ಒಕ್ಕಲಿಗ ಸಮುದಾಯದ ಸಾಧಕರ ಜೀವನಚರಿತ್ರೆ  ಯುವಕರಿಗೆ ಪರಿಚಯಿಸುವ ಅವಶ್ಯವಿದೆ
ಮೈಸೂರು

ಒಕ್ಕಲಿಗ ಸಮುದಾಯದ ಸಾಧಕರ ಜೀವನಚರಿತ್ರೆ ಯುವಕರಿಗೆ ಪರಿಚಯಿಸುವ ಅವಶ್ಯವಿದೆ

February 16, 2023

ಮೈಸೂರು, ಫೆ.15(ಎಸ್‍ಪಿಎನ್)- ನಮ್ಮ ಯುವಕರಿಗೆ ಸಮುದಾಯದಲ್ಲಿ ಹುಟ್ಟಿ ಬೆಳೆದು ಬೇರೆ ಕ್ಷೇತ್ರದಲ್ಲಿ ಗುರುತಿಸಿ ಕೊಂಡಿರುವ ಸಾಧಕರ ಜೀವನ ಚರಿತ್ರೆ ಪರಿಚಯಿಸುವ ಹೊಣೆ ಸಂಘ-ಸಂಸ್ಥೆಗಳ ಮೇಲಿದೆ ಎಂದು ಹಿರಿಯ ವಕೀಲ ಅಪ್ಪಾಜಿಗೌಡ ಅಭಿಪ್ರಾಯಪಟ್ಟರು.

ಮೈಸೂರು ಜಯನಗರದ ಹೊಸ ನ್ಯಾಯಾಲಯದ ಸಂಕೀರ್ಣದ ಎದುರು ನೇಗಿಲಯೋಗಿ ಮರುಳೇಶ್ವರ ಸೇವಾ ಭವನದಲ್ಲಿ ಕೆಂಗಲ್ ಹನುಮಂತಯ್ಯ ರೈಲ್ವೆ ಒಕ್ಕಲಿಗ ನೌಕರರ ಕ್ಷೇಮಾಭಿವೃದ್ಧಿ ಸಂಘ, ಮರುಳೇಶ್ವರ ಧರ್ಮದರ್ಶಿ ಟ್ರಸ್ಟ್, ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಹಾಗೂ ಇತರೆ ಸಂಘ – ಸಂಸ್ಥೆಗಳೊಂದಿಗೆ ಕೆಂಗಲ್ ಹನುಮಂತಯ್ಯರವರ ಜಯಂತಿ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮ ದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.

ಕೆಂಗಲ್ ಹನುಮಂತಯ್ಯನವರು ಸ್ವತಂತ್ರ ಭಾರತದ ಪ್ರಮುಖ ರಾಜಕೀಯ ಮುತ್ಸದ್ದಿಯೂ ಧೀಮಂತ ರಾಜಕಾರಣಿ ಕೂಡ ಹೌದು. ರಾಮನಗರ ತಾಲೂಕಿನ ಲಕ್ಕಪ್ಪನಪಳ್ಳಿಯಲ್ಲಿ 1908ರಲ್ಲಿ ಜನಿಸಿದರು. 1930 ರಲ್ಲಿ ಮೈಸೂರು ಮಹಾರಾಜ ಕಾಲೇಜಿನ ಕಲಾ ವಿಭಾಗದಲ್ಲಿ ಪದವಿ ಯನ್ನು ಪಡೆದು, ನಂತರ ಪೂನಾ ಕಾನೂನು ಕಾಲೇಜಿನಿಂದ ಎಲ್‍ಎಲ್‍ಬಿ ಯನ್ನು ಮುಗಿಸಿದ ನಂತರ ವಕೀಲ ವೃತ್ತಿ ಆರಂಭಿಸಿ, ಮುಂದೆ ಕರ್ನಾಟಕ ರಾಜ ಕಾರಣದಲ್ಲಿ ಗುರುತಿಸಿಕೊಂಡು ಹಲವು ಹೋರಾಟಗಳಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿಸಿದರು. ನಂತರ ಮಹಾತ್ಮ ಗಾಂಧಿ ಅವರಿಂದ ಪ್ರಭಾವಿತರಾಗಿ ಸ್ವಾತಂತ್ರ್ಯ ಹೋರಾಟಕ್ಕಿಳಿದು ಅದಮ್ಯ ಶಕ್ತಿ ಬೆಳೆ ಸಿಕೊಂಡಿದ್ದರು. ಕೆಂಗಲ್ ಹನುಮಂತಯ್ಯ ನವರು ಮುಖ್ಯಮಂತ್ರಿ ಪದವಿಯಿಂದ ಕೆಳಗಿಳಿದು ಎಷ್ಟೋ ವರ್ಷಗಳ ನಂತ ರವೂ ಅವರ ಸಾಧನೆ ಸ್ಮರಿಸುತ್ತಿರುವುದು ಉತ್ತಮ ಸಂಗತಿ ಎಂದರು.

