ಮೈಸೂರಲ್ಲಿ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನ ಆಚರಣೆ: ಕರ್ತವ್ಯದ ವೇಳೆ ಹುತಾತ್ಮರಾದ ಹಸಿರು ಯೋಧರ ಸ್ಮರಣೆ
ಮೈಸೂರು

ಮೈಸೂರಲ್ಲಿ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನ ಆಚರಣೆ: ಕರ್ತವ್ಯದ ವೇಳೆ ಹುತಾತ್ಮರಾದ ಹಸಿರು ಯೋಧರ ಸ್ಮರಣೆ

September 12, 2021

ಮೈಸೂರು, ಸೆ.11(ಎಂಟಿವೈ)- ಮೈಸೂರಿನ ಅಶೋಕಪುರಂನಲ್ಲಿರುವ ಅರಣ್ಯ ಭವನದ ಆವ ರಣದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಅರಣ್ಯ ಹುತಾ ತ್ಮರ ದಿನಾಚರಣೆಯಲ್ಲಿ ರಾಜ್ಯದ ವಿವಿಧೆಡೆ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಹುತಾತ್ಮರಾದ ಹಸಿರು ಯೋಧ ರಿಗೆ ಗೌರವ ಸಮರ್ಪಿಸಲಾಯಿತು.
ಅರಣ್ಯ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಹುತಾತ್ಮರ ಸ್ಮಾರಕಕ್ಕೆ ಹೂಗುಚ್ಛ ಸಮರ್ಪಿಸುವ ಮೂಲಕ ಹುತಾತ್ಮರಾದ ಅರಣ್ಯ ಇಲಾಖೆ ಸಿಬ್ಬಂದಿಗೆ ಗೌರವ ನಮನ ಅರ್ಪಿಸಿದರು.

ಬಳಿಕ ಎಸ್ಪಿ ಆರ್.ಚೇತನ್ ಮಾತನಾಡಿ, ಅರಣ್ಯ ಸಂಪತ್ತಿನ ಸಂರಕ್ಷಣೆಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳ ಪಾತ್ರ ಪ್ರಮುಖ. ವನ್ಯ ಸಂಪತ್ತಿನ ಸಂರ ಕ್ಷಣೆ ಮಹತ್ವದ್ದಾಗಿದೆ. ದಿನದ 24 ಗಂಟೆಯೂ ಸೇವೆ ಸಲ್ಲಿಸುವ ಮೂಲಕ ತಮ್ಮನ್ನು ತಾವೇ ಸಮರ್ಪಿಸಿ ಕೊಂಡಿದ್ದಾರೆ. ಕಳೆದ ಮೂರ್ನಾಲ್ಕು ವರ್ಷದಿಂದ ಅರಣ್ಯ ಇಲಾಖೆಯ ಸಿಬ್ಬಂದಿಗಳ ಸಾವಿನ ಪ್ರಕರಣ ಹೆಚ್ಚಾಗಿ ರುವುದು ವಿಷಾದನೀಯ. ವನ್ಯ ಸಂಪತ್ತಿನ ಸಂರಕ್ಷಣೆ ಕೇವಲ ಅರಣ್ಯ ಇಲಾಖೆಗೆ ಮಾತ್ರ ಸೀಮಿತವಾಗಿಲ್ಲ. ಸಾರ್ವ ಜನಿಕರೂ ಅರಣ್ಯ ಇಲಾಖೆಯೊಂದಿಗೆ ಕೈಜೋಡಿಸ ಬೇಕು. ಅರಣ್ಯ ಸಂಪತ್ತಿನ ರಕ್ಷಣೆಗೆ ನೀಡುವ ಆದ್ಯತೆ ಯಂತೆ ಅರಣ್ಯ ಇಲಾಖೆಯ ಸಿಬ್ಬಂದಿಗಳ ಜೀವ ರಕ್ಷಣೆಗೂ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಡಿಸಿಎಫ್ ಕೆ.ಕಮಲಾ ಕರಿ ಕಾಳನ್ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನ ಹಿನ್ನೆಲೆ ಕುರಿತಂತೆ ಮಾತನಾಡಿ, ಕರ್ತವ್ಯದ ವೇಳೆ ಹುತಾತ್ಮ ರಾದ ಅರಣ್ಯ ಸಿಬ್ಬಂದಿಯ ಸ್ಮರಣೆಗಾಗಿ ಹುತಾತ್ಮರ ದಿನ ಆಚರಿಸಲಾಗುತ್ತದೆ. 1730ರ ಸೆ.11ರಂದು ಜೋಧಪುರ ಮಹಾರಾಜ ಅಭಯಸಿಂಗ್‍ನ ಸೈನಿಕರು ಕೇಜರ್ಲಿ ಪ್ರಾಂತ್ಯದಲ್ಲಿ ಬೆಳೆದಿದ್ದ ಮರಗಳನ್ನು ಹೊಸ ಅರಮನೆ ನಿರ್ಮಾಣಕ್ಕಾಗಿ ಹನನ ಮಾಡಲು ಮುಂದಾ ಗಿದ್ದನ್ನು ತಡೆದು ಪ್ರತಿಭಟಿಸಿದ ಬಿಷ್ಣೋಯಿ ಸಮು ದಾಯದ ಮಹಿಳೆಯರು, ಮಕ್ಕಳು ಸೇರಿದಂತೆ 363 ಮಂದಿಯನ್ನು ಕೊಲ್ಲಲಾಯಿತು. ಮರಗಳ ಹನನ ತಡೆಗೆ ಬಿಷ್ಣೋಯಿಗಳ ತ್ಯಾಗ, ಬಲಿದಾನದ ಸ್ಮರ ಣಾರ್ಥ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನವನ್ನು ಆಚರಿಸಲಾಗುತ್ತಿದೆ ಎಂದರು.

