ಹಿರಿಯ ಕಾಂಗ್ರೆಸ್ ನಾಯಕ ಆಸ್ಕರ್ ಫರ್ನಾಂಡಿಸ್‍ಗೆ  ಮೈಸೂರು ಕಾಂಗ್ರೆಸ್ ಭಾವಪೂರ್ಣ ಶ್ರದ್ಧಾಂಜಲಿ
ಮೈಸೂರು

ಹಿರಿಯ ಕಾಂಗ್ರೆಸ್ ನಾಯಕ ಆಸ್ಕರ್ ಫರ್ನಾಂಡಿಸ್‍ಗೆ ಮೈಸೂರು ಕಾಂಗ್ರೆಸ್ ಭಾವಪೂರ್ಣ ಶ್ರದ್ಧಾಂಜಲಿ

September 15, 2021

ಮೈಸೂರು, ಸೆ.14(ಆರ್‍ಕೆಬಿ)- ಸೋಮ ವಾರ ನಿಧನರಾದ ಹಿರಿಯ ಕಾಂಗ್ರೆಸ್ ನಾಯಕ ಆಸ್ಕರ್ ಫರ್ನಾಂಡಿಸ್ ಅವರಿಗೆ ಮೈಸೂರು ಜಿಲ್ಲಾ ಕಾಂಗ್ರೆಸ್ ಮಂಗಳ ವಾರ ಶ್ರದ್ಧಾಂಜಲಿ ಸಲ್ಲಿಸಿತು. ಕಾಂಗ್ರೆಸ್ ಭವನದಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಮಾಜಿ ಸಂಸದ ಕಾಗಲವಾಡಿ ಎಂ.ಶಿವಣ್ಣ, ಮಾಜಿ ಶಾಸಕರಾದ ಎಂ.ಕೆ.ಸೋಮ ಶೇಖರ್, ಕಳಲೆ ಕೇಶವಮೂರ್ತಿ ಇನ್ನಿತರರು, ಆಸ್ಕರ್ ಫರ್ನಾಂಡಿಸ್ ಕಾಂಗ್ರೆಸ್ ಸೇವೆಯನ್ನು ಸ್ಮರಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ ನೇತೃತ್ವದಲ್ಲಿ ಇದೇ ವೇಳೆ ಪುಷ್ಪನಮನ ಸಲ್ಲಿಸಲಾಯಿತು.

ಬಳಿಕ ಮಾತನಾಡಿದ ಸಂಸದ ಕಾಗಲ ವಾಡಿ ಎಂ.ಶಿವಣ್ಣ, ಕಾಂಗ್ರೆಸ್ ಪಕ್ಷದ ಅಪ್ರತಿಮ ನಾಯಕರಲ್ಲಿ ಒಬ್ಬರಾಗಿದ್ದ ಆಸ್ಕರ್ ಫರ್ನಾಂ ಡಿಸ್ ಅವರೊಂದಿಗಿನ ಒಡನಾಟ, ಸಂಸತ್ ನಲ್ಲಿ ಕಳೆದ ದಿನಗಳನ್ನು ನೆನಪಿಸಿಕೊಂ ಡರು. ಸ್ವಲ್ಪವೂ ಗರ್ವವಿಲ್ಲದೆ, ಎಲ್ಲರನ್ನೂ ಸಮಾನವಾಗಿ ಕಾಣುತ್ತಿದ್ದ ಅವರ ನಿಧನ ದಿಂದ ಕಾಂಗ್ರೆಸ್ ಹಿರಿಯ ನಾಯಕನನ್ನು ಕಳೆದುಕೊಂಡು ಅನಾಥವಾದಂತಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ದೊರೆಯಲಿ ಎಂದು ಪ್ರಾರ್ಥಿಸಿದರು.

ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಮಾತನಾಡಿ, ನಿಷ್ಠಾವಂತ ಕಾಂಗ್ರೆಸಿಗ, ಪಕ್ಷದ ಅಭಿವೃದ್ಧಿ ಜೊತೆಗೆ ಜನರ ಕಷ್ಟಗಳಿಗೆ ಸ್ಪಂದಿಸುವ ಗುಣ ಸ್ವಭಾವ ಹೊಂದಿದ್ದರು. ರಾಜ್ಯ, ರಾಷ್ಟ್ರದ ಶ್ರೇಷ್ಠ ನಾಯಕ, ಕಾಂಗ್ರೆಸ್‍ಗೆ ಅತ್ಯಂತ ಕೊಡುಗೆ ನೀಡಿದವರು. ಕಾರ್ಮಿಕ ಹಾಗೂ ಹೆದ್ದಾರಿ, ಭೂ ಸಾರಿಗೆ ಸಚಿವರಾಗಿ ರಾಜ್ಯ ಹೆದ್ದಾರಿಗಳಾಗಿದ್ದ 4600 ಕಿ.ಮೀ. ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತಿಸಿದವರು. ಆರ್.ಧ್ರುವನಾರಾ ಯಣ್ ಸಂಸದರಾಗಿದ್ದ ವೇಳೆ ಬೆಂಗ ಳೂರು-ಮೈಸೂರು ಎಕ್ಸ್‍ಪ್ರೆಸ್ ಹೆದ್ದಾರಿ ಸೇರಿದಂತೆ ಅನೇಕ ಹೆದ್ದಾರಿಗಳನ್ನು ನೀಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಸಮರ್ಪಣಾ ಮನೋಭಾವದಿಂದ ರಾಜ್ಯಕ್ಕೆ, ರಾಷ್ಟ್ರಕ್ಕೆ ಅತ್ಯು ತ್ತಮ ಕೆಲಸ ಮಾಡಿದ್ದಾರೆ. ಅಂತಹ ನಾಯಕ ರನ್ನು ಕಳೆದುಕೊಂಡು ಕಾಂಗ್ರೆಸ್ ಅನಾಥ ವಾಗಿದೆ. ಅವರ ಜೀವನದ ಹಾದಿ ನಮ್ಮೆಲ್ಲ ರಿಗೂ ಮಾರ್ಗದರ್ಶಕವಾಗಲಿ ಎಂದರು.

ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಕೆಪಿಸಿಸಿ ವಕ್ತಾರ ಎಚ್.ಎ.ವೆಂಕಟೇಶ್, ಕೆಪಿಸಿಸಿ ಸೇವಾದಳದ ಪ್ಯಾರಿಜಾನ್ ಸೇರಿ ದಂತೆ ಅನೇಕರು ಆಸ್ಕರ್ ಅವರ ನಿಧನಕ್ಕೆ ದುಃಖ ವ್ಯಕ್ತಪಡಿಸಿದರು. ಸಭೆಯಲ್ಲಿ ಕೆಪಿ ಸಿಸಿ ವಕ್ತಾರರಾದ ಎಂ.ಲಕ್ಷ್ಮಣ, ಮಂಜುಳಾ ಮಾನಸ, ಮಹಿಳಾ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷೆ ಪುಷ್ಪವಲ್ಲಿ, ಮಾಜಿ ಮೇಯರ್ ಪುಷ್ಪಲತಾ ಚಿಕ್ಕಣ್ಣ, ಪಕ್ಷದ ಪದಾಧಿಕಾರಿ ಗಳಾದ ಎಂ.ಶಿವಣ್ಣ, ಈಶ್ವರ ಚಕ್ಕಡಿ, ಡೈರಿ ವೆಂಕಟೇಶ್, ಉತ್ತನಹಳ್ಳಿ ಶಿವಣ್ಣ, ಸುಂದರ ಕುಮಾರ್, ಜಿ.ಸೋಮಶೇಖರ್, ಯಡತಲೆ ಮಂಜುನಾಥ್, ಶಿವಪ್ರಸಾದ್, ಟಿ.ಬಿ.ಚಿಕ್ಕಣ್ಣ, ಗಿರೀಶ್ ಇತರರು ಉಪಸ್ಥಿತರಿದ್ದರು.

Translate »