ಗೃಹ ಮಂಡಳಿಯ ನಿಸರ್ಗ ಬಡಾವಣೆಯಲ್ಲಿ ಭೂಮಿ ನೀಡಿದ ರೈತರಿಗೂ ನಿವೇಶನ ಭಾಗ್ಯ
ಮೈಸೂರು

ಗೃಹ ಮಂಡಳಿಯ ನಿಸರ್ಗ ಬಡಾವಣೆಯಲ್ಲಿ ಭೂಮಿ ನೀಡಿದ ರೈತರಿಗೂ ನಿವೇಶನ ಭಾಗ್ಯ

September 4, 2020

ಮೈಸೂರು, ಸೆ.3-ದಶಕದ ಹಿಂದೆ ವಸತಿ ಸಚಿವ ರಾಗಿದ್ದ ವಿ.ಸೋಮಣ್ಣ ಅವರಿಂದ ಶಂಕುಸ್ಥಾಪನೆಯಾಗಿ ಅಭಿ ವೃದ್ಧಿಪಡಿಸಲಾಗುತ್ತಿರುವ ಗೃಹ ಮಂಡಳಿಯ ಇಲವಾಲ ಸಮೀ ಪದ ಕೆಆರ್‍ಎಸ್ ನಿಸರ್ಗ ಬಡಾ ವಣೆಗೆ ಭೂಮಿ ನೀಡಿದ ರೈತರಿಗೂ ಈಗ ಮತ್ತೇ ವಸತಿ ಸಚಿವರಾಗಿ ರುವ ವಿ.ಸೋಮಣ್ಣ ನಿವೇಶನ ಭಾಗ್ಯ ಕಲ್ಪಿಸಿದ್ದಾರೆ. ಇದರ ಹಿಂದೆ ಕರ್ನಾಟಕ ಗೃಹ ಮಂಡಳಿ ಮಾಜಿ ಅಧ್ಯಕ್ಷರೂ ಆದ, ಹಾಲಿ ಚಾಮುಂಡೇ ಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡರ ಒತ್ತಾಸೆಯಿದೆ.

ಹಿನ್ನೆಲೆ: ಜಿ.ಟಿ.ದೇವೇಗೌಡರು ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷರಾಗಿದ್ದ ವೇಳೆ ಇಲವಾಲ ಹೋಬ ಳಿಯ ಗುಂಗ್ರಾಲ್ ಛತ್ರ, ಕಲ್ಲೂರು ನಾಗನಹಳ್ಳಿ ಕಾವಲ್, ಚಿಕ್ಕನಹಳ್ಳಿ ಹಾಗೂ ಆನಂದೂರು ಗ್ರಾಮಗಳ ವ್ಯಾಪ್ತಿ ಗೊಳಪಟ್ಟ 496 ಎಕರೆ ವಿಸ್ತೀರ್ಣದಲ್ಲಿ ಬಡಾವಣೆ ನಿರ್ಮಿಸಲು ನಿರ್ಧರಿಸಿದ್ದರು. ಬಡಾವಣೆ ನಿರ್ಮಾ ಣಕ್ಕೆ ಭೂಮಿ ನೀಡುವ ರೈತರಿಗೂ ನಿವೇಶನ ಒದಗಿ ಸಬೇಕು ಎಂಬ ಮಹದಾಸೆ ಹೊಂದಿದ್ದ ಅವರು, ಅಂದಿನ ವಸತಿ ಸಚಿವರಾದ ವಿ.ಸೋಮಣ್ಣ ಅವರ ಮುಂದೆ ಪ್ರಸ್ತಾವನೆಯನ್ನಿಟ್ಟಿದ್ದರು.

