ಜನನಿ ಸೇವಾ ಟ್ರಸ್ಟ್‍ನಿಂದ ಆಟೋ ಚಾಲಕರಿಗೆ   ಅಪಘಾತ ವಿಮೆ ಬಾಂಡ್ ವಿತರಣೆ
ಮೈಸೂರು

ಜನನಿ ಸೇವಾ ಟ್ರಸ್ಟ್‍ನಿಂದ ಆಟೋ ಚಾಲಕರಿಗೆ  ಅಪಘಾತ ವಿಮೆ ಬಾಂಡ್ ವಿತರಣೆ

September 20, 2020

ಮೈಸೂರು, ಸೆ.19- ಮೈಸೂರಿನ ಜನನಿ ಸೇವಾ ಟ್ರಸ್ಟ್ ವತಿಯಿಂದ ಮಹಾರಾಜ ಪೆವಿಲಿಯನ್ ಮೈದಾನದಲ್ಲಿ 50 ಮಂದಿ ಆಟೋ ಚಾಲಕರಿಗೆ 1 ಲಕ್ಷ ಮೌಲ್ಯದ ಅಪಘಾತ ವಿಮೆ ಬಾಂಡ್ ವಿತರಿಸಲಾಯಿತು.

ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮೈಸೂರಿನಲ್ಲಿ ದಿನೇ ದಿನೆ ಹೆಚ್ಚಾ ಗುತ್ತಿರುವ ಕೊರೊನಾ ಸೋಂಕು ಪ್ರಕರಣದ ಹಿನ್ನೆಲೆಯಲ್ಲಿ ಆಟೋ ಚಾಲಕರಿಗೆ ಉಚಿತವಾಗಿ ಅಪಘಾತ ವಿಮೆ ನೀಡು ತ್ತಿರುವುದು ಶ್ಲಾಘನೀಯ. ಪ್ರತಿಯೊಬ್ಬರೂ ಆರೋಗ್ಯ ಇದ್ದಾಗಲೇ ವಿಮೆ ಮಾಡಿಸಿ ಆರೋಗ್ಯದ ಬಗ್ಗೆ ಹೆಚ್ಚು ಜಾಗೃತಿ ವಹಿಸಬೇಕು. ಕೆಲವು ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆ ನೆಪದಲ್ಲಿ ಜನರಿಂದ ಹೆಚ್ಚು ಶುಲ್ಕ ವಸೂಲಿ ಮಾಡುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದರು.

ಕೊರೊನಾ ಸೋಂಕು ತಡೆಗೆ ಸರ್ಕಾರ ವಿಫಲವಾಗಿದ್ದು, ಖಾಸಗಿ ಆಸ್ಪತ್ರೆಗಳು ಪರಿಸ್ಥಿತಿಯನ್ನು ದುರ್ಬಳಕೆ ಮಾಡಿ ಕೊಳ್ಳುತ್ತಿವೆ. ಸೋಂಕಿತರಿಂದ ಹೆಚ್ಚು ಶುಲ್ಕ ವಸೂಲು ಮಾಡು ತ್ತಿವೆ. ರಾಜ್ಯ ಆರೋಗ್ಯ ಸಚಿವ ಶ್ರೀರಾಮುಲು ಅವರು ಈ ಬಗ್ಗೆ ಗಮನ ಹರಿಸಬೇಕು. ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಟ್ರಸ್ಟ್ ಇಳ್ಳೆ ಆಳ್ವಾರ್ ಸ್ವಾಮೀಜಿ, ಟ್ರಸ್ಟ್ ಅಧ್ಯಕ್ಷ ಎಂ.ಕೆ.ಅಶೋಕ್, ಕೆಪಿಸಿಸಿ ಸದಸ್ಯರಾದ ಟಿ.ಎಸ್.ರವಿ ಶಂಕರ್, ಕಾಂಗ್ರೆಸ್ ಮುಖಂಡ ಕೆ.ಹರೀಶ್‍ಗೌಡ, ಡಾ.ರಘು ರಾಮ್ ವಾಜಪೇಯಿ, ಸಿಸಿ ಬ್ಯಾಂಕಿನ ಅಧ್ಯಕ್ಷರಾದ ಕೆ.ಪುಟ್ಟಸ್ವಾಮಿ, ಶ್ರೀನಿವಾಸ್ ಮಿತ್ರ ಸೇರಿದಂತೆ ಇನ್ನಿತರರು ಹಾಜರಿದ್ದರು.

 

 

Translate »