ಶಿಕ್ಷಕರ ದಿನಾಚರಣೆ: ಮೈಸೂರು ಜಿಲ್ಲೆ 26 ಪ್ರತಿಭಾನ್ವಿತ ಶಿಕ್ಷಕರಿಗೆ `ಉತ್ತಮ ಶಿಕ್ಷಕ’ ಪ್ರಶಸ್ತಿ
ಮೈಸೂರು

ಶಿಕ್ಷಕರ ದಿನಾಚರಣೆ: ಮೈಸೂರು ಜಿಲ್ಲೆ 26 ಪ್ರತಿಭಾನ್ವಿತ ಶಿಕ್ಷಕರಿಗೆ `ಉತ್ತಮ ಶಿಕ್ಷಕ’ ಪ್ರಶಸ್ತಿ

September 6, 2018

ಮೈಸೂರು: ಮಾಜಿ ರಾಷ್ಟ್ರಪತಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನದ ಅಂಗವಾಗಿ ಕಿರಿಯ, ಪ್ರಾಥಮಿಕ ಹಾಗೂ ಪ್ರೌಢಶಾಲೆಯ 26 ಪ್ರತಿಭಾವಂತ ಶಿಕ್ಷಕರಿಗೆ ಜಿಲ್ಲಾ ಮಟ್ಟದ `ಉತ್ತಮ ಶಿಕ್ಷಕ’ ಪ್ರಶಸ್ತಿಯನ್ನು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಪ್ರದಾನ ಮಾಡಿದರು.

ಮೈಸೂರಿನ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಿಕ್ಷಕರ ಮತ್ತು ಮಕ್ಕಳ ಕಲ್ಯಾಣ ನಿಧಿ ಬೆಂಗಳೂರು, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಡಾ. ಎಸ್.ರಾಧಾಕೃಷ್ಣನ್ ಜನ್ಮ ದಿನಾಚರಣೆ ಅಂಗ ವಾಗಿ 26 ಮಂದಿ ಶಿಕ್ಷಕರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಹಾಗೂ 67 ಮಂದಿ ನಿವೃತ್ತ ಶಿಕ್ಷಕರನ್ನು ಅಭಿನಂದಿಸಲಾಯಿತು.