ಹುತಾತ್ಮರ ಹೆಸರು ವಾಚನ: ಇದೇ ವೇಳೆ 1966 ರಿಂದ 2021ರವರೆಗೆ ರಾಜ್ಯದ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾಗಲೇ ಹುತಾತ್ಮರಾದ ಡಿಸಿಎಫ್, ಸಿಎಫ್, ಎಸಿಎಫ್, ಆರ್‍ಎಫ್‍ಓ, ಡಿಆರ್‍ಎಫ್, ಅರಣ್ಯ ವೀಕ್ಷಕರು, ಗಾರ್ಡ್, ಚಾಲಕ, ಗುತ್ತಿಗೆ ನೌಕರರು, ಕ್ಷೇಮಾಭಿವೃದ್ಧಿ ನೌಕರರ ಹೆಸರನ್ನು ವಾಚಿಸಲಾಯಿತು.

ಗಾಳಿಯಲ್ಲಿ ಗುಂಡು: ಹುತಾತ್ಮರ ದಿನದ ಅಂಗ ವಾಗಿ ನಗರ ಸಶಸ್ತ್ರ ಮೀಸಲು ಒಂದು ತುಕಡಿ ವತಿ ಯಿಂದ ಗಾಳಿಯಲ್ಲಿ ಗುಂಡು ಹಾರಿಸಿ ಗೌರವಿಸ ಲಾಯಿತು. ಇದೇ ವೇಳೆ ಪೊಲೀಸ್ ಬ್ಯಾಂಡ್ ತುಕಡಿ ವತಿಯಿಂದ ರಾಷ್ಟ್ರಗೀತೆಯನ್ನು ನುಡಿಸಲಾಯಿತು. ಹಿರಿಯ ಅಧಿಕಾರಿಗಳು ಹುತಾತ್ಮರ ಸ್ಮಾರಕಕ್ಕೆ ಹೂಗುಚ್ಛ ಸಮರ್ಪಿಸಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಎಪಿಸಿಸಿಎಫ್ ಜಗತ್‍ರಾಮ್, ಸಿಸಿಎಫ್ ಹೀರಾಲಾಲ್, ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಎಂ.ಕುಲಕರ್ಣಿ, ಡಿಸಿಎಫ್‍ಗಳಾದ ಕೆ.ಕಮಲಾ ಕರಿ ಕಾಳನ್, ದೀಪಾ ಜೆ.ಕಂಟ್ರಾಕ್ಟರ್, ಪಿ.ಶ್ರೀಧರ್, ಡಾ.ವಿ. ಕರಿಕಾಳನ್, ಪಿ.ಶ್ರೀಧರ್, ಎಸ್.ಆರ್.ಪ್ರಸನ್ನಕುಮಾರ್, ಎಂ.ರಾಮಕೃಷ್ಣಪ್ಪ ಸೇರಿದಂತೆ ಇನ್ನಿತರರು ಉಪ ಸ್ಥಿತರಿದ್ದು, ಗೌರವ ಸಮರ್ಪಿಸಿದರು.

Translate »