ಒಕ್ಕಲಿಗ ಸಮುದಾಯ ವ್ಯವಸಾಯ ದಲ್ಲಿ ತೊಡಗಿರುವ ಸಮುದಾಯ. ಈ ಸಮುದಾಯದ ಜನರಿಗೆ ಬಡತನವಿದ್ದರೂ ಇನ್ನೊಬ್ಬರ ಬಳಿ ಬೇಡಿ ಹಸಿವು ನೀಗಿಸಿ ಕೊಳ್ಳುವವರಲ್ಲ. ಬದಲಾಗಿ ಅವರೆಲ್ಲಾ ದುಡಿದು ಹಸಿವು ನೀಗಿಸಿಕೊಳ್ಳುವ ಸ್ವಾಭಿ ಮಾನ ರೂಪಿಸಿಕೊಂಡಿರುವುದು ಹೆಮ್ಮೆಯ ಸಂಗತಿ. ಆದರೆ, ಇತ್ತೀಚಿನ ದಿನಗಳಲ್ಲಿ ಒಕ್ಕಲಿಗ ಸಮುದಾಯದ ಅಸ್ಮಿತೆಯಾಗಿ `ಗೌಡ’ ಪದವನ್ನು ತಮ್ಮ ಹೆಸರಿನ ಮುಂದೆ ಇಟ್ಟುಕೊಳ್ಳಲು ಯುವಕರು ಅಂಜಿಕೆ ಪಟ್ಟುಕೊಳ್ಳುತ್ತಾರೆ. ಇದು ಸಲ್ಲದು ಎಂದು ಕಿವಿಮಾತು ಹೇಳಿದರು. ಈ ವೇಳೆ ಹಿರಿಯ ಪತ್ರಕರ್ತ ಸಿ.ಕೆ.ಮಹೇಂದ್ರ, ಇಎಸ್‍ಐ ಆಸ್ಪತ್ರೆಯ ಮೂಳೆ ಹಾಗೂ ಕೀಲು ರೋಗ ತಜ್ಞ ದೇಶ ಲಿಂಗೇಗೌಡ, ಹಿರಿಯ ವಕೀಲ ಅಪ್ಪಾಜಿಗೌಡ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಕೆಂಗಲ್ ಹನುಮಂತಯ್ಯ, ರೈಲ್ವೆ ಒಕ್ಕಲಿಗ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಂ.ಬಿ.ಮಂಜೇಗೌಡ, ಶ್ರೀ ಮರುಳೇಶ್ವರ ಧರ್ಮದರ್ಶಿ ಪ್ರೊ. ಆರ್.ರಂಗಯ್ಯ, ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ರವಿ ಕುಮಾರ್, ಮುಂದಾಳು ಡ್ರಾವಿಡ ಕನ್ನಡಿ ಗರ ಬಳಗದ ಅಭಿಗೌಡ, ಪ್ರೊ. ಭೀಮ ರಾಜು, ಈರೇಗೌಡ, ಮಂಜುಲಾ ಭದ್ರೇ ಗೌಡ, ಆನಂದ, ಸುರೇಶ್, ಪ್ರವೀಣ್, ತ್ರಿಮೂರ್ತಿ ಸೇರಿದಂತೆ ಇತರರಿದ್ದರು.

Translate »