ಸೆ.27ರಂದು ಭಾರತ್ ಬಂದ್
ಮೈಸೂರು

ಸೆ.27ರಂದು ಭಾರತ್ ಬಂದ್

September 12, 2021

ಮೈಸೂರು,ಸೆ.11(ಪಿಎಂ)- ಕೇಂದ್ರ ಸರ್ಕಾರದ 3 ನೂತನ ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದು, ಅಗತ್ಯ ವಸ್ತುಗಳ ಬೆಲೆ ಇಳಿಕೆಗೆ ಆಗ್ರಹಿಸಿ ದೇಶದ 500ಕ್ಕೂ ಹೆಚ್ಚು ಸಂಘಟನೆಗಳು ರಾಷ್ಟ್ರೀಯ ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದಲ್ಲಿ ಸೆ.27 ರಂದು ಭಾರತ್ ಬಂದ್‍ಗೆ ಕರೆ ನೀಡಿದ್ದು, ಇದಕ್ಕೆ ಬೆಂಬಲ ಸೂಚಿಸಿ ರಾಜ್ಯದಲ್ಲೂ ಬಂದ್ ನಡೆಸಲಾಗುವುದು ಎಂದು ಕಿಸಾನ್ ಮೋರ್ಚಾ ಮುಖ್ಯಸ್ಥರೂ ಆದ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರು ಬೂರು ಶಾಂತಕುಮಾರ್ ತಿಳಿಸಿದರು.

ಮೈಸೂರಿನ ಜಲದರ್ಶಿನಿ ಅತಿಥಿಗೃಹದ ಸಭಾಂಗಣದಲ್ಲಿ ಶನಿವಾರ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಮೂರು ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ದೆಹಲಿಯಲ್ಲಿ ರೈತರು 10 ತಿಂಗಳಿಂದ ನಿರಂ ತರವಾಗಿ ಹೋರಾಟ ಮಾಡುತ್ತಿದ್ದಾರೆ. ನಾವು ಕೂಡ ಅದರಲ್ಲಿ ಭಾಗಿಯಾಗಿದ್ದು, ಕೇಂದ್ರ ಸರ್ಕಾರ ಈ ಸಂಬಂಧ 12 ಸಭೆ ಗಳನ್ನು ನಡೆಸಿ, ಜನವರಿಯಿಂದ ಈವರೆಗೆ ಮಾತುಕತೆ ನಡೆಸದೇ ನಿರ್ಲಕ್ಷ್ಯತನದಿಂದ ವರ್ತಿಸುತ್ತಿದೆ ಎಂದು ಕಿಡಿಕಾರಿದರು.

ಕೇಂದ್ರದ 3 ಕೃಷಿ ಕಾಯ್ದೆಗಳನ್ನು ಹಿಂಪಡೆ ಯಬೇಕು. ಎಲ್ಲಾ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಶಾಸನಬದ್ಧಗೊಳಿಸ ಬೇಕು. ವಿದ್ಯುತ್ ಖಾಸಗೀಕರಣ ಕೈಬಿಡ ಬೇಕು. ಜೊತೆಗೆ ಗ್ಯಾಸ್ ಸಿಲಿಂಡರ್, ಪೆಟ್ರೋಲ್, ಡೀಸೆಲ್, ರಸಗೊಬ್ಬರ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಇಳಿಸಬೇಕು ಎಂದು ಒತ್ತಾ ಯಿಸಿ `ಭಾರತ್ ಬಂದ್’ ನಡೆಸಲಾಗು ತ್ತಿದೆ. ರಾಜ್ಯದಲ್ಲಿ ಎಲ್ಲಾ ಜನಪರ ಮತ್ತು ರೈತಪರ ಸಂಘಟನೆಗಳು ಬಂದ್‍ಗೆ ಬೆಂಬಲ ನೀಡಬೇಕು. ಜೊತೆಗೆ ಆಡಳಿತ ವಿರೋ ಧದ ರಾಜಕೀಯ ಪಕ್ಷಗಳು ಕೊನೆ ಘಳಿಗೆ ಯಲ್ಲಿ ಕೇವಲ ನೆಪಮಾತ್ರಕ್ಕೆ ಬೆಂಬಲ ನೀಡದೇ ಈಗಲೇ ಬೆಂಬಲ ಸೂಚಿಸಿ, ಬಂದ್ ಯಶಸ್ವಿಗೊಳಿಸಲು ಸಹಕಾರ ನೀಡ ಬೇಕು ಎಂದು ಮನವಿ ಮಾಡಿದರು.

