ಇಂದು ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ
ಚಾಮರಾಜನಗರ

ಇಂದು ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ

September 5, 2018

ಚಾಮರಾಜನಗರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಜಿಲ್ಲಾ ಹಾಗೂ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಮತ್ತು ಉತ್ತಮ ಶಿಕ್ಷಕರ ಪ್ರಶಸ್ತಿ ಪ್ರದಾನ ಸಮಾರಂಭವು ಸೆ.5ರಂದು ಬೆಳಿಗ್ಗೆ 10 ಗಂಟೆಗೆ ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಕಿರಿಯ ಪ್ರಾಥಮಿಕ ಶಾಲಾ ವಿಭಾಗ: ಚಾಮರಾಜನಗರ ತಾಲೂಕು: ಎಂ. ಡಿ. ಮಹದೇವಯ್ಯ, ಸಹ ಶಿಕ್ಷಕರು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಯಡಪುರ, ಗುಂಡ್ಲುಪೇಟೆ ತಾಲೂಕು: ಜಯರಾಮು, ಸಹ ಶಿಕ್ಷಕರು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಮುಂಟಿಪುರ, ಕೊಳ್ಳೇಗಾಲ ತಾಲೂಕು: ಡಿ. ಮಹಾದೇವ, ಪ್ರಭಾರ ಮುಖ್ಯ ಶಿಕ್ಷಕರು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಮೆಲ್ಲಳ್ಳಿಮಾಳ, ಹನೂರು ತಾಲ್ಲೂಕು: ತನುಜ ಫಾತೀಮ ಬ್ರಿಟ್ಟೋ, ಸಹ ಶಿಕ್ಷಕರು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಕಂಡಯ್ಯನಪಾಳ್ಯ, ಯಳಂದೂರು ತಾಲ್ಲೂಕು: ಕೆ. ಪುಟ್ಟಿ, ಸಹ ಶಿಕ್ಷಕರು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಮದ್ದೂರು.
ಹಿರಿಯ ಪ್ರಾಥಮಿಕ ಶಾಲಾ ವಿಭಾಗ: ಚಾಮರಾಜನಗರ ತಾಲೂಕು: ಆರ್. ಚಿಕ್ಕಬಸವ, ಮುಖ್ಯ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸಿದ್ದಯ್ಯನಪುರ. ಗುಂಡ್ಲುಪೇಟೆ ತಾಲೂಕು: ಲತ್ತೀಶ್ಯ ಚಿನ್ನಪ್ಪ, ದೈಹಿಕ ಶಿಕ್ಷಣ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೆಲಸೂರು, ಕೊಳ್ಳೇಗಾಲ ತಾಲೂಕು: ಎಸ್. ನಾಗರಾಜು, ಪ್ರಭಾರ ಮುಖ್ಯ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಭೀಮನಗರ. ಹನೂರು ತಾಲ್ಲೂಕು: ಎಸ್. ಕೃಷ್ಣ, ಬಡ್ತಿ ಮುಖ್ಯ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ದಿನ್ನಹಳ್ಳಿ, ಯಳಂದೂರು ತಾಲ್ಲೂಕು: ನಂಜುಂಡಸ್ವಾಮಿ, ಪ್ರಭಾರ ಮುಖ್ಯ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೆಸ್ತೂರು-2.

ಪ್ರೌಢಶಾಲಾ ವಿಭಾಗ: ಚಾಮರಾಜನಗರ ತಾಲೂಕು: ಕೆಂಪಣ್ಣ, ಸಹ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ದೊಡ್ಡರಾಯಪೇಟೆ, ಗುಂಡ್ಲುಪೇಟೆ ತಾಲೂಕು: ಮಹದೇವಸ್ವಾಮಿ, ಸಹ ಶಿಕ್ಷಕರು, ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ), ಬೇಗೂರು. ಕೊಳ್ಳೇಗಾಲ ತಾಲೂಕು: ಚಿಕ್ಕರಾಜು, ಹಿಂದಿ ಭಾಷಾ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ದೊಡ್ಡಿಂದವಾಡಿ, ಹನೂರು ತಾಲ್ಲೂಕು: ಪಿ.ಸಿ. ನಿರ್ಮಲ, ಸಹ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ರಾಮಾಪುರ, ಯಳಂದೂರು ತಾಲ್ಲೂಕು: ಪಿ.ಬಿ. ಲಕ್ಷ್ಮಿ, ಸಹ ಶಿಕ್ಷಕರು, ಬಾಲಕಿಯರ ಸರ್ಕಾರಿ ಪ್ರೌಢ ಶಾಲೆ, ಯಳಂದೂರು ಇವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

Translate »