ಸರ್ಕಾರಿ ಶಾಲಾ ಶಿಕ್ಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೇ ಸೇರಿಸುವ ಬಗ್ಗೆ ಗಂಭೀರ ಚಿಂತನೆ ಮಾಡಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳ ಉಳಿವು ಕಷ್ಟವಾಗ ಲಿದೆ. ಸಮಾಜದಲ್ಲಿ ನಿಮ್ಮ ಕರ್ತವ್ಯದ ಮೇಲೆ ಅಪನಂಬಿಕೆ ಹೆಚ್ಚಾಗಿ, ಇದು ಸರ್ಕಾರಿ ಶಾಲೆಗಳ ಶೈಕ್ಷಣಿಕ ಚಟುವಟಿಕೆಗಳ ಮೇಲೆ ಗಂಭೀರ ಪರಿ ಣಾಮ ಬೀರುತ್ತದೆ ಎಂದು ಆತಂಕ ವ್ಯಕ್ತಪಡಿ ಸಿದರು. ಮಾಜಿ ರಾಷ್ಟ್ರಪತಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆಯ ಅಂಗವಾಗಿ ದೇಶಾದ್ಯಂತ ಶಿಕ್ಷಕರ ದಿನಾಚರಣೆ ಆಚರಿಸಲಾಗುತ್ತಿದೆ. ಡಾ.ರಾಧಾಕೃಷ್ಣನ್ ಅವರು, ಮೈಸೂರು ವಿವಿಯಲ್ಲಿ ಪ್ರಾಧ್ಯಾಪಕರಾಗಿದ್ದ ಸಂದರ್ಭ ದಲ್ಲಿ ಅಂದಿನ ವಿದ್ಯಾರ್ಥಿಗಳನ್ನು ತಮ್ಮ ಪಾಠ-ಪ್ರವಚನದ ಮೂಲಕ ಸೂಜಿಗಲ್ಲಿ ನಂತೆ ಸೆಳೆಯು ತ್ತಿದ್ದರು. ಅವರು ಬೇರೆಡೆಗೆ ವರ್ಗಾವಣೆಗೊಂಡಾಗ ಮಹಾರಾಜ ಕಾಲೇಜಿನ ಅಂದಿನ ವಿದ್ಯಾರ್ಥಿಗಳು, ಪ್ರಾಧ್ಯಾಪಕರೆಲ್ಲಾ ಒಟ್ಟುಗೂಡಿ ಸಾರೋಟದಲ್ಲಿ ರೈಲ್ವೆ ನಿಲ್ದಾಣದವರೆಗೆ ಪ್ರೀತಿಯಿಂದ ಬೀಳ್ಕೊಟ್ಟ ಸನ್ನಿವೇಶ ಎಲ್ಲರಿಗೂ ತಿಳಿದ ಅಂಶ. ಹಾಗೆಯೇ ಹಿಂದಿನ ಕಾಲದ ಪ್ರಾಥಮಿಕ ಶಾಲಾ ಶಿಕ್ಷಕರು, ಗ್ರಾಮಾಂತರ ಪ್ರದೇಶದಲ್ಲಿ ಕಾಲ್ನಡಿಗೆಯಲ್ಲಿ ಶಾಲೆ ತಲುಪಿ, ಮಕ್ಕಳಿಗೆ ಉತ್ತಮ ಪಾಠ ಪ್ರವಚನ ಮಾಡುತ್ತಿದ್ದ ಸನ್ನಿವೇಶವನ್ನು ಇಂದಿನ ಪೀಳಿಗೆಯವರು ನೆನೆಯುತ್ತಾರೆ ಎಂದರು.

