`ಭಾರತ್ ಜೋಡೋ’ ಯಾತ್ರೆ ಆರಂಭ
News

`ಭಾರತ್ ಜೋಡೋ’ ಯಾತ್ರೆ ಆರಂಭ

September 8, 2022

ಚೆನ್ನೈ, ಸೆ.7-2024ರ ಸಾರ್ವತ್ರಿಕ ಚುನಾವಣೆ ಯನ್ನು ಗಮನದಲ್ಲಿಟ್ಟು ಕೊಂಡು ಕಾಂಗ್ರೆಸ್‍ನ ರಾಹುಲ್ ಗಾಂಧಿ ಅವರು ಪಕ್ಷದ ಬೃಹತ್ ಜನ ಸಂಪರ್ಕ ಕಾರ್ಯಕ್ರಮ ‘ಭಾರತ್ ಜೋಡೋ ಯಾತ್ರೆ’ಗೆ ಇಂದು ಕನ್ಯಾಕುಮಾರಿಯಿಂದ ಚಾಲನೆ ನೀಡಿದರು. 150 ದಿನಗಳಲ್ಲಿ 3,500 ಕಿ.ಮೀ ದೂರ ಪಾದಯಾತ್ರೆ ಸಾಗಲಿದೆ. ಮೇ 21, 1991 ರಂದು ಆತ್ಮಾಹುತಿ ದಾಳಿಯಲ್ಲಿ ಸಾವನ್ನಪ್ಪಿದ, ತಮಿಳು ನಾಡಿನ ಶ್ರೀಪೆರಂಬದೂರಿನಲ್ಲಿರುವ ತಮ್ಮ ತಂದೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಸ್ಮಾರಕಕ್ಕೆ ಭೇಟಿ ನೀಡುವ ಮೂಲಕ ರಾಹುಲ್ ಗಾಂಧಿ ತಮ್ಮ ದಿನವನ್ನು ಪ್ರಾರಂಭಿ ಸಿದರು. ತಮ್ಮ ತಂದೆಯ ಸ್ಮಾರಕಕ್ಕೆ ಭೇಟಿ ನೀಡಿದ ನಂತರ ಟ್ವೀಟ್ ಮಾಡಿದ ರಾಹುಲ್ ಗಾಂಧಿ, ದ್ವೇಷ ಮತ್ತು ವಿಭಜನೆಯ ರಾಜ ಕೀಯದಿಂದ ನಾನು ನನ್ನ ತಂದೆಯನ್ನು ಕಳೆದುಕೊಂಡೆ. ಆದರೆ ಇದಕ್ಕಾಗಿ ನಾನು ನನ್ನ ಪ್ರೀತಿಯ ದೇಶವನ್ನು ಕಳೆದುಕೊಳ್ಳು ವುದಿಲ್ಲ. ಪ್ರೀತಿ ದ್ವೇಷವನ್ನು ಜಯಿಸುತ್ತದೆ, ಭರವಸೆಯು ಭಯವನ್ನು ಸೋಲಿಸುತ್ತದೆ, ನಾವು ಒಟ್ಟಾಗಿ ಜಯಿ ಸುತ್ತೇವೆ ಎಂದು ಹೇಳಿದರು. ಬಿಜೆಪಿ ಆಡಳಿತದ ಅಡಿಯಲ್ಲಿ ಸಾಮಾಜಿಕ ಧ್ರುವೀಕರಣ ಮತ್ತು ರಾಜ ಕೀಯ ಕೇಂದ್ರೀಕರಣವನ್ನು ಆರೋಪಿಸಿದ ರಾಹುಲ್ ಗಾಂಧಿ, ‘ಭಾರತ್ ಜೋಡೋ ಯಾತ್ರೆ’ ದೇಶವನ್ನು ಒಗ್ಗೂಡಿಸಲು ತನಗೆ ತಪಸ್ಸು ಇದ್ದಂತೆ ಎಂದು ಈ ಹಿಂದೆ ಹೇಳಿದ್ದರು. 2024ರ ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ಬೃಹತ್ ಸಾಮೂಹಿಕ ಸಂಪರ್ಕ ಕಾರ್ಯಕ್ರಮವಾಗಿ ಕಾಂಗ್ರೆಸ್ ಪಾದಯಾತ್ರೆಯನ್ನು ಯೋಜಿಸಿದೆ. ಆದಾಗ್ಯೂ, ಕಾಂಗ್ರೆಸ್ ನಾಯಕರು ಯಾವುದೇ ರಾಜಕೀಯ ದೃಷ್ಟಿಕೋನವನ್ನು ನಿರಾಕರಿಸಿದರು. ಮತ್ತು ಯಾತ್ರೆಯು ದೇಶವನ್ನು ಒಂದುಗೂಡಿಸುವ ಉದ್ದೇಶವನ್ನು ಹೊಂದಿದೆ ಎಂದು ಹೇಳಿದ್ದಾರೆ.

