ಮೈಸೂರು, ಸೆ.5(ಆರ್‍ಕೆಬಿ)-ಮಹಾನಾಯಕ ಡಾ.ಬಿ.ಆರ್. ಅಂಬೇಡ್ಕರ್ ಧಾರಾವಾಹಿ ಪ್ರಸಾರ ನಿಲ್ಲಿಸುವಂತೆ ಜಿûೀ ಕನ್ನಡ ವಾಹಿನಿಯ ರಾಘವೇಂದ್ರ ಹುಣಸೂರು ಅವರಿಗೆ ಬೆದರಿಕೆ ಕರೆ, ಮೊಬೈಲ್ ಸಂದೇಶ ಕಳುಹಿಸುತ್ತಿರುವ ವ್ಯಕ್ತಿಗಳು ಹಾಗೂ ಧಾರಾವಾಹಿಯ ಫ್ಲೆಕ್ಸ್‍ಗಳಿಗೆ ರಾಜ್ಯಾ ದ್ಯಂತ ಹಾನಿ ಮಾಡುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಕೆಪಿಸಿಸಿ ಸದಸ್ಯ ಎನ್.ಭಾಸ್ಕರ್ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಧಾರಾವಾಹಿಯು ಸಮಾಜದ ಎಲ್ಲಾ ಜನರಿಗೂ ಮೆಚ್ಚುಗೆಯಾಗಿದೆ. ಕೆಲ ವಿದ್ಯಾವಂತ ಯುವಕರು ತಮ್ಮ ಗ್ರಾಮಗಳಲ್ಲಿ ಮಹಾನಾಯಕ ಫ್ಲೆಕ್ಸ್ ಅಳವಡಿಸಿ ಅಭಿಮಾನ ಪ್ರದರ್ಶಿಸಿರುವುದನ್ನು ಸಹಿಸದ ಕೆಲ ತಿಳಿಗೇಡಿಗಳು ಫ್ಲೆಕ್ಸ್‍ಗಳಿಗೆ ಹಾನಿ ಮಾಡಿದ್ದಾರೆ. ಇದು ಖಂಡನೀಯ. ಸರ್ಕಾರ ಈ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