ಅದರಂತೆ ಕೆಆರ್‍ಎಸ್ ನಿಸರ್ಗ ಬಡಾವಣೆಯ ಶಂಕುಸ್ಥಾಪನೆಯನ್ನು ನೆರವೇರಿಸಿದ ಸೋಮಣ್ಣ ಅವರು, ಜಿ.ಟಿ.ದೇವೇಗೌಡರ ಕೋರಿಕೆಯ ಮೇರೆಗೆ ಬಡಾವಣೆಗೆ ಭೂಮಿ ನೀಡಿದ ರೈತರಿಗೆ ಎಕರೆಗೆ ಒಂದು ನಿವೇಶನ ನೀಡುವುದಾಗಿ ಭರವಸೆಯಿತ್ತಿದ್ದರು. ಇತ್ತ ಗೃಹ ಮಂಡಳಿ ಅಧ್ಯಕ್ಷರಾಗಿದ್ದ ಜಿ.ಟಿ.ದೇವೇಗೌಡರು 2013ರ ಫೆ.14 ರಂದು ಗೃಹ ಮಂಡಳಿ ಸಭೆಯಲ್ಲಿ ಈ ಸಂಬಂಧ ನಿರ್ಣಯ ಕೈಗೊಂಡು ಅನುಮೋದನೆಗಾಗಿ ಸರ್ಕಾ ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು.

ಆದರೆ ಆನಂತರ ಬಂದ ಯಾವುದೇ ವಸತಿ ಸಚಿ ವರು ಈ ಬಡಾವಣೆಯನ್ನು ಅಭಿವೃದ್ಧಿಪಡಿಸುವುದ ಕ್ಕಾಗಲೀ, ರೈತರಿಗೆ ನಿವೇಶನ ನೀಡುವುದಕ್ಕಾಗಲೀ ಗಮನ ಹರಿಸದೇ ಇದ್ದ ಪರಿಣಾಮ ಬಡಾವಣೆಯ ಅಭಿವೃದ್ಧಿ ಕಾಮಗಾರಿ ಸ್ಥಗಿತಗೊಂಡಿತ್ತು. ತಮಗೆ ನಿವೇಶನ ನೀಡುವ ಬಗ್ಗೆ ಯಾವುದೇ ರೀತಿಯ ಖಾತ್ರಿ ಇಲ್ಲದ ಕಾರಣ, ಬಡಾ ವಣೆಗಾಗಿ ಭೂಮಿ ನೀಡಿದ ರೈತರು ಅಲ್ಲಿನ ಅಭಿವೃದ್ಧಿ ಕಾಮಗಾರಿಗೆ ಆಗಾಗ ಅಡ್ಡಿಪಡಿಸುತ್ತಿದ್ದರು. ಒಟ್ಟಾರೆ ಬಡಾ ವಣೆ ಅಭಿವೃದ್ಧಿಯೂ ಆಗಲಿಲ್ಲ, ರೈತರಿಗೆ ನಿವೇಶನ ದೊರೆ ಯುವ ಬಗ್ಗೆ ಯಾವುದೇ ರೀತಿಯ ಖಾತರಿಯೂ ಇರಲಿಲ್ಲ.

