ವಿವೇಕಾನಂದರ ಚಿಕಾಗೋ ಭಾಷಣ ಎಂದೆಂದಿಗೂ ಪ್ರಸ್ತುತ
ಮೈಸೂರು

ವಿವೇಕಾನಂದರ ಚಿಕಾಗೋ ಭಾಷಣ ಎಂದೆಂದಿಗೂ ಪ್ರಸ್ತುತ

September 12, 2021

ಮೈಸೂರು, ಸೆ.11(ಎಸ್‍ಬಿಡಿ)- ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣ ಎಂದಿಗೂ ಪ್ರಸ್ತುತ ಎಂದು ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಹೇಳಿದರು.

ಅಮೆರಿಕಾದ ಚಿಕಾಗೋ ನಗರದಲ್ಲಿ ನಡೆದ `ವಿಶ್ವ ಧರ್ಮ ಸಂಸತ್’(1893ರ ಸೆ.11)ನಲ್ಲಿ ಸ್ವಾಮಿ ವಿವೇಕಾನಂದರು ಐತಿಹಾಸಿಕ ಭಾಷಣ ಮಾಡಿ ಇಂದಿಗೆ 128 ವರ್ಷ. ಈ ಹಿನ್ನೆಲೆ ಯಲ್ಲಿ ಪ್ರಜ್ಞಾವಂತ ನಾಗರಿಕರ ವೇದಿಕೆ ವತಿಯಿಂದ ಮಂಡಿ ಮೊಹಲ್ಲಾದ ವೆಂಕಟ ರಮಣಸ್ವಾಮಿ ದೇವಾಲಯದಲ್ಲಿ ಆಯೋ ಜಿಸಿದ್ದ `ವಿವೇಕ ವಾಣಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣದ ವರ್ಷಾಚರಣೆ ಮೂಲಕ ಮಹ ನೀಯರ ಸ್ಮರಿಸಲಾಗುತ್ತಿದೆ. ಇದು ವಿವೇಕಾ ನಂದರ ಶ್ರೇಷ್ಠ ವ್ಯಕ್ತಿತ್ವದ ದ್ಯೋತಕವಾಗಿದೆ. ವಿಶ್ವ ಧರ್ಮ ಸಂಸತ್‍ನಲ್ಲಿ ಭಾಷಣದ ಮೂಲಕ ಭಾರತದ ಘನತೆಯನ್ನು ಮೇಳೈಸಿದ್ದಾರೆ. ಇದು ಯುವ ಸಮುದಾಯಕ್ಕೆ ದಿಕ್ಸೂಚಿ ಯಾಗಿದೆ. ಯುವಕರಿಗೆ ದಿಕ್ಸೂಚಿಯಾಗಿದೆ. ಸೂರ್ಯನ ಕಿರಣ ಸ್ಪರ್ಶಿಸಿದ್ದೆಲ್ಲಾ ಶುಭ್ರ ವಾಗಿ ಗೋಚರಿಸುವಂತೆ, ವಿವೇಕಾನಂದರ ಸ್ಮರಿಸಿದರೆ ಮನಃಶುದ್ಧಿಯಾಗುತ್ತದೆ ಎಂದರು.

ಬದುಕನ್ನು ಅರ್ಥೈಸಿಕೊಂಡು, ಅಗಾಧ ವಾಗಿ ಪ್ರೀತಿಸಬೇಕು. ಕಷ್ಟ ಬಂದಾಗ ಕುಗ್ಗದೆ ಆತ್ಮಸ್ಥೈರ್ಯದಿಂದ ಪರಿಹಾರಕ್ಕೆ ಪ್ರಯತ್ನಿ ಸಬೇಕು. ನೋವಿನ ಕ್ಷಣಗಳು ಕರಗುತ್ತವೆ ಎಂಬ ಆಶಾಭಾವನೆಯೊಂದಿಗೆ ದೃಢ ಸಂಕಲ್ಪದಿಂದ ಮುನ್ನಡೆಯಬೇಕು. ಉತ್ತಮ ಹಾದಿಯಲ್ಲಿ ನಡೆದು ನಮ್ಮ ಬದುಕು ರೂಪಿಸಿಕೊಳ್ಳುವುದರ ಜೊತೆಗೆ ಮಾನವೀ ಯತೆ ಮರೆಯದೆ ಸಾಮಾಜಿಕ ಕಾರ್ಯ ಗಳಲ್ಲೂ ತೊಡಗಿಸಿಕೊಳ್ಳಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕರಾದ ಗಿರೀಶ್, ಬಿಜೆಪಿ ಚಾಮರಾಜ ಕ್ಷೇತ್ರದ ಅಧ್ಯಕ್ಷ ಸೋಮ ಶೇಖರ್, ಬಿಜೆಪಿ ಹಿಂದುಳಿದ ಮೋರ್ಚಾ ನಗರಾಧ್ಯಕ್ಷ ಜೋಗಿ ಮಂಜು, ಬಿಜೆಪಿ ಮುಖಂಡರಾದ ವಿಕ್ರಂ ಅಯ್ಯಂಗಾರ್, ಕುಮಾರ್ ಗೌಡ, ಜಯರಾಂ, ಸದಾಶಿವ, ಸೂರಜ್, ರವಿಕುಮಾರ್, ಜಾಕಿ ಸೇರಿ ದಂತೆ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Translate »