ಮಹಿಷಾ ದಸರಾ ನಿರ್ಬಂಧಿಸುವಂತೆ ಡಿಸಿಗೆ ಬಿಜೆಪಿ ಮನವಿ
ಮೈಸೂರು

ಮಹಿಷಾ ದಸರಾ ನಿರ್ಬಂಧಿಸುವಂತೆ ಡಿಸಿಗೆ ಬಿಜೆಪಿ ಮನವಿ

September 16, 2021

ಮೈಸೂರು, ಸೆ.15(ಪಿಎಂ)- ಮಹಿಷಾ ದಸರಾ ಅನುಷ್ಠಾನ ಸಮಿತಿ ಅ.5ರಂದು ಮಹಿಷಾ ದಸರಾ ಆಚರಣೆಗೆ ಸಿದ್ಧತೆ ನಡೆಸಿದೆ. ಈ ನಡುವೆ ಬುಧವಾರ ಬಿಜೆಪಿ ನಿಯೋಗ ಮಹಿಷಾ ದಸರಾ ಆಚರಣೆಗೆ ನಿರ್ಬಂಧ ವಿಧಿಸುವಂತೆ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರಿಗೆ ಮನವಿ ಸಲ್ಲಿಸಿದೆ.
ಸಮಾಜದ ಸ್ವಾಸ್ಥ್ಯ ಕೆಡಿಸುವಂತೆ ವಿಚಾರ ವಂತಿಕೆಯ ಸೋಗು ತೊಟ್ಟ ಕಿಡಿಗೇಡಿ ಗಳು ಧಾರ್ಮಿಕ ಸ್ವಾತಂತ್ರ್ಯದ ಹೆಸರಿನಲ್ಲಿ ಪರಂಪರೆಯನ್ನು ಅವಮಾನಿಸುವ ರೀತಿ ಮಹಿಷಾ ದಸರಾ ಎಂಬ ಆಚರಣೆಗೆ ನಾಂದಿ ಹಾಡಿದ್ದಾರೆ. ಆ ಮೂಲಕ ಸಮಾಜದ ಕೆಲ ವರ್ಗಗಳನ್ನು ತಪ್ಪು ಮಾಹಿತಿಯೊಂದಿಗೆ ಪ್ರಚೋದಿಸಿ ದಾರಿ ತಪ್ಪಿಸಿ, ಸಮಾಜಕ್ಕೆ ಕಂಟಕ ಪ್ರಾಯವಾಗುವ ಆಚರಣೆಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಯಾವುದೇ ನೆಪದಲ್ಲಿ ಮಹಿಷಾ ದಸರಾ ಆಚರಣೆಗೆ ಅವಕಾಶ ನೀಡದಂತೆ ಕ್ರಮ ಕೈಗೊಳ್ಳಬೇಕೆಂದು ಕೋರಲಾಗಿದೆ.

15ನೇ ಶತಮಾನದಿಂದ ನಾಡಹಬ್ಬ ವಾಗಿ ದಸರಾ ಮಹೋತ್ಸವ ಆಚರಣೆ ಇರುವುದಕ್ಕೆ ಇತಿಹಾಸವೇ ಸಾಕ್ಷಿ. ಆದರೆ ಇತ್ತೀಚಿನ ವರ್ಷಗಳಲ್ಲಿ ಪ್ರಗತಿಪರರ ವೇಷ ಧರಿಸಿ ಕೆಲವರು ಹೀನ ಭಾಷೆಯಲ್ಲಿ ಚಾಮುಂಡೇಶ್ವರಿ ತಾಯಿಯನ್ನು ನಿಂದಿಸು ವುದಲ್ಲದೆ, ಮಹಿಷಾ ದಸರಾ ಎಂಬ ವಿಕೃತ ಆಚರಣೆ ಮಾಡುತ್ತಿದ್ದಾರೆ. ಇದು ಸಮಾಜದ ಐಕ್ಯತೆ ಮತ್ತು ಬಾಂಧವ್ಯಕ್ಕೆ ಭಂಗ ತರುವ ಬೆಳವಣಿಗೆಯಾಗಿದೆ. ಇತಿಹಾಸ ಕುರಿತು ಸುಳ್ಳು ಸೃಷ್ಟಿಸಿ ಸಮಾಜವನ್ನು ತಪ್ಪುದಾರಿಗೆ ಎಳೆಯುವ ಇಂತಹವರ ಬಗ್ಗೆ ವ್ಯವಸ್ಥೆ ಎಚ್ಚರದಿಂದ ಇರಬೇಕಾಗುತ್ತದೆ.

ನಾಡಿನ ಅಧಿದೇವತೆ ಎಂದು ಭಾವಿಸಿ ಭಕ್ತಿಭಾವದಿಂದ ಪೂಜಿಸಿ ಆರಾಧಿಸುವ ಚಾಮುಂಡೇಶ್ವರಿ ತಾಯಿಯನ್ನು ಅವ ಹೇಳನಕಾರಿಯಾಗಿ ಬಿಂಬಿಸಿ, ಮಹಿಷಾ ದಸರಾ ಆಚರಿಸುವುದು ನಾಡಿನ ಮಹಿಳಾ ಸಮುದಾಯದ ಘನತೆಗೆ ಚ್ಯುತಿ ತರಲಿದೆ. ಹಾಗಾಗಿ ಮಹಿಷಾ ದಸರಾ ಆಚರಿಸದಂತೆ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು. ಆದೇಶ ಉಲ್ಲಂಘಿಸಿದರೆ ಕಠಿಣ ಶಿಕ್ಷೆ ವಿಧಿಸುವ ಮೂಲಕ ದಸರಾ ಮಹೋತ್ಸವದ ಐತಿ ಹಾಸಿಕ ಮಹತ್ವದ ಬಗ್ಗೆ ಇರುವ ಗೌರವ ಕಾಪಾಡಬೇಕೆಂದು ಕೋರಲಾಗಿದೆ. ಈ ಸಂದರ್ಭದಲ್ಲಿ ಹಿರಿಯ ವಕೀಲ ಓ.ಶ್ಯಾಂ ಭಟ್, ಬಿಜೆಪಿ ಮುಖಂಡರಾದ ಸಿ.ಹೆಚ್. ವಿಜಯಶಂಕರ್, ಮೈ.ವಿ.ರವಿಶಂಕರ್ ಮತ್ತಿತರರು ಮನವಿ ಪತ್ರ ಸಲ್ಲಿಸಿದರು.

Translate »