ಹನೂರು: ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರದಲ್ಲಿ ದೀಪಾವಳಿ ಅಮಾವಾಸ್ಯೆ ಜಾತ್ರೆಯ ಪ್ರಯುಕ್ತ ಶ್ರೀ ಸ್ವಾಮಿಗೆ 101 ಬೇಡ ಗಂಪಣ ಹೆಣ್ಣು ಮಕ್ಕಳಿಂದ ಹಾಲರುವೆ ಸೇವೆ, ವಿಶೇಷ ಪೂಜೆಗಳು ಬಹಳ ವಿಜೃಂಭಣೆಯಿಂದ ಜರುಗಿದವು.
ಲಕ್ಷಾಂತರ ಭಕ್ತ ಸಮೂಹ ಶ್ರೀ ಕ್ಷೇತ್ರಕ್ಕೆ ಆಗಮಿಸಿ ತಮ್ಮ ಹರಕೆ ಪೂಜೆಗಳನ್ನು ನೆರವೇರಿಸಿ ಸ್ವಾಮಿಯ ಕೃಪೆಗೆ ಪಾತ್ರರಾದರು, ನೆರೆದಿದ್ದ ಭಕ್ತರಿಗೆ ಪ್ರಾಧಿಕಾರ ಮತಿಯಿಂದ ವಿಶೇಷ ದರ್ಶನ, ದಾಸೋಹ, ಶೌಚಾಲಯ, ನೆರಳು, ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಸಮರ್ಪಕವಾಗಿ ಒದಗಿಸಲಾಗಿತ್ತು.
ಈ ಸಂದರ್ಭ ಶ್ರೀ ಸಾಲೂರು ಮಠದ ಶ್ರೀ ಗುರುಸ್ವಾಮಿ ಗಳು, ಪ್ರಾಧಿಕಾರದ ಕಾರ್ಯದರ್ಶಿ ಕೆ.ಎಂ.ಗಾಯಿತ್ರಿ (ಕೆಎಎಸ್), ಉಪಕಾರ್ಯ ದರ್ಶಿ ರಾಜ ಶೇಖರ್ ಮೂರ್ತಿ, ಅಧೀಕ್ಷಕ ಬಸವ ರಾಜು.ಎಂ ಹಾಗೂ ಪ್ರಾಧಿಕಾರದ ಎಲ್ಲಾ ನೌಕರ ವರ್ಗದವರು ಹಾಗು ಅರ್ಚಕ ವೃಂದದವರು ಪಾಲ್ಗೊಂಡಿದ್ದರು.