ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ಆಹ್ವಾನಿತರಿಗೆ ಮಾತ್ರ ಪ್ರವೇಶ
ಚಾಮರಾಜನಗರ

ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ಆಹ್ವಾನಿತರಿಗೆ ಮಾತ್ರ ಪ್ರವೇಶ

November 8, 2018

ವಿರಾಜಪೇಟೆ:  ನ.10 ರಂದು ವಿರಾ ಜಪೇಟೆ ಮಿನಿವಿಧಾನ ಸೌಧ ತಾಲೂಕು ಕಛೇರಿ ಸಭಾಂಗಣ ದಲ್ಲಿ ಟಿಪ್ಪು ಜಯಂತಿ ಯನ್ನು ಆಚರಿಸಲಾ ಗುತ್ತಿದ್ದು, ಅಹ್ವಾನ ನೀಡಿದವರಿಗೆ ಮಾತ್ರ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ವಿರುವುದಾಗಿ ಉಪ ವಿಭಾಗಾಧಿಕಾರಿ ಜವ ರೇಗೌಡ ತಿಳಿಸಿದರು.

ಟಿಪ್ಪು ಜಯಂತಿ ಆಚರಣೆಯ ಪ್ರಯುಕ್ತ ಸ್ಥಳೀಯ ಪುರಭವನದಲ್ಲಿ ಕರೆದಿದ್ದ ಶಾಂತಿಸಭೆ ಯಲ್ಲಿ ಮಾತ ನಾಡಿದ ಅವರು, ಸರಕಾರದ ನಿಯ ಮದಂತೆ ಕಾರ್ಯಕ್ರಮ ಅಥವಾ ವಿರೋಧ ಹೇಳಿಕೆ ನೀಡು ವುದಾಗಲಿ, ಘೋಷಣೆ ಕೂಗುವು ದಾಗಲಿ, ಬ್ಯಾನರ್ ಹಾಕುವುದಾಗಲೀ ಮಾಡು ವಂತಿಲ್ಲ. ಖಾಸಗಿ ಯಾಗಿ ಯಾರು ಆಚರಿಸು ವಂತಿಲ್ಲ. ಇದು ಸರಕಾರದ ಕಾರ್ಯಕ್ರಮವಾಗಿರು ವುದರಿಂದ ಗಣ್ಯ ವ್ಯಕ್ತಿಗಳನ್ನು ಆಹ್ವಾನಿಸಿ ಆಚರಣೆ ಮಾಡಲಾಗುವುದು. ಆಚರಣೆ ಸಂದರ್ಭ ಶಾಂತಿ ಭಂಗ ಉಂಟು ಮಾಡಿದರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಭೆಯ ಪ್ರಾರಂಭದಲ್ಲಿ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಗಣೇಶ್ ನಂಜಪ್ಪ ಮಾತನಾಡಿ, ಕೊಡಗಿನಲ್ಲಿ ಟಿಪ್ಪು ಜಯಂತಿ ಆಚರಣೆ ಅವ ಶ್ಯವಿಲ್ಲ. ಟಿಪ್ಪು ಕೊಡಗಿನಲ್ಲಿ ನಡೆಸಿದ ಆಕ್ರಮಣದ ಸಂದರ್ಭ ಸಹಸ್ರಾರು ಕೊಡವರು ಹತ್ಯೆಯಾಗಿ ದ್ದಾರೆ. ಅದರಿಂದ ಟಿಪ್ಪು ಜಯಂತಿ ಕೊಡಗಿಗೆ ಅಗತ್ಯವಿಲ್ಲ ಎಂದರು. ಸಭೆಯಲ್ಲಿ ಉಪಸ್ಥಿತರಿದ್ದ ಎಜಾಸ್ ಮಾತನಾಡಿ, ನಾವುಗಳು ಟಿಪ್ಪುವಿನ ಪರ ಅಥವಾ ವಿರೋಧವು ಇಲ್ಲ. ಅಧಿಕಾರಿಗಳು ಆಚರಿಸುತ್ತಿರು ವುದರ ಬಗ್ಗೆ ನಮ್ಮ ಅಭ್ಯಂತರವು ಇಲ್ಲ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಡಿವೈಎಸ್‍ಪಿ ನಾಗಪ್ಪ ಮಾತನಾಡಿ, ಸರಕಾರದ ಆದೇಶದಂತೆ ತಾಲೂಕು ಆಡಳಿತ ಟಿಪ್ಪು ಜಯಂತಿಯನ್ನು ಆಚರಣೆ ಮಾಡು ತ್ತಿರುವುದಕ್ಕೆ ಎಲ್ಲರೂ ಸಹಕಾರ ನೀಡುವಂತಾಗ ಬೇಕು. ಕಾರ್ಯಕ್ರಮಕ್ಕೆ ಅಹ್ವಾನ ನೀಡಿದವರಿಗೆ ಮಾತ್ರ ಅವಕಾಶವಿರುತ್ತದೆ. ಆಚರಣೆ ಸಂದರ್ಭ ಘೋಷಣೆಗಳನ್ನು ಕೂಗುವುದು ಅಹಿತಕರ ಘಟನೆಗಳಿಗೆ ಅವಕಾಶ ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳ ಲಾಗುವುದು ಎಂದರು.

ವೇದಿಕೆಯಲ್ಲಿ ತಾಲೂಕು ತಹಶಿಲ್ದಾರ್ ಆರ್. ಗೋವಿಂದರಾಜು, ಗ್ರಾಮಾಂತರ ಠಾಣಾಧಿ ಕಾರಿ ಸುರೇಶ್ ಬೋಪಣ್ಣ ಉಪಸ್ಥಿತರಿದ್ದರು. ಸರ್ಕಲ್ ಇನ್ಸ್‍ಪ್ಯೆಕ್ಟರ್ ಕುಮಾರ್ ಆರಾಧ್ಯ ಸ್ವಾಗತಿಸಿ ದರೆ. ನಗರ ಠಾಣಾಧಿಕಾರಿ ಸಂತೋಷ್ ಕಶ್ಯಪ್ ವಂದಿ ಸಿದರು. ಸಭೆಯಲ್ಲಿ ಪಟ್ಟಣ ಪಂಚಾಯಿತಿಯ ನೂತನ ಸದಸ್ಯರುಗಳು, ಸಂಘ ಸಂಸ್ಥೆಗಳ ಸz Àಸ್ಯರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

Translate »