ಪ್ರಾಥಮಿಕ ಶಾಲಾ ಹಂತದಲ್ಲಿ ಮಕ್ಕಳಿಗೆ ಉತ್ತಮ ಅಕ್ಷರಾಭ್ಯಾಸ ಮಾಡಿಸಿದರೆ ಮಾತ್ರ ಉನ್ನತ ಶಿಕ್ಷಣದಲ್ಲಿ ಉತ್ತಮ ಅಧ್ಯಯನ ನಡೆಸಲು ಸಾಧ್ಯ ಎಂದ ಸಚಿವರು, ಮೈಸೂರು ಜಿಲ್ಲೆಯಲ್ಲಿ ಶಾಲಾ-ಕಾಲೇಜು ಕಟ್ಟಡಗಳು ಶಿಥಿಲಗೊಂಡಿದ್ದರೆ, ಅಂತಹ ಶಾಲೆಗಳ ಬಗ್ಗೆ ಆಯಾಯ ತಾಲೂಕಿನ ಬಿಇಓ, ಡಿಡಿಪಿಐಗಳ ಮೂಲಕ ರಾಜ್ಯ ಸರ್ಕಾರಕ್ಕೆ ಕಳುಹಿಸಿಕೊಟ್ಟರೆ, ದುರಸ್ಥಿ ಮಾಡಿಸಲು ರಾಜ್ಯ ಸರ್ಕಾರ ಸಿದ್ದವಿದೆ. ಇದರ ಬಗ್ಗೆ ಡಿಡಿಪಿಐಗಳಿಗೆ ತಿಳಿಸಿ, ತಿಂಗಳೇ ಕಳೆದರೂ ಇಲ್ಲಿಯವರೆಗೂ ಶಾಲಾ ದುರಸ್ಥಿ ಕಾರ್ಯದ ಬಗ್ಗೆ ವರದಿ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕಿರಿಯ ಪ್ರಾಥಮಿಕ ಶಾಲಾ ವಿಭಾಗ: ಹುಣಸೂರು ತಾಲೂಕಿನ ಶ್ರವಣನಹಳ್ಳಿ ಶಾಲೆಯ ಮುಖ್ಯಶಿಕ್ಷಕ ಹೆಚ್.ಕೆ.ಚಂದ್ರನಾಯಕ್, ಕೆ.ಆರ್.ನಗರ ತಾಲೂಕಿನ ತಂದ್ರೆ ಗ್ರಾಮದ ಶಾಲೆಯ ಪ್ರಭಾರ ಮುಖ್ಯಶಿಕ್ಷಕ ಮಹೇಶ್, ಜಯನಗರ ಶಾಲೆಯ ಸಹ ಶಿಕ್ಷಕಿ ಎಂ.ಡಿ.ಉಮಾದೇವಿ, ಶ್ಯಾದನಹಳ್ಳಿ ಶಾಲೆಯ ಶಿಕ್ಷಕ ಡಿ.ಮಹದೇವ, ಪಿರಿಯಾಪಟ್ಟಣ ತಾಲೂಕಿನ ತಿಮಕಾಪುರ ಶಾಲೆಯ ಪ್ರಭಾರ ಮುಖ್ಯಶಿಕ್ಷಕ ಟಿ.ಕುಮಾರ್, ನಂಜನಗೂಡು ತಾಲೂಕು ಬಸವಟ್ಟಿಗೆ ಶಾಲೆಯ ಪ್ರಭಾರ ಮುಖ್ಯಶಿಕ್ಷಕ ಎಸ್.ನಾಗರಾಜು, ಟಿ.ನರಸೀಪುರ ತಾಲೂಕಿನ ತಲಕಾಡು ಎ.ಜೆ.ಕಾಲೋನಿ ಶಾಲೆಯ ಪ್ರಭಾರ ಮುಖ್ಯಶಿಕ್ಷಕ ಎಂ.ಕೊಂಗಯ್ಯ, ಟಿ.ಕುಮಾರ್, ಮಂಡಿ ಅಹಮದಿಯ ಉರ್ದು ಶಾಲೆಯ ಶಿಕ್ಷಕಿ ಎಸ್.ಶಾಹೀನ ಅವರಿಗೆ ಜಿಲ್ಲಾಮಟ್ಟದ `ಉತ್ತಮ ಶಿಕ್ಷಕ’ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು.