ಸೆ.15ರಿಂದ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಬಂದ್ ಆಚರಣೆಗೆ ಬೆಂಬಲ ನೀಡುವ ಕುರಿತು ಜಾಗೃತಿ ಮೂಡಿಸಲಿ ದ್ದೇವೆ. ಆ ಮೂಲಕ ಬಂದ್ ಸಂಪೂರ್ಣ ಯಶಸ್ವಿಗೊಳಿಸಲಿದ್ದೇವೆ. ಇಡೀ ದೇಶ ವನ್ನು ಖಾಸಗೀಕರಣಗೊಳಿಸುತ್ತಿದ್ದು, ಪ್ರಧಾನಿ ಮೋದಿಯವರು ದೇಶದ ಸಂಪತ್ತನ್ನು ಬಹು ರಾಷ್ಟ್ರೀಯ ಕಂಪನಿಗಳಿಗೆ ಮಾರಾಟ ಮಾಡಲು ಹೊರಟಿದ್ದಾರೆ. ಇದಕ್ಕೆ ತಡೆಯೊಡ್ಡಲು ಇಡೀ ದೇಶದ ಜನತೆ ಒಮ್ಮತದಿಂದ ಈ ಬಂದ್‍ಗೆ ಬೆಂಬಲ ನೀಡಬೇಕು ಎಂದು ಕೋರಿದರು.

ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಕಿಡಿ: ಆರ್‍ಎಸ್‍ಎಸ್‍ನ ಅಂಗಸಂಸ್ಥೆ ಭಾರತೀಯ ಕಿಸಾನ್ ಸಂಘವು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸೆ.8ರಂದು ದೇಶಾದ್ಯಂತ ಚಳವಳಿ ನಡೆಸಿದೆ. ದೆಹಲಿಯ ರೈತ ಹೋರಾಟಗಾರರನ್ನು ದಲ್ಲಾಳಿಗಳು, ಮಧ್ಯ ವರ್ತಿಗಳು ಎಂದು ಟೀಕಿಸಿದ್ದ ಕೇಂದ್ರ ಕೃಷಿ ಸಚಿವ ಶೋಭಾ ಕರಂದ್ಲಾಜೆ ಭಾರ ತೀಯ ಕಿಸಾನ್ ಸಂಘದ ಹೋರಾಟದ ಬಗ್ಗೆ ಏನು ಹೇಳುತ್ತಾರೆ? ಇವರಿಗೆ ಸಚಿವ ಸ್ಥಾನ ಸಿಕ್ಕಿರುವುದು ಮರುಭೂಮಿಯಲ್ಲಿ ಮಾಣಿಕ್ಯ ಸಿಕ್ಕಂತಾಗಿದೆ. ಕೃಷಿ ಕಾಯ್ದೆಗಳ ಬಗ್ಗೆ ಅರಿವಿಲ್ಲ ದಿದ್ದರೆ ರೈತ ಮುಖಂಡರ ಜೊತೆ ಸಂವಾದ ನಡೆಸಿ ತಿಳಿದುಕೊಳ್ಳಲಿ ಎಂದು ಕಿಡಿಕಾರಿದರು.

ಸೆ.24ರಂದು ಸಭೆ: ರಾಜ್ಯದ ಎಲ್ಲಾ ರಾಷ್ಟ್ರೀಕೃತ ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು ರೈತರಿಗೆ ಸಾಲ ನೀಡುವಲ್ಲಿ ಕಿರುಕುಳ ನೀಡುತ್ತಿವೆ. 2 ಲಕ್ಷ ರೂ.ವರೆಗೆ ಸಾಲ ಪಡೆಯಲು ಉಪನೋಂದಣಿ ಕಚೇರಿ ಯಲ್ಲಿ ಅಡಮಾನ ನೋಂದಣಿ ಮಾಡ ಬೇಕಾದ ಅಗತ್ಯವಿಲ್ಲ ಎಂದು ಆರ್‍ಬಿಐ ಮಾರ್ಗಸೂಚಿ ಇದೆ. ಆದರೂ 50 ಸಾವಿರ ರೂ.ಗೂ ಅಧಿಕ ಸಾಲ ಪಡೆ ಯುವವರು ಈ ರೀತಿಯ ನೋಂದಣಿ ಮಾಡಿಸಬೇಕೆಂದು ಬ್ಯಾಂಕ್‍ನವರು ರೈತರನ್ನು ಅಲೆದಾಡಿಸುತ್ತಿದ್ದಾರೆ. ಈ ರೀತಿಯ ಎಲ್ಲಾ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸೆ.24ರಂದು ಡಿಸಿ ಅಧ್ಯಕ್ಷತೆಯಲ್ಲಿ ಎಲ್ಲಾ ಬ್ಯಾಂಕ್‍ಗಳ ಮುಖ್ಯಸ್ಥರು ಮತ್ತು ರೈತ ಪ್ರತಿನಿಧಿಗಳ ಸಭೆ ಕರೆಯುವುದಾಗಿ ಮಾರ್ಗ ದರ್ಶಿ (ಲೀಡ್ ಬ್ಯಾಂಕ್) ಬ್ಯಾಂಕ್ ಮುಖ್ಯಸ್ಥರು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು. ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಳ್ಳಿ ದೇವರಾಜ್, ಜಿಲ್ಲಾ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್, ಪ್ರಧಾನ ಕಾರ್ಯದರ್ಶಿ ಕಿರಗಸೂರು ಶಂಕರ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

Translate »