ಬಿಟ್ ಕಾಯಿನ್ `ಭೂತ’ ಚೇಷ್ಟೆ: ವರಿಷ್ಠರಿಂದ ತುರ್ತು ಬುಲಾವ್ ಶೆಟ್ಟರ್ ದಿಢೀರ್ ದೆಹಲಿಗೆ
ಮೈಸೂರು

ಬಿಟ್ ಕಾಯಿನ್ `ಭೂತ’ ಚೇಷ್ಟೆ: ವರಿಷ್ಠರಿಂದ ತುರ್ತು ಬುಲಾವ್ ಶೆಟ್ಟರ್ ದಿಢೀರ್ ದೆಹಲಿಗೆ

November 13, 2021

ರಾಜ್ಯ ಬಿಜೆಪಿಯಲ್ಲಿ ಗುಸು ಗುಸು ಚರ್ಚೆ

ಮುಖ್ಯಮಂತ್ರಿ ಬೆಂಗಳೂರಿಗೆ ಬರುತ್ತಿದ್ದಂತೆ ಮಾಜಿ ಸಿಎಂ ದೆಹಲಿ ಯಾತ್ರೆ; ಭಾರೀ ಚರ್ಚೆಗೆ ಗ್ರಾಸ

ಹುಬ್ಬಳ್ಳಿಯಿಂದ ಬೆಂಗಳೂರಿಗೆ ಹೊರsಟಿದ್ದ ಶೆಟ್ಟರ್ ಅವರನ್ನು ಸಂಪರ್ಕಿಸಿದ ವರಿಷ್ಠರು, ತಕ್ಷಣವೇ ದೆಹಲಿಗೆ ಬರುವಂತೆ ಆದೇಶ ಮಾಡಿದರು. ವರಿಷ್ಠರ ಅಣತಿಯಂತೆ ಕೆಂಪೇಗೌಡ ಅಂತಾರಾಷ್ಟಿçÃಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಶೆಟ್ಟರ್ ಇಲ್ಲಿಂದ ದೆಹಲಿಗೆ ಪ್ರಯಾಣ ಬೆಳೆಸಿದರು. ಕೇಂದ್ರ ಗೃಹ ಸಚಿವ ಅಮಿತ್ ಷಾ, ಬಿಜೆಪಿ ರಾಷ್ಟಿçÃಯ ಅಧ್ಯಕ್ಷ ಜೆ.ಪಿ. ನಡ್ಡಾ, ಪಕ್ಷದ ರಾಷ್ಟಿçÃಯ ಸಂಘಟನಾ ಕಾರ್ಯದರ್ಶಿ ಸಂತೋಷ್
ಭೇಟಿಗೆ ಸಮಯಾವಕಾಶ ನಿಗದಿಯಾಗಿದೆ.