ಹಿರಿಯ ಪ್ರಾಥಮಿಕ ಶಾಲಾ ವಿಭಾಗ: ಹೆಚ್.ಡಿ.ಕೋಟೆ ತಾಲೂಕು ಹಳೆಯೂರು ಶಾಲಾ ಶಿಕ್ಷಕ ಎಂ.ಕೆ. ಮಂಜುನಾಥ, ಹುಣಸೂರು ತಾಲೂಕು ದೇವಗಳ್ಳಿ ಶಾಲೆಯ ಜಿ.ಆರ್.ಶಶಿಕಲಾ, ವಿನಾಯಕನಗರ ಶಾಲೆಯ ಶಿಕ್ಷಕಿ ಪದ್ಮ, ವಸಂತನಗರದ ಶಾಲೆಯ ಮುಖ್ಯಶಿಕ್ಷಕ ವಿ.ಗೋಪಾಲಯ್ಯ, ಮೈಸೂರು ತಾಲೂಕು ನೆಹರು ನಗರ ಶಾಲೆಯ ಶಿಕ್ಷಕ ರೂಹೆ ಅಪ್ಜ್, ನಂಜನಗೂಡು ತಾಲೂಕಿನ ಕಳಲೆ ಶಾಲೆ ಶಿಕ್ಷಕಿ ಹೆಚ್.ವಿ. ಕೇಶವಮೂರ್ತಿ, ಪಿರಿಯಾಪಟ್ಟಣ ತಾಲೂಕಿನ ಮಾಲಂಗಿ ಶಾಲೆಯ ಮುಖ್ಯಶಿಕ್ಷಕ ಎಸ್.ಎಸ್.ಜಗದೀಶ, ಟಿ.ನರಸೀಪುರ ತಾಲೂಕಿನ ರಂಗಸಮುದ್ರ ಮುಖ್ಯಶಿಕ್ಷಕ ಸಿ.ಎನ್.ಶಿವಣ್ಣ, ಕೆ.ಆರ್.ನಗರ ತಾಲೂಕಿನ ಕಗ್ಗರೆ ಶಾಲೆಯ ಶಿಕ್ಷಕ ಮೋಹನ್‍ಕುಮಾರ್ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು.
ಪ್ರೌಢಶಾಲಾ ವಿಭಾಗ: ಹೆಚ್.ಡಿ.ಕೋಟೆ ತಾಲೂಕು ಹೊಮ್ಮರಗಳ್ಳಿ ಶಾಲೆಯ ಶಿಕ್ಷಕ ಜಿ.ನಂಜುಂಡಸ್ವಾಮಿ, ಕೆ.ಆರ್.ನಗರ ತಾಲೂಕಿನ ತಂದ್ರೆ ಶಾಲೆಯ ಶಿಕ್ಷಕ ಎಸ್.ಬಿ.ಜಗದೀಶ್, ಮೈಸೂರಿನ ಶ್ರೀಕಾಂತ ಬಾಲಿಕಾ ಪ್ರೌಢಶಾಲೆಯ ಶಿಕ್ಷಕಿ ಜಿ.ಗಾಯತ್ರಿ, ಮೈಸೂರು ತಾಲೂಕಿನ ಸಿದ್ದರಾಮನಹುಂಡಿ ಶಾಲೆಯ ದೈಹಿಕ ಶಿಕ್ಷಕ ಮಾಯಾಂಗ, ನಂಜನಗೂಡು ತಾಲೂಕಿನ ಬದನವಾಳು ಗ್ರಾಮದ ಶ್ರೀಶಿವಯೋಗಿ ಸ್ವಾಮಿ ಶಾಲೆಯ ಮುಖ್ಯಶಿಕ್ಷಕ ಎಂ.ಪಿ.ನಟರಾಜು, ಟಿ.ನರಸೀಪುರ ತಾಲೂಕಿನ ಮುಸುವಿನ ಕೊಪ್ಪಲು ಶಾಲೆಯ ಚಿತ್ರಕಲಾ ಶಿಕ್ಷಕ ಕೆ.ಸುರೇಶ್, ಪಿರಿಯಾಪಟ್ಟಣ ತಾಲೂಕು ಬೆಟ್ಟದಪುರ ಶಾಲೆಯ ದೈಹಿಕ ಶಿಕ್ಷಕ ಎ.ಎಸ್.ನಾರಾಯಣಗೌಡ, ಮೇದರ್ ಬ್ಲಾಕ್ ಶಾಲಾ ಶಿಕ್ಷಕ ಎ.ಎಸ್.ಬಸವಣ್ಣ, ಹುಣಸೂರು ತಾಲೂಕಿನ ಕೊತ್ತೇಗಾಲ ಶಾಲೆಯ ದೈಹಿಕ ಶಿಕ್ಷಕ ವಿ.ಯೋಗಿಂದ್ರ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು.
ವೇದಿಕೆಯಲ್ಲಿ ಮಾಜಿ ವೈದ್ಯಕೀಯ ಶಿಕ್ಷಣ ಸಚಿವರೂ ಆದ ಶಾಸಕ ಎಸ್.ಎ. ರಾಮದಾಸ್, ಶಾಸಕರಾದ ಎಲ್.ನಾಗೇಂದ್ರ, ವಿಧಾನ ಪರಿಷತ್ ಸದಸ್ಯರಾದ ಮರಿತಿಬ್ಬೇ ಗೌಡ, ಕೆ.ಟಿ.ಶ್ರೀಕಂಠೇಗೌಡ, ಜಿಪಂ ಅಧ್ಯಕ್ಷೆ ನಯಿಮಾಸುಲ್ತಾನ ನಜೀರ್ ಅಹಮದ್, ಉಪಾಧ್ಯಕ್ಷ ಜಿ.ನಟರಾಜ್, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಇತರರಿದ್ದರು.

Translate »