಂದಿಗೆ ಮಾತ ನಾಡಿದ ಅವರು, ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಒಂದಕ್ಕೊಂದು ಸಂಪರ್ಕ ಹೊಂದಿರುವ ಇಲಾಖೆಯಾಗಿವೆ. ಎರಡೂ ಇಲಾಖೆಯ ಕಾರ್ಯ ವೈಖರಿ ಒಂದೇ ಕ್ಷೇತ್ರಕ್ಕೆ ಸೇರಿದ್ದು, ಒಂದೇ ಸೂರಿ ನಡಿ ಬರುತ್ತವೆ. ದೇಶದ ಹಲವು ರಾಜ್ಯಗಳಲ್ಲೂ ಈ ಎರಡೂ ಇಲಾಖೆಯನ್ನು ಒಂದೇ ಖಾತೆ ಯಲ್ಲಿ ಜೋಡಿಸಲಾಗಿದೆ. ಅಲ್ಲದೆ ಈ ಎರಡೂ ಇಲಾಖೆಗೂ ಒಬ್ಬರೇ ಸಚಿವರನ್ನು ನೇಮಿಸಲಾಗಿದೆ. ಅದೇ ಮಾದರಿಯಲ್ಲಿ ರಾಜ್ಯದಲ್ಲೂ ಅನುಸರಿಸಲು ಮುಖ್ಯಮಂತ್ರಿ ಗಳು ಮುಂದಾಗಿದ್ದು, ಆರೋಗ್ಯ ಇಲಾಖೆ ಜವಾಬ್ದಾರಿಯನ್ನು ನನಗೆ ನೀಡಿದ್ದಾರೆ ಎಂದು ವಿಶ್ಲೇಷಿಸಿದರು.
ಆರೋಗ್ಯ ಇಲಾಖೆಯನ್ನು ಸಚಿವ ಬಿ. ಶ್ರೀರಾಮುಲು ಅವರಿಂದ ನನಗೆ ವಹಿಸಿ ರುವುದರಲ್ಲಿ ಯಾವುದೇ ಅಸಮಾಧಾನ ವಾಗಲೀ ಅಥವಾ ಭಿನ್ನಮತವಾಗಲೀ ಸೃಷ್ಟಿಯಾಗುವುದಿಲ್ಲ. ಎರಡೂ ಇಲಾಖೆಗಳು ತಾಂತ್ರಿಕವಾಗಿ ಒಂದೇ ಆಗಿರುವುದರಿಂದ ಸುಗಮ ಆಡಳಿತಾತ್ಮಕ ಪ್ರಕ್ರಿಯೆಗಾಗಿಯೇ ಈ ಬದಲಾವಣೆ ಮಾಡಲಾಗಿದೆ. ಇದರಿಂದ ಶ್ರೀರಾಮುಲು ಅವರಿಗೆ ಯಾವುದೇ ಕಳಂಕ ವಿಲ್ಲ. ಮುಖ್ಯಮಂತ್ರಿಗಳು ಖಾತೆ ಬದಲಾವಣೆ ಮಾಡುವ ಮುನ್ನ ಶ್ರೀರಾಮುಲು ಅವರೊಂ ದಿಗೆ ಚರ್ಚಿಸಿ, ವಾಸ್ತವತೆಯನ್ನು ಮನ ವರಿಕೆ ಮಾಡಿಕೊಟ್ಟಿದ್ದಾರೆ. ಇದಕ್ಕೆ ಅವರೂ ಒಪ್ಪಿಗೆ ಸೂಚಿಸಿದ ನಂತರವೇ ಆರೋಗ್ಯ ಖಾತೆ ನನಗೆ ನೀಡಲಾಗಿದೆ ಎಂದರು.
ಆರೋಗ್ಯ ಇಲಾಖೆ ಸವಾಲಿನ ಇಲಾಖೆ ಯಾಗಿದೆ. ಅದರಲ್ಲೂ ಪ್ರಸಕ್ತ ಕೋವಿಡ್-19ನಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಆರೋಗ್ಯ ಇಲಾಖೆ ನಿರ್ವಹಿಸುವ ಹೆಚ್ಚಿನ ಜವಾಬ್ದಾರಿ ಯನ್ನು ಸಿಎಂ ನನ್ನ ಮೇಲೆ ನಂಬಿಕೆ ಇಟ್ಟು ನೀಡಿದ್ದಾರೆ. ಜನಸಾಮಾನ್ಯರಿಗೆ ಆರೋಗ್ಯ ಇಲಾಖೆ ಸೇವೆ ಸುಲಭವಾಗಿ ದೊರಕು ವಂತೆ ಮಾಡುವುದೇ ನನ್ನ ಗುರಿಯಾಗಿದೆ. ಅಲ್ಲದೆ ಇಲಾಖೆಯಲ್ಲಿ ಮೈಲಿಗಲ್ಲಾಗಿ ಉಳಿ ಯುವ ಕೆಲಸ ಇನ್ನು ಬಹಳಷ್ಟಿದ್ದು, ಅದನ್ನು ರಚನಾತ್ಮಕ ಮಾಡಿ, ಆರೋಗ್ಯ ಸೇವೆ ಜನರಿಗೆ ಸುಲಭವಾಗಿ ಸಿಗುವಂತೆ ಮಾಡುತ್ತೇನೆ ಎಂದರು.
ಕೇರಳ ಮಾದರಿಯಲ್ಲಿ ಆರೋಗ್ಯ ಇಲಾಖೆ ಯನ್ನು ಸುಧಾರಣೆ ಮಾಡುವ ಅಗತ್ಯವಿದೆ. ರಚನಾತ್ಮಕ ಕಾರ್ಯಕ್ರಮಗಳ ಮೂಲಕ ಮಾದರಿ ಸೇವೆ ನೀಡುವ ಮಹತ್ವಾಕಾಂಕ್ಷೆ ಹೊಂದಿದ್ದೇನೆ. ಸರ್ಕಾರಿ ಆಸ್ಪತ್ರೆಯಲ್ಲಿ ಹೆಚ್ಚು ವರಿ 600ರಿಂದ 800 ಬೆಡ್ ವ್ಯವಸ್ಥೆ ಮಾಡುವುದು. ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಮೈಸೂ ರಲ್ಲಿ ಕೊರೊನಾ ಸೋಂಕಿತರ ಸಾವಿನ ಪ್ರಕರಣ ಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಡೆತ್ ಆಡಿಟ್ ಮಾಡಿಸಲು ನಿರ್ಧರಿಸಲಾಗಿದೆ ಎಂದರು.