ಮೈಸೂರಿನಲ್ಲಿ ನರ್ಸಿಂಗ್ ಕೋರ್ಸ್ ಪ್ರವೇಶಕ್ಕೆ ಕೌನ್ಸಿಲಿಂಗ್ ಆರಂಭ
ಮೈಸೂರು

ಮೈಸೂರಿನಲ್ಲಿ ನರ್ಸಿಂಗ್ ಕೋರ್ಸ್ ಪ್ರವೇಶಕ್ಕೆ ಕೌನ್ಸಿಲಿಂಗ್ ಆರಂಭ

October 6, 2021

ಮೈಸೂರು, ಅ. 5(ಆರ್‍ಕೆ)- 2021-22ನೇ ಸಾಲಿನ ಶೈಕ್ಷಣಿಕ ಶುಶ್ರೂಷಾ ಕೋರ್ಸ್‍ಗಳ ಪ್ರವೇಶಾತಿಗೆ ದಾಖಲಾತಿ ಪರಿಶೀಲಿಸಿ ವಿದ್ಯಾರ್ಥಿಗಳ ಕೌನ್ಸಿಲಿಂಗ್ ಪ್ರಕ್ರಿಯೆ ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಇಂದಿನಿಂದ ಆರಂಭವಾಗಿದೆ.

ಕರ್ನಾಟಕ ರಾಜ್ಯ ಶುಶ್ರೂಷಾ ಪರೀಕ್ಷಾ ಮಂಡಳಿಯು ಸರ್ಕಾರಿ ಕೋಟಾದಡಿ ಡಿಪ್ಲೋಮಾ ಇನ್ ನರ್ಸಿಂಗ್ (ಜಿಎನ್‍ಎಂ) ಸೀಟುಗಳಿಗೆ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ದಾಖಲಾತಿ ಪರಿ ಶೀಲಿಸಿ ಮೊದಲನೇ ಸುತ್ತಿನ ಆಯ್ಕೆಯನ್ನು ನಮೂದಿಸಲು ಮೈಸೂರಿನ ಎಂಎಂಸಿ ಅಂಡ್ ಆರ್‍ಐನಲ್ಲಿ ಆರಂಭವಾಗಿದೆ.

ಇಂದು ಬೆಳಗ್ಗೆ 10ರಿಂದ ಆರಂಭವಾದ ಕೌನ್ಸಿಲಿಂಗ್ ಪ್ರಕ್ರಿಯೆಗೆ ಮೈಸೂರು, ಚಾಮ ರಾಜನಗರ, ಮಂಡ್ಯ ಹಾಗೂ ಕೊಡಗು ಜಿಲ್ಲೆಯ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾದರು. ಅಕ್ಟೋಬರ್ 9ರವರೆಗೆ ನಿತ್ಯ ಬೆಳಗ್ಗೆ 10ರಿಂದ ಸಂಜೆ 5 ಗಂಟೆವ ರೆಗೆ ನಡೆಯಲಿರುವ ಕೌನ್ಸಿಲಿಂಗ್‍ನಲ್ಲಿ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಮೂಲ ಅಂಕಪಟ್ಟಿ, 7 ವರ್ಷಗಳಿಂದ ಕರ್ನಾಟಕ ರಾಜ್ಯದಲ್ಲಿ ವ್ಯಾಸಂಗ ಮಾಡಿದ ಬಗ್ಗೆ ಸ್ಟಡಿ ಸರ್ಟಿಫಿಕೇಟ್, ಜಾತಿ ಪ್ರಮಾಣಪತ್ರ, ಹೈದ ರಾಬಾದ್-ಕರ್ನಾಟಕ ಮೀಸಲಾತಿ ಪಡೆ ಯುವವರಿಗೆ 371-ಎ ಂಟಿಟಿexuಡಿe-ಂ ಪ್ರಮಾಣಪತ್ರ, ಹೊರನಾಡ ಕನ್ನಡಿಗರು ಸಕ್ಷಮ ಪ್ರಾಧಿಕಾರದಿಂದ ಅಥವಾ ತಹಸೀ ಲ್ದಾರ್‍ರಿಂದ ಪಡೆದ ದೃಢೀಕರಣ ಪತ್ರ ಮುಂತಾದ ದಾಖಲಾತಿಗಳನ್ನು ಪರಿ ಶೀಲಿಸಲಾಗುತ್ತಿದೆ. ಬೆಂಗಳೂರು ಮೆಡಿ ಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಗಳ ಸಂಸ್ಥೆ, ಬಳ್ಳಾರಿಯ ವಿಜಯನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಬೆಳ ಗಾವಿ, ಕಲಬುರಗಿ, ಹಾಸನ, ಮಂಗಳೂರು, ಹುಬ್ಬಳ್ಳಿ, ಕೊಪ್ಪಳ, ಚಿತ್ತದುರ್ಗ ಹಾಗೂ ಬಾಗಲಕೋಟೆ ವೈದ್ಯಕೀಯ ಕಾಲೇಜು ಗಳಲ್ಲಿ ನರ್ಸಿಂಗ್ ಕೋರ್ಸುಗಳ ಪ್ರವೇಶ ಕ್ಕಾಗಿ ಕೌನ್ಸಿಲಿಂಗ್ ಪ್ರಕ್ರಿಯೆ ನಡೆಯುತ್ತಿದೆ.

ಈವರೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮಾತ್ರ ನಡೆಯುತ್ತಿದ್ದ ನರ್ಸಿಂಗ್ ಡಿಪ್ಲೋಮಾ ಕೋರ್ಸುಗಳ ಪ್ರವೇಶ ಪ್ರಕ್ರಿಯೆ ಕೌನ್ಸಿಲಿಂಗ್ ಅನ್ನು ಕೊರೊನಾ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿ ಬೆಂಗಳೂರಿನಿಂದ ಹೊರಭಾಗದ ಜಿಲ್ಲೆಗಳಲ್ಲಿ ನಡೆಸಲಾಗುತ್ತಿದೆ ಎಂದು ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ. ಸಿ.ಪಿ.ನಂಜರಾಜ್ ತಿಳಿಸಿದ್ದಾರೆ.

Translate »