ಪೊಲೀಸ್ ಇಲಾಖೆಗೆ ಬೆಲ್ಜಿಯನ್  ಮಾಲಿನೊಯಿಸ್ ತಳಿಯ ಶ್ವಾನ ಕೊಡುಗೆ
ಮೈಸೂರು

ಪೊಲೀಸ್ ಇಲಾಖೆಗೆ ಬೆಲ್ಜಿಯನ್ ಮಾಲಿನೊಯಿಸ್ ತಳಿಯ ಶ್ವಾನ ಕೊಡುಗೆ

March 9, 2021

ಮೈಸೂರು,ಮಾ.8(ಆರ್‍ಕೆ)-ತನಿಖೆಗೆ ಸಹಾಯವಾಗ ಲೆಂದು ಶ್ವಾನ ತರಬೇತುದಾರ ಬಿ.ಸಿ. ಪ್ರಮೋದ್ ಅವರು ಮೈಸೂರು ನಗರ ಪೊಲೀಸ್ ಘಟಕಕ್ಕೆ ಅಪರೂಪದ ಬೆಲ್ಜಿಯನ್ ಮಾಲಿನೊಯಿಸ್ (ಃeಟgiಚಿಟಿ ಒಚಿಟiಟಿois) ತಳಿಯ ಶ್ವಾನವನ್ನು ಉಡುಗೊರೆಯಾಗಿ ನೀಡಿದ್ದಾರೆ.
ಮೈಸೂರು ತಾಲೂಕು, ಡಿ. ಸಾಲುಂಡಿ ಬಳಿ ಹೆಚ್.ಡಿ. ಕೋಟೆ ರಸ್ತೆಯಲ್ಲಿ ‘ಆ-ಏ9 Woಡಿಞiಟಿg ಆogs’ ಶ್ವಾನ ತರಬೇತಿ ಕೇಂದ್ರ ನಡೆಸುತ್ತಿರುವ ಪ್ರಮೋದ್ ಅವರು 2 ತಿಂಗಳ ವಿಶೇಷ ಪ್ರತಿಭೆ ಮತ್ತು ಅತ್ಯಂತ ಚುರುಕಿನ ಮನೋಭಾವದ ನಾಯಿ ಮರಿಯನ್ನು ಮೈಸೂರು ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಅವರಿಗೆ ಹಸ್ತಾಂತರಿಸಿದರು.

ಮೈಸೂರಿನ ಶ್ವಾನ ದಳಕ್ಕೆ ಮತ್ತೋರ್ವ ಅತಿಥಿ ಸೇರ್ಪಡೆ ಯಾದಂತಾಗಿದ್ದು, ಬಹು ಪ್ರತಿಭೆಯ ಈ ತಳಿಯ ಶ್ವಾನ ಬೆಂಗಳೂರಿನಲ್ಲಿರುವ ಎರಡನ್ನು ಹೊರತುಪಡಿಸಿದರೆ, ರಾಜ್ಯದಲ್ಲೆಲ್ಲೂ ಲಭ್ಯವಿಲ್ಲ. ಮೈಸೂರಲ್ಲಿ ಅಪರಾಧ ಕೃತ್ಯಗಳ ತಡೆ ಮತ್ತು ಪ್ರಕರಣಗಳ ತನಿಖೆಗೆ ಸಹಾಯ ವಾಗಲೆಂದು ನಾಯಿಯನ್ನು ನೀಡಿದ್ದೇನೆ ಎಂದು ಪ್ರಮೋದ್ ‘ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

ಆರ್ಮಿ, ಮಿಲಿಟರಿಯಲ್ಲಿ ಮಾತ್ರ ಬಳಸುವ ಈ ಶ್ವಾನ ಬಲು ಚುರುಕು. ಹೆಚ್ಚು ತೀವ್ರ ಮನೋಭಾವ, ಅಷ್ಟೇ ನಮ್ರತೆ, ನಂಬಿಕೆಗೆ ಅರ್ಹವಾದದ್ದು ಎನ್ನುವ ಪ್ರಮೋದ್, ಬಹು ಪ್ರತಿಭೆ, ಅತೀ ಬಲಶಾಲಿಯಾಗಿರುವ ಶ್ವಾನಕ್ಕೆ ಸ್ಫೋಟಕ ವಸ್ತು ಪತ್ತೆ, ನಾರ್ಕೋಟಿಕ್ಸ್, ಪರ್ಸನಲ್ ಪ್ರೊಟೆಕ್ಷನ್ ಹಾಗೂ ನಡವಳಿಕೆ ಬಗ್ಗೆ ತರಬೇತಿ ನೀಡಬಹುದಾಗಿದೆ ಎಂದರು.

