ಮೈಸೂರು, ಸೆ.19(ಎಂಟಿವೈ)- ಕಬಿನಿ ಜಲಾಶಯದಲ್ಲಿ ವಿದ್ಯುತ್ ಉತ್ಪಾದಿಸುತ್ತಿ ರುವ ಸುಭಾಷ್ ಪವರ್ ಕಾಪೆರ್Çರೇಷನ್ ಲಿಮಿಟೆಡ್ ಕಂಪನಿ ಸಿಬ್ಬಂದಿಗಳು ನಿಯಮ ಉಲ್ಲಂಘಿಸಿ ಅನುಮತಿ ಪಡೆಯದೇ ಜಲಾ ಶಯದ ಬೆಲ್ ಮೌತ್ ದುರಸ್ತಿ ಮಾಡಿ ರುವ ಪ್ರಕರಣವನ್ನು ಗಂಭೀರವಾಗಿ ಪರಿ ಗಣಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳು ವಂತೆ ಒತ್ತಾಯಿಸಿ ಕಸ್ತೂರಿ ಕರ್ನಾಟಕ ನ್ಯಾಯಪರ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಮೈಸೂರಿನ ಡಿಸಿ ಕಚೇರಿ ಬಳಿ ಶನಿ ವಾರ ವೇದಿಕೆಯ ಕಾರ್ಯಕರ್ತರು ಪ್ರತಿ ಭಟನೆ ನಡೆಸಿ ಸುಭಾಷ್ ಪವರ್ ಕಾಪೆರ್Ç ರೇಷನ್ ಲಿ. ನಿಯಮ ಗಾಳಿಗೆ ತೂರಿ ವಿದ್ಯುತ್ ಉತ್ಪಾದನೆ ಮಾಡುತ್ತಿದೆ. ಜಲಾಶಯದಲ್ಲಿ ನೀರಿನ ಮಟ್ಟ ಕುಸಿದಿದ್ದಾಗಲೂ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಈ ವೇಳೆ ಹೈಡ್ರೋ ಟರ್ಬೈನ್‍ನಲ್ಲಿ ವೈಬ್ರೇಷನ್ ಉಂಟಾಗಿ ಬೆಲ್‍ಮೌತ್‍ನ ಕಬ್ಬಿಣದ ಪೈಪ್ ಕಿತ್ತು ಬಂದಿದೆ. ಇದನ್ನು ಸರ್ಕಾರದ ಗಮನಕ್ಕೆ ತರದೆ ಕಡಿಮೆ ಗುಣಮಟ್ಟದ ಕಬ್ಬಿಣದ ಪ್ಲೇಟ್ ಬಳಸಿ ದುರಸ್ತಿ ಕಾರ್ಯ ಕೈಗೊಂಡಿ ದ್ದಾರೆ. ಬೆಲ್ ಮೌತ್‍ನ ದುರಸ್ತಿ ಕಾರ್ಯ ದಿಂದ ಜಲಾಶಯಕ್ಕೆ ಅಪಾಯವಿದೆ ಎಂದು ಕಾಮಗಾರಿ ನಡೆಸಿದವರೇ ಹೇಳಿದ್ದಾರೆ. ಆದರೆ ಜಲಾಶಯದ ಇಂಜಿನಿಯರ್‍ಗಳು ಗಂಭೀರವಾಗಿ ಪರಿಗಣಿಸಿಲ್ಲ ಎಂದು ದೂರಿ ದರು. ಸೆ.21ರಿಂದ ನಡೆಯಲಿರುವ ವಿಧಾನ ಮಂಡಲ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ನಡೆಯಬೇಕು. ತನಿಖಾ ಸಮಿತಿ ನೇಮಕ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ವೇದಿಕೆ ರಾಜ್ಯಾಧ್ಯಕ್ಷ ಗಿರೀಶ್ ಶಿವಾರ್ಚಕ, ಜಿಲ್ಲಾಧ್ಯಕ್ಷ ವಿ.ಚೇತನ್, ನಗರಾಧ್ಯಕ್ಷ ಬಿ.ಧನ ರಾಜ್, ಪ್ರಧಾನ ಕಾರ್ಯದರ್ಶಿ ಪ್ರಕಾಶ್, ಕಾರ್ಯಕರ್ತರು ಪಾಲ್ಗೊಂಡಿದ್ದರು.