ಬೆಂಗಳೂರು, ನ. ೧೨(ಕೆಎಂಶಿ)- ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಮುಖ್ಯ ಮಂತ್ರಿ ಜಗದೀಶ್ ಶೆಟ್ಟರ್ ಅವರನ್ನು ಬಿಜೆಪಿ ವರಿಷ್ಠರು ದೆಹಲಿಗೆ ತುರ್ತಾಗಿ ಕರೆಸಿಕೊಂಡಿದ್ದಾರೆ.
ಹುಬ್ಬಳ್ಳಿಯಿಂದ ಬೆಂಗಳೂರಿಗೆ ಹೊರ ಟಿದ್ದ ಶೆಟ್ಟರ್ ಅವರನ್ನು ಸಂಪರ್ಕಿಸಿದ ವರಿಷ್ಠರು, ತಕ್ಷಣವೇ ದೆಹಲಿಗೆ ಬರುವಂತೆ ಆದೇಶ ಮಾಡಿದರು. ವರಿಷ್ಠರ ಅಣತಿ ಯಂತೆ ಕೆಂಪೇಗೌಡ ಅಂತಾರಾಷ್ಟಿçÃಯ ವಿಮಾನ ನಿಲ್ದಾಣದಿಂದಲೇ ದೆಹಲಿಗೆ ಪ್ರಯಾಣ ಬೆಳೆಸಿದರು. ಕೇಂದ್ರ ಗೃಹ ಸಚಿವ ಅಮಿತ್ ಷಾ, ಬಿಜೆಪಿ ರಾಷ್ಟಿçÃಯ ಅಧ್ಯಕ್ಷ ಜೆ.ಪಿ. ನಡ್ಡಾ, ಪಕ್ಷದ ರಾಷ್ಟಿçÃಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಭೇಟಿಗೆ ಸಮಯಾವಕಾಶ ನಿಗದಿಯಾಗಿದೆ.ಕರ್ನಾಟಕದ ಬಿಜೆಪಿ ಸರ್ಕಾರದ ಕೆಲವು ಆಡಳಿತಗಾರರ ಮೇಲೆ ಬಿಟ್ ಕಾಯಿನ್ ಹಗರಣದ ಆರೋಪ ಕೇಳಿ ಬಂದು, ಅಂತಾ ರಾಷ್ಟಿçÃಯ ಮಟ್ಟದಲ್ಲಿ ಪ್ರತಿಧ್ವನಿ ಸುತ್ತಿರು ವುದು ಕೇಂದ್ರ ಸರ್ಕಾರವÀನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಪ್ರಕರಣಕ್ಕೆ ಸಂಬAಧಿಸಿದAತೆ ಅಮೆರಿಕದ ತನಿಖಾ ಸಂಸ್ಥೆ ಈಗಾಗಲೇ ಭಾರತಕ್ಕೆ ಆಗಮಿಸಿ, ಮಾಹಿತಿ ಪಡೆದು ತೆರಳಿದೆ. ಬಿಟ್ ಕಾಯಿನ್ ವೆಬ್‌ಹ್ಯಾಕ್ ಸುಲಭವಲ್ಲ ಅಂದುಕೊAಡಿದ್ದ ಅಮೆರಿಕ ಆಡಳಿತ, ಈಗ ಭಾರತದಲ್ಲಿ ಇಂತಹ ದಂಧೆ ನಡೆದಿದೆ ಎಂದಾ ದರೂ ದೇಶದ ಆರ್ಥಿಕ ಸ್ಥಿತಿಯ ಮೇಲೂ ದೊಡ್ಡ ಪರಿಣಾಮ ಬೀರುತ್ತದೆ. ಇದರ ಮಾಹಿತಿಯನ್ನು ಅಲ್ಲಿನ ಆಡಳಿತ, ಭಾರತ ಸರ್ಕಾರಕ್ಕೂ ರವಾನಿಸಿದೆ. ಇದರ ಬೆನ್ನಲ್ಲೇ ಸಿಎಂ ಬೊಮ್ಮಾಯಿ ಅವರನ್ನು ದೆಹಲಿಗೆ ಕರೆಸಿಕೊಂಡಿದ್ದ ಪ್ರಧಾನಿಯವರು ವಿವರವಾದ ಮಾಹಿತಿ ಪಡೆದಿದ್ದರು. ೨ ದಿನದ ದೆಹಲಿ ಭೇಟಿ ಸಂದರ್ಭದಲ್ಲಿ ಸಿಎಂ, ಕೇಂದ್ರ ಗೃಹ ಸಚಿವರು, ಪಕ್ಷದ ರಾಷ್ಟಿçÃಯ ಅಧ್ಯಕ್ಷರನ್ನು ಭೇಟಿ ಮಾಡಿ, ಇಂದು ನಗರಕ್ಕೆ ಹಿಂತಿರುಗಿ ದ್ದಾರೆ. ಬೊಮ್ಮಾಯಿ ಅವರು, ನಗರಕ್ಕೆ ಹಿಂತಿ ರುಗುತ್ತಿದ್ದಂತೆ ಜಗದೀಶ್‌ಶೆಟ್ಟರ್ ಅವರಿಗೆ ವರಿಷ್ಠರು ತುರ್ತು ಬುಲಾವ್ ಮಾಡಿ ರುವುದು, ರಾಜ್ಯ ಬಿಜೆಪಿ ವಲಯದಲ್ಲಿ ಹಲವು ಅಭಿಪ್ರಾಯ ಗಳು ಕೇಳಿಬರುತ್ತಿವೆ. ಶೆಟ್ಟರ್ ಅವರನ್ನು ಭಾನುವಾರದವರೆಗೂ ದೆಹಲಿಯಲ್ಲೇ ಉಳಿದು ಕೊಳ್ಳುವಂತೆ ವರಿಷ್ಠರು ಸಲಹೆ ಮಾಡಿದ್ದಾರೆ ಎಂದು ಅವರ ಆಪ್ತಮೂಲಗಳು ತಿಳಿಸಿವೆ. ಬೊಮ್ಮಾಯಿ ಅವರು, ಕಳೆದ ಬುಧವಾರ ದೆಹಲಿಗೆ ತೆರಳುತ್ತಿದ್ದಂತೆ, ಇತ್ತ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆಪ್ತ ಹಾಗೂ ಮುಖ್ಯಮಂತ್ರಿ ಯವರ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ತಮ್ಮ ನಿವಾಸದಲ್ಲಿ ಕೆಲವು ಶಾಸಕರನ್ನು ಸೇರಿಸಿ, ಸಭೆ ನಡೆಸಿದರು. ಈ ಸಭೆಗೆ ಜಗದೀಶ್ ಶೆಟ್ಟರ್ ಅವರನ್ನೂ ಆಹ್ವಾನ ಮಾಡಿದ್ದರು. ದೆಹಲಿ ಬೆಳವಣ ಗೆ ಬಗ್ಗೆ ರಾಜ್ಯ ಬಿಜೆಪಿ ಮುಖಂಡರುಗಳಿಗೆ ನಾಯಕತ್ವ ಬದಲಾವಣೆ ಸಾಧ್ಯತೆ ಸುದ್ದಿ ಮುಟ್ಟಿರಬಹುದು, ಇದರ ಬೆನ್ನಲ್ಲೇ ರೇಣುಕಾಚಾರ್ಯ ತರಾತುರಿಯಲ್ಲಿ ಸಭೆ ನಡೆಸಿದ್ದರು ಎನ್ನಲಾಗಿದೆ.

Translate »