ಗಣ್ಯ ವ್ಯಕ್ತಿಗಳು ಸುರಕ್ಷತೆಗಾಗಿ ಗನ್‍ಮ್ಯಾನ್ ಅಥವಾ ಬೌನ್ಸರ್ ಇರಿಸಿಕೊಳ್ಳುವ ಬದಲು ಈ ಶ್ವಾನವನ್ನು ಸಾಕಿ ಕೊಂಡರೆ ಸಾಕು, ಕಮಾಂಡ್ ಮಾಡಿದಂತೆ ಎದುರಾಳಿಗಳ ಮೇಲೆ ದಾಳಿ ಮಾಡಿ ರಕ್ಷಣೆ ಮಾಡುತ್ತದೆ. ಬೆದರಿಕೆ ಇದ್ದ ವರಿಗೆ ಅತೀ ಹೆಚ್ಚಿನ ಹಣ, ಚಿನ್ನಾಭರಣ ಸಾಗಿಸುವಾಗ ದರೋಡೆಯಂತಹ ಕೃತ್ಯವನ್ನು ತಪ್ಪಿಸುತ್ತದೆ ಎಂದು ತಿಳಿಸಿದರು.

ಮಾಲೀಕನಿಗೆ ನಿಷ್ಠೆ ತೋರಿ, ವೈರಿಗೆ ಆಕ್ರೋಶದಿಂದ ದಾಳಿ ಮಾಡುವ ಆತ, ಐವರನ್ನು ಒಮ್ಮೆಲೇ ಎದುರಿಸುತ್ತಾನೆ. ಜಂಪಿಂಗ್ ರ್ಯಾಂಪಿಂಗ್‍ನಲ್ಲಿ ನಿಸ್ಸೀಮನಾಗಿದ್ದು, ತನ್ನ ಮಾಲೀ ಕನ ನಿರ್ದೇಶನವನ್ನು ಚಾಚೂ ತಪ್ಪದೇ ಪಾಲಿಸುವ ಗುಣ ಹೊಂದಿದ್ದಾನೆ ಎಂದು ಪ್ರಮೋದ್ ಹೇಳಿದರು.
ಸಸ್ಯಾಹಾರಿ ಮತ್ತು ಮಾಂಸಾಹಾರಿಯೂ ಆದ ಈ ಶ್ವಾನವು, ಯಾವುದೇ ಆಹಾರವನ್ನಾದರೂ ಸೇವಿಸುತ್ತದೆ. ತರಬೇತಿ ನೀಡುವುದೂ ಸುಲಭ. ಒಂದೇ ಒಂದು ಚೆಂಡಿ ನಿಂದ ಎಲ್ಲಾ ಬಗೆಯ ತರಬೇತಿ ನೀಡಿ ಒಂದು ವರ್ಷ ದೊಳಗಾಗಿ ತನಿಖೆಗೆ ಸಜ್ಜುಗೊಳಿಸಬಹುದು ಎಂದು ಅವರು ಅದರ ಗುಣಲಕ್ಷಣಗಳ ಬಗ್ಗೆ ವಿವರಿಸಿದರು.

ಪೊಲೀಸ್ ಇಲಾಖೆಯಲ್ಲಿ ತರಬೇತಿ ಪಡೆದರೆ ಮೈಸೂರು ನಗರದಲ್ಲಿ ಅಪರಾಧಗಳ ಸಂಖ್ಯೆ ಕಡಿಮೆಯಾಗುವ ಜೊತೆಗೆ ನನ್ನ ಶ್ವಾನದ ಸೇವೆ ಪೊಲೀಸ್ ಇಲಾಖೆಗೆ ಸಿಗುತ್ತಿದೆ ಎಂಬ ಸಮಾಧಾನವೂ ಇರುತ್ತದೆ ಎಂಬ ಕಾರಣಕ್ಕಾಗಿ 2 ತಿಂಗಳು ಮುದ್ದು ನಾಯಿ ಮರಿಯನ್ನು ಕೊಡುಗೆ ಯಾಗಿ ನೀಡಿದ್ದೇನೆ ಎಂದು ಪ್ರಮೋದ್ ನುಡಿದರು.

ಸುಮಾರು 1,50,000 ರೂ. ಬೆಲೆಯ ಶ್ವಾನವನ್ನು ಅತ್ಯಂತ ಪ್ರೀತಿ-ಗೌರವದಿಂದ ಪೊಲೀಸ್ ಇಲಾಖೆಗೆ ನೀಡಿದ್ದೇನೆ ಎಂದ ಪ್ರಮೋದ್ ಅವರ ಉದಾರತೆಯನ್ನು ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಶ್ಲಾಘಿಸಿದರು.

ಶ್ವಾನ ಹಸ್ತಾಂತರ ವೇಳೆ ಸಿಎಆರ್ ಡಿಸಿಪಿ ಶಿವರಾಜ್, ಶ್ವಾನ ದಳದ ಇನ್ಸ್‍ಪೆಕ್ಟರ್ ಕೆ.ಎಂ. ಮೂರ್ತಿ, ಸಬ್ ಇನ್ಸ್‍ಪೆಕ್ಟರ್ ಸುರೇಶ್, ತರಬೇತುದಾರ ಜಿ. ಮಂಜು ಹಾಗೂ ಇತರರು ಉಪಸ್ಥಿತರಿದ್ದರು.

Translate »