ಸಂಜೆ ಕನ್ಯಾಕುಮಾರಿಯ ಮಹಾತ್ಮಗಾಂಧಿ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಹುಲ್ ಗಾಂಧಿಗೆ, ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಯಾತ್ರೆಯ ಉದ್ಘಾಟನೆಯಲ್ಲಿ ರಾಷ್ಟ್ರಧ್ವಜವನ್ನು ಹಸ್ತಾಂತರಿಸಿದರು. 3,500 ಕಿಲೋಮೀಟರ್ ಉದ್ದದ ಯಾತ್ರೆಯನ್ನು ಕಾಂಗ್ರೆಸ್ ಕಳೆದ ಶತಮಾನದಲ್ಲಿ ಆಯೋಜಿಸಿದ ಅತಿ ಉದ್ದದ ಪಾದಯಾತ್ರೆ ಎಂದು ಹೆಸರಿಸಿದೆ. ಗುರುವಾರ ಬೆಳಗ್ಗೆ ಪಾದಯಾತ್ರೆಯೊಂದಿಗೆ ಭಾರತ್ ಜೋಡೋ ಯಾತ್ರೆ ಆರಂಭವಾಗಲಿದೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ಪ್ರತಿದಿನ ಬೆಳಿಗ್ಗೆ 7 ರಿಂದ ಸಂಜೆ 6.30 ರವರೆಗೆ ಎರಡು ಬ್ಯಾಚ್‍ಗಳಲ್ಲಿ ಪಾದಯಾತ್ರೆ ಮಾಡಲಿದ್ದಾರೆ. ಮುಂದಿನ 150 ದಿನಗಳಲ್ಲಿ 12 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ಭಾರತ್ ಜೋಡೋ ಯಾತ್ರೆ ಸಾಗಲಿದೆ. ರಾಹುಲ್ ಗಾಂಧಿಯವರು ಕನ್ಯಾಕುಮಾರಿಯಿಂದ ಯಾತ್ರೆ ಕೊನೆಯಾಗುವ ಕಾಶ್ಮೀರದವರೆಗೆ ನಡೆಯಲಿದ್ದಾರೆ. ಹಾಸಿಗೆ, ಶೌಚಾಲಯ ಮತ್ತು ಏರ್ ಕಂಡಿಷನರ್ ಇರುವ ಕಂಟೇನರ್‍ನಲ್ಲಿ ರಾಹುಲ್ ತಂಗುವರು. ಇತರ ಭಾರತ್ ಯಾತ್ರಿಗಳಿಗೂ ಕಂಟೈನರ್‍ಗಳನ್ನು ಸ್ಥಾಪಿಸಲಾಗಿದ್ದು, ಅವರು ರಾಹುಲ್ ಗಾಂಧಿಯವರೊಂದಿಗೆ ಸಂಪೂರ್ಣ ಮಾರ್ಗದಲ್ಲಿ ನಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

`ಭಾರತ್ ಜೋಡೋ ಯಾತ್ರೆ’ ಉದ್ಘಾಟನೆಗೆ ಕನ್ಯಾಕುಮಾರಿಯಲ್ಲಿರುವ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ರಾಹುಲ್ ಗಾಂಧಿ ಮತ್ತೆ ಪಕ್ಷದ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳುವುದರ ಪರವಾಗಿದ್ದಾರೆ. ಇದರಿಂದ ಪಕ್ಷ ಸದೃಢವಾಗುತ್ತದೆ ಎಂದರು. ಹಣದುಬ್ಬರ, ಬೆಲೆ ಏರಿಕೆ ಮತ್ತು ನಿರುದ್ಯೋಗ ಸೇರಿದಂತೆ ವಿವಿಧ ವಿಷಯಗಳ ಕುರಿತು ಸಾಮಾನ್ಯ ಜನರೊಂದಿಗೆ ಸಂಪರ್ಕ ಸಾಧಿಸಲು ಈ ಯಾತ್ರೆಯು ಪಕ್ಷದ ಅತಿದೊಡ್ಡ `ಜನ ಸಂಪರ್ಕ ಕಾರ್ಯಕ್ರಮ’ ಎಂದು ಕಾಂಗ್ರೆಸ್ ಹೇಳುತ್ತದೆ. ಪಕ್ಷದ ಸಂಸದ ಜೈರಾಮ್ ರಮೇಶ್ ಅವರು ಯಾತ್ರೆಯು `ಭಾರತೀಯ ರಾಜಕೀಯಕ್ಕೆ ಪರಿವರ್ತನೆಯ ಕ್ಷಣವಾಗಿದೆ ಮತ್ತು ಪಕ್ಷದ ಪುನಶ್ಚೇತನಕ್ಕೆ ಇದು ನಿರ್ಣಾಯಕ ಕ್ಷಣವಾಗಿದೆ’ ಎಂದು ಹೇಳಿದರು.

Translate »