ರಾಮಸಮುದ್ರದಲ್ಲಿ ಅರಳಿದ ‘ಕಮಲ’
ಚಾಮರಾಜನಗರ

ರಾಮಸಮುದ್ರದಲ್ಲಿ ಅರಳಿದ ‘ಕಮಲ’

September 5, 2018

ಚಾಮರಾಜನಗರ: ಸ್ಥಳೀಯ ನಗರಸಭಾ ವ್ಯಾಪ್ತಿಗೆ ಚಾಮರಾಜನಗರ, ರಾಮಸಮುದ್ರ, ಸೋಮವಾರ ಪೇಟೆ, ಕರಿನಂಜನಪುರ, ಮೂಡ್ಲುಪುರ ಬಡಾವಣೆಗಳು ಸೇರಿವೆ. ಈ ಪೈಕಿ 5 ವಾರ್ಡ್ ಹೊಂದಿರುವ ರಾಮಸಮುದ್ರ ದಲ್ಲಿ ಬಿಜೆಪಿಯ ‘ಕಮಲ’ 3 ವಾರ್ಡ್‍ನಲ್ಲಿ ಅರಳಿದೆ.

ರಾಮಸಮುದ್ರ ಬಡಾವಣೆ 27ರಿಂದ 31ನೇ ವಾರ್ಡ್ (5 ವಾರ್ಡ್‍ಗಳು) ಹೊಂದಿದೆ. ಇದರಲ್ಲಿ ಬಿಜೆಪಿ 28, 29, 30ನೇ ವಾರ್ಡ್‍ನಲ್ಲಿ ಗೆಲುವು ಸಾಧಿಸಿದೆ. ಉಳಿದ 27ನೇ ವಾರ್ಡ್ ನಲ್ಲಿ ಬಿಎಸ್‍ಪಿ, 31ನೇ ವಾರ್ಡ್‍ನಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಕಳೆದ ನಗರಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ಬಿಎಸ್‍ಪಿ, ವಾಟಾಳ್ ಪಕ್ಷ ತಲಾ ಒಂದು ಸ್ಥಾನ. ಪಕ್ಷೇತರರು 2 ಸ್ಥಾನ ಗಳಿಸಿದ್ದರು. ಈ ಬಾರಿ ಮೂರು ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಿರುವುದು ವಿಶೇಷ.

ಸೋಮವಾರಪೇಟೆ ಎರಡು ವಾರ್ಡ್ ಹೊಂದಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ತಲಾ ಒಂದೊಂದು ಸ್ಥಾನದಲ್ಲಿ ಗೆಲುವು ಸಾಧಿಸಿದೆ. ಮೂಡ್ಲುಪುರ ಹಾಗೂ ಕರಿನಂಜನಪುರ ತಲಾ ಒಂದು ವಾರ್ಡ್ ಹೊಂದಿದ್ದು ಅಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.

Translate »