ಈ ನಡುವೆ ಮತ್ತೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು ವಿ.ಸೋಮಣ್ಣನವರೇ ವಸತಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದರು. ಜೊತೆಗೆ ಅವರೇ ಕರ್ನಾಟಕ ಗೃಹ ಮಂಡಳಿಯ ಅಧ್ಯಕ್ಷರೂ ಆಗಿದ್ದರು. ತಮ್ಮ ಕನಸಿನ ಕೆಆರ್‍ಎಸ್ ನಿಸರ್ಗ ಬಡಾವಣೆ ನಿರ್ಮಾಣವಾಗಲಿಲ್ಲ. ತಮ್ಮ ರೈತ ಬಾಂಧವರಿಗೆ ನೀಡಿದ ಭರವಸೆಯಂತೆ ನಿವೇ ಶನವೂ ದೊರೆಯುತ್ತಿಲ್ಲ ಎಂಬ ಚಿಂತೆಯಲ್ಲಿದ್ದ ಜಿ.ಟಿ. ದೇವೇಗೌಡರು, ವಸತಿ ಸಚಿವ ಸೋಮಣ್ಣ ಅವರನ್ನು ಸಂಪರ್ಕಿಸಿ ಕೆಆರ್‍ಎಸ್ ನಿಸರ್ಗ ಬಡಾವಣೆಯ ಬಗ್ಗೆ ಪ್ರಸ್ತಾಪಿಸಿದ್ದರು. ಅದರ ಶಂಕುಸ್ಥಾಪನೆ ವೇಳೆ ಸೋಮಣ್ಣ ನೀಡಿದ್ದ ಭರವಸೆ ಯನ್ನೂ ಕೂಡ ಅವರಿಗೆ ನೆನಪಿಸಿದ್ದರು. ಇದರ ಫಲವಾಗಿ ಇದೇ ಜನವರಿ 21ರಂದು ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಗೃಹ ಮಂಡಳಿ ಸಭೆಯಲ್ಲಿ ಸೋಮಣ್ಣ ಅವರು ಬಡಾವಣೆಗೆ ಭೂಮಿ ನೀಡಿದ ರೈತರಿಗೆ ನಿವೇಶನ ನೀಡುವ ಸಂಬಂಧ ನಿರ್ಣಯ ಕೈಗೊಂಡು ಸರ್ಕಾರದ ಅನು ಮೋದನೆಗಾಗಿ ರವಾನಿಸಿದ್ದರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆ ಯಲ್ಲಿ ಇಂದು (ಗುರುವಾರ) ನಡೆದ ಸಚಿವ ಸಂಪುಟ ಸಭೆಯಲ್ಲಿ ಸೋಮಣ್ಣ ಅವರೇ ಈ ವಿಷಯವನ್ನು ಮಂಡಿಸಿ ಕೆಆರ್‍ಎಸ್ ನಿಸರ್ಗ ಬಡಾವಣೆಗೆ ಭೂಮಿ ನೀಡಿದ ರೈತರಿಗೆ 1 ಎಕರೆಗೆ 30ಘಿ40 ಅಳತೆಯ ನಿವೇಶನ ಹಾಗೂ 10ರಿಂದ 20 ಗುಂಟೆ ಜಮೀನು ನೀಡಿದ ರೈತರಿಗೆ 20ಘಿ30 ಅಳತೆಯ ನಿವೇಶನ ನೀಡಲು ಸಂಪುಟದ ಅನುಮೋದನೆಯನ್ನು ಪಡೆದಿದ್ದಾರೆ.

ನೆನೆಗುದಿಗೆ ಬಿದ್ದಿದ್ದ ಕೆಆರ್‍ಎಸ್ ನಿಸರ್ಗ ಬಡಾ ವಣೆಯನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸಿ ಸುಂದರ ಉಪ ನಗರವನ್ನಾಗಿ ಮಾಡಬೇಕೆಂದು ವಸತಿ ಸಚಿವ ವಿ.ಸೋಮಣ್ಣ ಅವರನ್ನು ಒತ್ತಾಯಿ ಸಿರುವ ಜಿ.ಟಿ.ದೇವೇಗೌಡರು, ಈ ಸಮಸ್ಯೆ ಇತ್ಯರ್ಥ ವಾಗಲು ಕಾರಣಕರ್ತರಾದ ಮುಖ್ಯಮಂತ್ರಿ ಯಡಿ ಯೂರಪ್ಪ, ವಸತಿ ಸಚಿವ ಸೋಮಣ್ಣ, ಜಿಲ್ಲಾ ಉಸ್ತು ವಾರಿ ಸಚಿವ ಸೋಮಶೇಖರ್ ಹಾಗೂ ಸಂಪುಟದ ಎಲ್ಲಾ ಸಚಿವರಿಗೂ ಅಭಿನಂದನೆ ಸಲ್ಲಿಸಿದ್ದಾರೆ.

Translate »